Crime news : ನಮ್ಮ ಮನೆಯ ಹುಡುಗಿ ಜೊತೆಗೆ ಸುತ್ತಾಡಬೇಡ ಎಂದು ವಾರ್ನಿಂಗ್ ಮಾಡಿದ್ರು ಕೇಳಿಸಿಕೊಳ್ಳಲಿಲ್ಲ ಅನ್ನುವ ಕಾರಣಕ್ಕೆ ಯುವತಿ ಮನೆಯವರೇ ಕೊಲೆ ಮಾಡಿದ್ದಾರೆ ಅನ್ನಲಾಗಿದೆ
ಕಲಬುರಗಿ : ಪ್ರೀತಿ ಪ್ರೇಮ ಎಂದು ಹುಡುಗಿ ಮನೆಯವರ ಎಚ್ಚರಿಕೆಯನ್ನು ನಿರ್ಲಕ್ಷ್ಯಿಸಿ ಸುತ್ತಾಡಿದ ಕಾರಣಕ್ಕೆ ಇದೀಗ ಕಲಬುರಗಿಯ ಅಫಜಲಪುರದ ( kalaburagi afzalpur ) ತಾಲೂಕಿನ ರೇವೂರು ಗ್ರಾಮದಲ್ಲಿ ಯುವಕನೊಬ್ಬನನ್ನು ಕೊಲೆ ( Crime news ) ಮಾಡಲಾಗಿದೆ.
ಮೃತ ಯುವಕನನ್ನು ಹುಲ್ಲೂರು ಗ್ರಾಮದ ನಿವಾಸಿ ಚಂದ್ರಪ್ಪ (24) ಎಂದು ಗುರುತಿಸಲಾಗಿದೆ. ಚಂದ್ರಪ್ಪ ಗ್ರಾಮದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಜೊತೆಗೆ ಯುವತಿ ಜೊತೆಗೆ ಸುತ್ತಾಟ ನಡೆಸುತ್ತಿದ್ದ. ಇದನ್ನು ತಿಳಿದ ಯುವತಿಯ ಸಂಬಂಧಿಕರು ಚಂದ್ರಪ್ಪನನ್ನು ಕರೆದು ಎಚ್ಚರಿಕೆ ಕೊಟ್ಟಿದ್ದರಂತೆ.
ಆದರೆ ಚಂದ್ರಪ್ಪ ಕ್ಯಾರೇ ಅನ್ನದೆ ಸುತ್ತಾಟ ಮುಂದುವರಿಸಿದ್ದ. ಇದರಿಂದ ಕೋಪಗೊಂಡ ಹುಡುಗಿ ಮನೆಯವರೇ ಕೊಲೆ ಮಾಡಿದ್ದಾರೆ ಅನ್ನುವ ಆರೋಪ ಕೇಳಿ ಬಂದಿದೆ.
More Read : ಕೊಪ್ಪಳ ಎಸ್ಪಿಯನ್ನೇ ಗಾಬರಿಗೊಳಿಸಿದ ರೌಡಿಗಳ ವಾಟ್ಸಾಪ್ ಗ್ರೂಪ್
ಈ ಬಗ್ಗೆ ರೇವೂರ್ ಪೊಲೀಸ್ ಠಾಣೆಯಲ್ಲಿ ( Revoor Police Station ) ಪ್ರಕರಣ ದಾಖಲಾಗಿದೆ. ಚಂದ್ರಪ್ಪನ ಸಂಬಂಧಿಕರು ಯುವತಿ ಕಡೆಯವರೇ ಈ ಕೊಲೆ ಮಾಡಿದ್ದಾರೆ ಎಂದು ದೂರಿದ್ದಾರೆ. ಪೊಲೀಸರ ತನಿಖೆಯ ಬಳಿಕವೇ ಸತ್ಯಾಂಶ ಹೊರ ಬರಲಿದೆ. ಅದಕ್ಕೆ ಹಿರಿಯರು ಹೇಳಿದ್ದು ಪ್ರೀತಿ ಪ್ರೇಮದ ವಿಚಾರ ಬಂದಾಗ ಎಚ್ಚರವಾಗಿರಿ ಅಂತ.
ಜೈಲಿನಲ್ಲಿ ಆರೋಪಿಗಳಿಗೆ ರಾಜಾತಿಥ್ಯ : ಬಿಜೆಪಿ ಸರ್ಕಾರದ ವಿರುದ್ಧ ಭುಗಿಲೆದ್ದ ಆಕ್ರೋಶ
ಬೆಂಗಳೂರು : ಶಿವಮೊಗ್ಗದಲ್ಲಿ ನಡೆದ ಭಜರಂಗದಳ ಕಾರ್ಯಕರ್ತ ಹರ್ಷನ ಕೊಲೆ ಪ್ರಕರಣ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿತ್ತು. ರಾಜಕೀಯ ಪಕ್ಷಗಳು ಇದೊಂದು ಕೊಲೆ ಪ್ರಕರಣದಲ್ಲಿ ಆಡಿದ ಮಾತುಗಳಿಗೆ ಲೆಕ್ಕವಿಲ್ಲ. ಅಷ್ಟೇ ಯಾಕೆ ಹರ್ಷನ ಕುಟುಂಬಕ್ಕೆ ಜನ ಸಹಾಯ ಹಸ್ತವನ್ನು ಕೂಡಾ ಚಾಚಿದ್ದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರವಿರುವ ಕಾರಣ ಆರೋಪಿಗಳಿಗೆ ಶಿಕ್ಷೆ ಗ್ಯಾರಂಟಿ ಅಂದುಕೊಂಡಿದ್ದರು. ಆದರೆ ಈಗ Shivamogga Harsha murder case ಹಳ್ಳ ಹಿಡಿಯುವ ಲಕ್ಷಣ ಗೋಚರಿಸುತ್ತಿದೆ. ಆರೋಪಿಗಳು ಜೈಲಿನಲ್ಲಿ ಬಿಂದಾಸ್ ಆಗಿದ್ರೆ, ಗೃಹ ಸಚಿವರು ಕಠಿಣ ಕ್ರಮದ ಭರವಸೆಯೊಂದಿಗೆ ಮಾತು ಮುಗಿಸಿದ್ದಾರೆ.
ಪರಪ್ಪನ ಅಗ್ರಹಾರ ( Bengaluru Central Jail ) ಸೇರಿರುವ ಆರೋಪಿಗಳು ಜೈಲಿನಲ್ಲೇ ಕೂತು, ಆಪ್ತರಿಗೆ ಕುಟುಂಬದ ಸದಸ್ಯರಿಗೆ ಕರೆ ಮಾಡುತ್ತಿದ್ದಾರೆ. ಅಷ್ಟು ಮಾತ್ರವಲ್ಲದೆ ಜೈಲಿನಲ್ಲಿ ಕೂತು ರೀಲ್ಸ್ ಬೇರೆ ಮಾಡುತ್ತಿದ್ದಾರೆ ಅನ್ನುವ ಆರೋಪಗಳು ಕೇಳಿ ಬಂದಿದೆ. ಹಾಗಾದ್ರೆ ಜೈಲಿನ ಅಧಿಕಾರಿಗಳು ಅದ್ಯಾವ ಕೆಲಸ ಮಾಡುತ್ತಿದ್ದಾರೆ. ಪರಿಸ್ಥಿತಿ ನೋಡಿದರೆ ಯಥಾ ರಾಜ ತಥಾ ಪ್ರಜಾ ಅನ್ನುವಂತಿದೆ. ಮುಖ್ಯಮಂತ್ರಿಗಳು, ಗೃಹ ಸಚಿವರು ಅಧಿಕಾರಿಗಳನ್ನು ಹಿಡಿತದಲ್ಲಿಟ್ಟುಕೊಂಡ್ರೆ ಹೀಗಾಗುತ್ತಿರಲಿಲ್ಲ.
ಈ ನಡುವೆ ಅಣ್ಣನ ಕೊಲೆಯ ಆರೋಪಿಗಳು ಜೈಲಿನಲ್ಲಿ ಎಂಜಾಯ್ ಮಾಡುತ್ತಿರುವುದಕ್ಕೆ ಪ್ರತಿಕ್ರಿಯಿಸಿರುವ ಹರ್ಷನ ಸಹೋದರಿ ಅಶ್ವಿನಿ, ನಾವು ಬದುಕಿದ್ದೂ ಸತ್ತ ಹಾಗಾಗಿದೆ. ಕಠಿಣ ಕ್ರಮದ ಭರವಸೆ ಏನಾಗಿದೆ ಅನ್ನುವುದು ಈಗ ಗೊತ್ತಾಗಿದೆ. ಆರೋಪಿಗಳಿಗೆ ಶಿಕ್ಷೆಯಾಗುತ್ತದೆ ಅನ್ನುವ ನಂಬಿಕೆ ಕಳೆದು ಹೋಗಿದೆ. ಇನ್ನು ಜೈಲಿನ ಅಧಿಕಾರಿಗಳ ವರ್ಗಾವಣೆ ಮಾಡಿದರೆ ಸಾಲದು ಅವರ ಅಮಾನತು ಆಗಬೇಕು, ಒಂದು ವೇಳೆ ಸಸ್ಪಂಡ್ ಆಗದಿದ್ರೆ ನಾನೇ ಜೈಲಿನ ಮುಂದೆ ಧರಣಿ ಕೂರುತ್ತೇನೆ ಅಂದಿದ್ದಾರೆ.
Discussion about this post