ಮುರುಡೇಶ್ವರದಿಂದ ಗೋವಾ ಕಡೆಗೆ ತೆರಳುತ್ತಿದ್ದ Car Accident ಆಗಿ ಈ ದುರ್ಘಟನೆ ಸಂಭವಿಸಿದೆ. ಕಾರಿನಲ್ಲಿದ್ದವರು ಆಂಧ್ರ ಮೂಲದವರು ಎಂದು ಗೊತ್ತಾಗಿದೆ.
ಉತ್ತರ ಕನ್ನಡ : ಜಿಲ್ಲೆಯ ಅಂಕೋಲಾ ಗ್ರಾಮದ ಹಾರವಾಡ ಬಳಿ ಸಂಭವಿಸಿದೆ ಭೀಕರ ಕಾರು ಅಪಘಾತದಲ್ಲಿ ( Car Accident) ಆಂಧ್ರಪ್ರದೇಶ ಮೂಲದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಮೃತರನ್ನು ಆಂಧ್ರಪ್ರದೇಶದ ರವಿತೇಜ (25) ಎಂದು ಗುರುತಿಸಲಾಗಿದೆ.
ಮುರುಡೇಶ್ವರ ಕಡೆಯಿಂದ ಗೋವಾ ಕಡೆಗೆ ತೆರಳುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಕಾರು ವಿದ್ಯುತ್ ಟ್ರಾನ್ಸ್ ಫಾರ್ಮರ್ ಗೆ ಡಿಕ್ಕಿಯಾಗಿದೆ. ಈ ವೇಳೆ ಡಿಕ್ಕಿ ಹೊಡೆದ ರಭಸಕ್ಕೆ ಕಾರಿಗೆ ಬೆಂಕಿ ಹತ್ತಿಕೊಂಡಿದೆ. ಈ ವೇಳೆ ನಾಲ್ವರನ್ನು ರಕ್ಷಿಸಲಾಗಿದೆ. ಆದರೆ ರವಿತೇಜ ಅನ್ನುವವರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ.
ಇದನ್ನೂ ಓದಿ : 5 ಲಕ್ಷ ರೂಪಾಯಿ ಲಂಚ ಪಡೆದು ಜೈಲು ಸೇರಿದ ಐಎಎಸ್ ಅಧಿಕಾರಿ
ಅತಿವೇಗದ ಚಾಲನೆಯೇ ದುರ್ಘಟನೆಗೆ ಕಾರಣ ಎಂದು ಗೊತ್ತಾಗಿದೆ. ಈ ಸಂಬಂಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
5 ಲಕ್ಷ ರೂಪಾಯಿ ಲಂಚ ಪಡೆದು ಜೈಲು ಸೇರಿದ ಐಎಎಸ್ ಅಧಿಕಾರಿ
ಬೆಂಗಳೂರು : ದೆಹಲಿಯಲ್ಲಿ ಕೂತ ಪ್ರಧಾನಿ ನರೇಂದ್ರ ಮೋದಿ ನಾನು ತಿನ್ನೋದಿಲ್ಲ, ತಿನ್ನೋದಿಕ್ಕೆ ಬಿಡೋದಿಲ್ಲ ಎಂದು ಗುಡುಗಿದ್ದಾರೆ. ಆದರೆ ರಾಜ್ಯದ ಬಿಜೆಪಿ ಸರ್ಕಾರ ಕೈ ಕೆಳಗೆ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಅದರಲ್ಲೂ ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿಯಾದ ಮೇಲೆ ಬರೀ ಭ್ರಷ್ಟಚಾರದ್ದೇ ಸುದ್ದಿ. ಇದೀಗ ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿದ್ದ ( Bangalore Urban dc Manjunath ) ಅವರನ್ನು ACB ಬಂಧಿಸಿದೆ.
ಜಮೀನು ವ್ಯಾಜ್ಯ ಇತ್ಯರ್ಥಪಡಿಸುವ ಸಲುವಾಗಿ 5 ಲಕ್ಷ ರೂಪಾಯಿ ಲಂಚ ಪಡೆದ ಆರೋಪವನ್ನು ಮಂಜುನಾಥ್ ಎದುರಿಸುತ್ತಿದ್ದಾರೆ. ಈ ಆರೋಪದ ಬೆನ್ನಲ್ಲೇ ಅವರನ್ನು ಬೆಂಗಳೂರು ನಗರ ಜಿಲ್ಲಾಧಿಕಾರಿ ಸ್ಥಾನದಿಂದ ತೆಗೆದು ಸಮಗ್ರ ಮಕ್ಕಳ ರಕ್ಷಣಾ ಯೋಜನೆಯ ಎಂಡಿಯಾಗಿ ನೇಮಿಸಲಾಗಿತ್ತು.
ಇದನ್ನೂ ಓದಿ : ಪ್ರೀತಿ ಮಾಡಿದ್ದೇ ತಪ್ಪಾಯ್ತು … ಯುವತಿ ಕಡೆಯವರಿಂದ ಯುವಕನ ಕೊಲೆ
ಈ ನಡುವೆ ಲಂಚ ಪ್ರಕರಣ ಸಂಬಂಧ ಎಸಿಬಿ ಅಧಿಕಾರಿಗಳು ಮಂಜುನಾಥ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದು, ಲಂಚ ಪಡೆದಿದ್ದಕ್ಕೆ ಸಾಕ್ಷಿಗಳು ಪಕ್ಕಾ ಆದ ಹಿನ್ನಲೆಯಲ್ಲಿ ಬಂಧಿಸಿದ್ದಾರೆ. ಈ ಮಂಜುನಾಥ್ ನಾನ್ ಕೆಎಎಸ್ ವಿಭಾಗದಲ್ಲಿ ಐಎಎಸ್ ಅಧಿಕಾರಿಯಾಗಿದ್ದರು. ಮೊದಲಿನಿಂದಲೂ ಈ ವ್ಯಕ್ತಿಯ ಮೇಲೆ ಸಾಕಷ್ಟು ಆರೋಪಗಳಿತ್ತು.
ಲಂಚ ಪ್ರಕರಣದ ವಿವರ
ಅನೇಕಲ್ ತಾಲೂಕಿನ ಕೂಡ್ಲು ಗ್ರಾಮದ 38 ಗುಂಟೆ ಜಮೀನು ವಿವಾದ ಡಿಸಿ ಕೋರ್ಟ್ ಗೆ ಬಂದಿತ್ತು. ಈ ವೇಳೆ ದೂರುದಾರರ ಪರವಾಗಿ ಆದೇಶ ನೀಡಲು ಜಿಲ್ಲಾಧಿಕಾರಿಯಾಗಿದ್ದ ಮಂಜುನಾಥ್ ತನ್ನ ಕೈ ಕೆಳಗಿನ ಕೆಲಸಗಾರನ ಮೂಲಕ ಹಣ ಪಡೆದಿದ್ದರು. ಈ ವೇಳೆ ಎಸಿಬಿ ದಾಳಿಯಾಗಿತ್ತು.
ಚಿಕ್ಕಬಳ್ಳಾಪುರದಲ್ಲಿ ಜಿಲ್ಲಾಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ, ಬಳಿಕ ಕೋಲಾರ ಜಿಲ್ಲಾಧಿಕಾರಿ ನಂತರ ಬಿಬಿಎಂಪಿ ವಿಶೇಷ ಆಯುಕ್ತ ಹೀಗೆ ಆಯಾ ಕಟ್ಟಿನ ಜಾಗದಲ್ಲೇ ಕಾರ್ಯ ನಿರ್ವಹಿಸಿದ್ದರು.
Discussion about this post