ನಟಿ ರಮ್ಯಾ ಅವರ ಚಿತ್ರ ಬದುಕಿನಲ್ಲಿ ವಿಧಿ ಈ ರೀತಿ ಆಟವಾಡಬಾರದಿತ್ತು
ಇದನ್ನ ಅದ್ಯಾವ ರೀತಿಯ ಅನ್ ಲಕ್ ಅನ್ನಬೇಕೋ ಗೊತ್ತಿಲ್ಲ. ರಮ್ಯಾ ಅವರ ಕನಸು ಇನ್ನೇನು ಕೈಗೂಡುತ್ತದೆ. ಮೋಹಕ ತಾರೆಯನ್ನು ಚಿತ್ರಮಂದಿರದಲ್ಲಿ ಅಭಿಮಾನಿಗಳು ಕಣ್ತುಂಬಿಕೊಳ್ತಾರೆ ಅನ್ನುವ ಹೊತ್ತಿಗೆ ಸಿಕ್ಕಿದ್ದು ಕಹಿ ಸುದ್ದಿ. ರಾಜ್ ಬಿ ಶೆಟ್ಟಿ ನಿರ್ದೇಶಿಸಿ ನಾಯಕರಾಗಿರುವ ಚಿತ್ರವೊಂದರಲ್ಲಿ ರಮ್ಯಾ ನಾಯಕಿಯಾಗಿ ಕಾಣಿಸಿಕೊಳ್ತಾರೆ ಅನ್ನುವ ಸುದ್ದಿಗಳು ಹರಿದಾಡಿತ್ತು.
ಆದರೆ ಕೆಲವೇ ದಿನಗಳಲ್ಲಿ ರಮ್ಯ ರಾಜ್ ಶೆಟ್ರ ಜೊತೆ ನಟಿಸೋದಿಲ್ವಂತೆ ಅನ್ನೋ ಸುದ್ದಿ ಬಂತು. ಅದ್ಯಾಕೆ ನಟಿಸುತ್ತಿಲ್ಲ ಅಂದ್ರೆ ಸಿಕ್ಕ ಕಾರಣಗಳು ನೂರಾರು ಅಲ್ಲ, ಸಾವಿರಾರು. ರಮ್ಯಾ ಜಂಭದಕೋಳಿ ಎಂದು ಹಲವಾರು ಮಂದಿ ಟೀಕಿಸಿದರು ಕೂಡಾ. ಸ್ಟಾರ್ ನಟರಿಗೆ ಮಾತ್ರ ಮಣೆ ಹಾಕ್ತಾರೆ ಎಂದು ದೂರಿದ್ರು. ಆದರೆ ಈಗ ಸತ್ಯ ಬಯಲಾಗಿದೆ.
ಇದನ್ನೂ ಓದಿ : ಬಿಗ್ ಬಾಸ್ ಮನೆಯಲ್ಲಿ ಪೊಲೀಸರಿಂದ ಡ್ರೋನ್ ಪ್ರತಾಪ್ ( Drone Prathap ) ವಿಚಾರಣೆ
ರಮ್ಯಾ ಅವರೇ ಈ ಬಗ್ಗೆ ಮಾತನಾಡಿದ್ದು, “ರಾಜ್ ಬಿ ಶೆಟ್ಟರು ಮೊದಲು ಕತೆ ಹೇಳಿದಾಗ ಬಹಳ ಭಾವುಕಳಾದೆ. ಕತೆಯಲ್ಲಿನ ಡೀಟೇಲಿಂಗ್ ತುಂಬಾ ಇಷ್ಟವಾಗಿತ್ತು. ಹೀಗಾಗಿ ನಾಯಕಿ ಪಾತ್ರದಲ್ಲಿ ನಾನೇ ನಟಿಸುವ ಮನಸ್ಸು ಮಾಡಿದೆ. ಆದರೆ ಸಿನಿಮಾ ಪ್ರಾರಂಭವಾಗುವ ಹೊತ್ತಿನಲ್ಲಿ ಈ ಸಿನಿಮಾವನ್ನು ಒಟಿಟಿಗೆ ಬಿಡುಗಡೆ ಮಾಡುವುದು ಎಂದಾಗಿತ್ತು. ಒಟಿಟಿ ಕಂಪನಿಯೊಂದಿಗೆ ಮಾತುಕತೆಯೂ ನಡೆದಿತ್ತು.
ಆದರೆ ರಮ್ಯಾ ಅವರಿಗೆ ತಮ್ಮ ಕಮ್ಬ್ಯಾಕ್ ಸಿನಿಮಾ ಚಿತ್ರಮಂದಿರದಲ್ಲೇ ಬಿಡುಗಡೆ ಆಗಬೇಕು ಅನ್ನೋ ಆಸೆಯಿತ್ತಂತೆ. ಹೀಗಾಗಿ ಅವರು ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾದಿಂದ ಹೊರ ನಡೆದಿದ್ದರು.
ಈಗ ಸಿನಿಮಾ ಖರೀದಿಸುವುದಾಗಿ ಹೇಳಿದ್ದ ಒಟಿಟಿ ಸಂಸ್ಥೆ ಕೈ ಕೊಟ್ಟಿದೆ. ಹೀಗಾಗಿಯೇ ಸಿನಿಮಾವನ್ನು ಚಿತ್ರಮಂದಿರಗಳಲ್ಲೇ ಬಿಡುಗಡೆ ಮಾಡಲು ಚಿತ್ರ ತಂಡ ನಿರ್ಧರಿಸಿದೆ. ಇದೇ ನವೆಂಬರ್ 24ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದ್ದು, ಚಿತ್ರಮಂದಿರದಲ್ಲಿ ಚಿತ್ರ ನೋಡಿದ್ದು ರಮ್ಯ ಅವರು ಮನವಿ ಮಾಡಿದ್ದಾರೆ.
ಇದನ್ನೂ ಓದಿ : ತನಿಷಾ ಕುಪ್ಪಂಡ (Tanisha Kuppanda) ಮೇಲೆ FIR : Bigg Boss ಮನೆಗೆ ನುಗ್ತಾರ ಪೊಲೀಸರು ?
ಒಂದು ವೇಳೆ ಅವತ್ತೇ ಸಿನಿಮಾ ಚಿತ್ರ ಮಂದಿರದಲ್ಲೇ ಬಿಡುಗಡೆ ಮಾಡೋ ಕುರಿತು ನಿರ್ಧರಿಸಿದ್ರೆ ಈಗ ಕಥೆಯೇ ಬೇರೆಯಾಗಿರೋದು.
Discussion about this post