Bangalore Urban dc manjunath ಲಂಚ ಪ್ರಕರಣದಲ್ಲಿ ಹೈಕೋರ್ಟ್ ಗರಂ ಆಗಿತ್ತು. ACB ಮುಖ್ಯಸ್ಥರ ವಿರುದ್ಧವೇ ನ್ಯಾಯಾಧೀಶರು ಕಿಡಿ ಕಾರಿದ್ದರು. ಇದರ ಬೆನ್ನಲ್ಲೇ ಜಿಲ್ಲಾಧಿಕಾರಿಯಾಗಿದ್ದ ಮಂಜುನಾಥ್ ಬಂಧನವಾಗಿದೆ
ಬೆಂಗಳೂರು : ದೆಹಲಿಯಲ್ಲಿ ಕೂತ ಪ್ರಧಾನಿ ನರೇಂದ್ರ ಮೋದಿ ನಾನು ತಿನ್ನೋದಿಲ್ಲ, ತಿನ್ನೋದಿಕ್ಕೆ ಬಿಡೋದಿಲ್ಲ ಎಂದು ಗುಡುಗಿದ್ದಾರೆ. ಆದರೆ ರಾಜ್ಯದ ಬಿಜೆಪಿ ಸರ್ಕಾರ ಕೈ ಕೆಳಗೆ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಅದರಲ್ಲೂ ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿಯಾದ ಮೇಲೆ ಬರೀ ಭ್ರಷ್ಟಚಾರದ್ದೇ ಸುದ್ದಿ. ಇದೀಗ ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿದ್ದ ( Bangalore Urban dc Manjunath ) ಅವರನ್ನು ACB ಬಂಧಿಸಿದೆ.
ಜಮೀನು ವ್ಯಾಜ್ಯ ಇತ್ಯರ್ಥಪಡಿಸುವ ಸಲುವಾಗಿ 5 ಲಕ್ಷ ರೂಪಾಯಿ ಲಂಚ ಪಡೆದ ಆರೋಪವನ್ನು ಮಂಜುನಾಥ್ ಎದುರಿಸುತ್ತಿದ್ದಾರೆ. ಈ ಆರೋಪದ ಬೆನ್ನಲ್ಲೇ ಅವರನ್ನು ಬೆಂಗಳೂರು ನಗರ ಜಿಲ್ಲಾಧಿಕಾರಿ ಸ್ಥಾನದಿಂದ ತೆಗೆದು ಸಮಗ್ರ ಮಕ್ಕಳ ರಕ್ಷಣಾ ಯೋಜನೆಯ ಎಂಡಿಯಾಗಿ ನೇಮಿಸಲಾಗಿತ್ತು.
ಈ ನಡುವೆ ಲಂಚ ಪ್ರಕರಣ ಸಂಬಂಧ ಎಸಿಬಿ ಅಧಿಕಾರಿಗಳು ಮಂಜುನಾಥ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದು, ಲಂಚ ಪಡೆದಿದ್ದಕ್ಕೆ ಸಾಕ್ಷಿಗಳು ಪಕ್ಕಾ ಆದ ಹಿನ್ನಲೆಯಲ್ಲಿ ಬಂಧಿಸಿದ್ದಾರೆ. Bangalore Urban dc Manjunath ಈ ಮಂಜುನಾಥ್ ನಾನ್ ಕೆಎಎಸ್ ವಿಭಾಗದಲ್ಲಿ ಐಎಎಸ್ ಅಧಿಕಾರಿಯಾಗಿದ್ದರು. ಮೊದಲಿನಿಂದಲೂ ಈ ವ್ಯಕ್ತಿಯ ಮೇಲೆ ಸಾಕಷ್ಟು ಆರೋಪಗಳಿತ್ತು.
ಲಂಚ ಪ್ರಕರಣದ ವಿವರ
ಅನೇಕಲ್ ತಾಲೂಕಿನ ಕೂಡ್ಲು ಗ್ರಾಮದ 38 ಗುಂಟೆ ಜಮೀನು ವಿವಾದ ಡಿಸಿ ಕೋರ್ಟ್ ಗೆ ಬಂದಿತ್ತು. ಈ ವೇಳೆ ದೂರುದಾರರ ಪರವಾಗಿ ಆದೇಶ ನೀಡಲು ಜಿಲ್ಲಾಧಿಕಾರಿಯಾಗಿದ್ದ ಮಂಜುನಾಥ್ ತನ್ನ ಕೈ ಕೆಳಗಿನ ಕೆಲಸಗಾರನ ಮೂಲಕ ಹಣ ಪಡೆದಿದ್ದರು. ಈ ವೇಳೆ ಎಸಿಬಿ ದಾಳಿಯಾಗಿತ್ತು.
ಚಿಕ್ಕಬಳ್ಳಾಪುರದಲ್ಲಿ ಜಿಲ್ಲಾಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ, ಬಳಿಕ ಕೋಲಾರ ಜಿಲ್ಲಾಧಿಕಾರಿ ನಂತರ ಬಿಬಿಎಂಪಿ ವಿಶೇಷ ಆಯುಕ್ತ ಹೀಗೆ ಆಯಾ ಕಟ್ಟಿನ ಜಾಗದಲ್ಲೇ ಕಾರ್ಯ ನಿರ್ವಹಿಸಿದ್ದರು.
ಪ್ರೀತಿ ಮಾಡಿದ್ದೇ ತಪ್ಪಾಯ್ತು … ಯುವತಿ ಕಡೆಯವರಿಂದ ಯುವಕನ ಕೊಲೆ
ಕಲಬುರಗಿ : ಪ್ರೀತಿ ಪ್ರೇಮ ಎಂದು ಹುಡುಗಿ ಮನೆಯವರ ಎಚ್ಚರಿಕೆಯನ್ನು ನಿರ್ಲಕ್ಷ್ಯಿಸಿ ಸುತ್ತಾಡಿದ ಕಾರಣಕ್ಕೆ ಇದೀಗ ಕಲಬುರಗಿಯ ಅಫಜಲಪುರದ ( kalaburagi afzalpur ) ತಾಲೂಕಿನ ರೇವೂರು ಗ್ರಾಮದಲ್ಲಿ ಯುವಕನೊಬ್ಬನನ್ನು ಕೊಲೆ ( Crime news ) ಮಾಡಲಾಗಿದೆ.
ಮೃತ ಯುವಕನನ್ನು ಹುಲ್ಲೂರು ಗ್ರಾಮದ ನಿವಾಸಿ ಚಂದ್ರಪ್ಪ (24) ಎಂದು ಗುರುತಿಸಲಾಗಿದೆ. ಚಂದ್ರಪ್ಪ ಗ್ರಾಮದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಜೊತೆಗೆ ಯುವತಿ ಜೊತೆಗೆ ಸುತ್ತಾಟ ನಡೆಸುತ್ತಿದ್ದ. ಇದನ್ನು ತಿಳಿದ ಯುವತಿಯ ಸಂಬಂಧಿಕರು ಚಂದ್ರಪ್ಪನನ್ನು ಕರೆದು ಎಚ್ಚರಿಕೆ ಕೊಟ್ಟಿದ್ದರಂತೆ.
ಆದರೆ ಚಂದ್ರಪ್ಪ ಕ್ಯಾರೇ ಅನ್ನದೆ ಸುತ್ತಾಟ ಮುಂದುವರಿಸಿದ್ದ. ಇದರಿಂದ ಕೋಪಗೊಂಡ ಹುಡುಗಿ ಮನೆಯವರೇ ಕೊಲೆ ಮಾಡಿದ್ದಾರೆ ಅನ್ನುವ ಆರೋಪ ಕೇಳಿ ಬಂದಿದೆ,
ಈ ಬಗ್ಗೆ ರೇವೂರ್ ಪೊಲೀಸ್ ಠಾಣೆಯಲ್ಲಿ ( Revoor Police Station ) ಪ್ರಕರಣ ದಾಖಲಾಗಿದೆ. ಚಂದ್ರಪ್ಪನ ಸಂಬಂಧಿಕರು ಯುವತಿ ಕಡೆಯವರೇ ಈ ಕೊಲೆ ಮಾಡಿದ್ದಾರೆ ಎಂದು ದೂರಿದ್ದಾರೆ. ಪೊಲೀಸರ ತನಿಖೆಯ ಬಳಿಕವೇ ಸತ್ಯಾಂಶ ಹೊರ ಬರಲಿದೆ. ಅದಕ್ಕೆ ಹಿರಿಯರು ಹೇಳಿದ್ದು ಪ್ರೀತಿ ಪ್ರೇಮದ ವಿಚಾರ ಬಂದಾಗ ಎಚ್ಚರವಾಗಿರಿ ಅಂತ.
Discussion about this post