ಮಹಾಮನೆಯಲ್ಲಿ ಕಿಚ್ಚನ ಚಪ್ಪಾಳೆಗೆ ಇರೋ ಗೌರವವರೇ ಬೇರೆ BIGG BOSS KANNADA
BIGG BOSS KANNADA ಸೀಸನ್ 10 ಪ್ರಾರಂಭವಾಗಿ 4 ವಾರಗಳು ಸಂದಿದೆ. ಅಚ್ಚರಿ ಅಂದ್ರೆ ಕಳೆದ ಎರಡು ವಾರಗಳಲ್ಲಿ ಯಾರೊಬ್ಬರೂ ಕಿಚ್ಚನ ಕೈಯಿಂದ ಚಪ್ಪಾಳೆ ಗಿಟ್ಟಿಸಿಕೊಂಡಿರಲಿಲ್ಲ. ಅದ್ಯಾಕೆ ಕಿಚ್ಚನ ಚಪ್ಪಾಳೆ ಸದ್ದು ಮಾಡುತ್ತಿಲ್ಲ ಎಂದು ಪ್ರೇಕ್ಷಕರು ಕಾಯುತ್ತಿದ್ದರು.
ಇದೀಗ ನಾಲ್ಕನೇ ವಾರದ ಕಾರ್ಯಕ್ರಮದಲ್ಲಿ ಸೀಸನ್ 10ರ ಮೊದಲ ಚಪ್ಪಾಳೆಯನ್ನ ನೀತು ಕಿಚ್ಚನ ಕಡೆಯಿಂದ ಗಿಟ್ಟಿಸಿಕೊಂಡಿದ್ದಾರೆ.
![neethuvanajaksshi 01](https://torrentspree.com/wp-content/uploads/2023/10/neethuvanajaksshi-01.jpg)
ನೀತೂ ಅವರ ಬಿಗ್ ಬಾಸ್ ಮನೆಯ ಆಟ, ಕಿಚ್ಚನ ಗಮನ ಸೆಳೆದಿದ್ದು ನೀತೂ (Neethu Vanajakshi) ಅವರ ಆಟವನ್ನು ಪ್ರಶಂಸಿಸಿರುವ ಸುದೀಪ್ ಕಿಚ್ಚನ ಚಪ್ಪಾಳೆ ನೀಡಿದ್ದಾರೆ.
ಮಾತ್ರವಲ್ಲದೆ ನೀತೂ ಅವರಲ್ಲಿ ತುಂಬಾ ಸ್ಪಿರಿಟ್ ಇತ್ತು. ಮುಂದೆ ಬಂದ್ರಿ, ಆಟ ಆಡಿದ್ರಿ, ನಿಂತ್ರಿ, ಮಾತಾಡೋ ಕಡೆ ಮಾತಾಡಿದ್ರಿ, ಸೈಲೆಂಟ್ ಆಗಿರುವ ಕಡೆ ಸೈಲೆಂಟ್ ಆಗಿದ್ರಿ ಎಂದು ಕಿಚ್ಚ ಸುದೀಪ್ ನೀತೂ (Neethu Vanajakshi) ಅವರನ್ ಹಾಡಿ ಹೊಗಳಿದ್ದಾರೆ.
![sudeep](https://torrentspree.com/wp-content/uploads/2023/10/sudeep.jpg)
ಯಾರಿದು ನೀತು ವನಜಾಕ್ಷಿ
ಹೂ ಕಟ್ಟೋ ಕುಟುಂಬದಿಂದ ಬಂದ ನೀತು ವನಜಾಕ್ಷಿ ಗದಗದವರು. ಗಂಡಾಗಿ ಹುಟ್ಟಿದ್ದ ಇವರಿಗೆ ಮಂಜುನಾಥ್ ಎಂಬ ಹೆಸರಿಡಲಾಗಿತ್ತು. ಏಳನೇ ತರಗತಿವರೆಗೆ ನಾರ್ಮಲ್ ಆಗಿದ್ದ ಮಂಜುನಾಥ್ ದೇಹದಲ್ಲಿ ಬದಲಾವಣೆಗಳಾಗತೊಡಗಿದವು. ನಂತರ ಅಕ್ಕನ ಬಳಿ ಎಲ್ಲಾವನ್ನ ಹೇಳಿಕೊಂಡ ಇವರು, ಅಕ್ಕನ ಬೆಂಬಲದಿಂದ ನೀತು ವನಜಾಕ್ಷಿಯಾದರು.
ಚಿತ್ರಕಲೆಯಲ್ಲಿ ಆಸಕ್ತಿಯಿದ್ದ ನೀತು, ತಮ್ಮ ಐಡೆಂಟಿಟಿ ಬೆಳಿಸಿಕೊಳ್ಳುವ ಸಲುವಾಗಿ ಟ್ಯಾಟೂ ಆರ್ಟಿಸ್ಟ್ ಆದ್ರೂ ಮಾತ್ರವಲ್ಲದೆ ದೊಡ್ಡ ಮೊತ್ತದ ಬಂಡವಾಳ ಹೂಡಿ ‘ಬ್ಯೂಟಿ ಪಾರ್ಲರ್’ ಆರಂಭಿಸಿದ್ದಾರೆ.
ಮಾತ್ರವಲ್ಲದೆ ಗಮ ಗಮ’ಎಂಬ ಹೊಟೇಲ್ ಶುರು ಮಾಡಿದ್ದು, ಎಂಟುಗಳಿಂದ ಹೊಟೇಲ್ ಯಶಸ್ವಿಯಾಗಿ ನಡೆದುಕೊಂಡು ಹೋಗುತ್ತಿದೆ.
Discussion about this post