2 ವರ್ಷಗಳಲ್ಲಿ ಒಂದೇ ಮೆಟ್ರೋ ನಿಲ್ದಾಣದಿಂದ ಬೈಕ್ ಕದಿಯುತ್ತಿದ್ದ ( bike theft in bangalore ) ಅಂದ್ರೆ ಇವನು ಎಂತ ಕಳ್ಳನಿರಬೇಕು
ಬೆಂಗಳೂರು : ಎಣ್ಣೆ ಮತ್ತು ಜೂಜಿನ ಚಟಕ್ಕೆ ಬಿದ್ದ ಖಾಸಗಿ ಕಂಪನಿ ಸೆಕ್ಯೂರಿಟಿ ಗಾರ್ಡ್ ಒಬ್ಬ ಬೈಕ್ ಕಳ್ಳತನ ಕೃತ್ಯದಲ್ಲಿ ಪೊಲೀಸರ ಅತಿಥಿಯಾಗಿದ್ದಾನೆ. ಅಚ್ಚರಿ ಅಂದ್ರೆ ಒಂದೇ ಜಾಗದಲ್ಲಿ ಸತತ 2 ವರ್ಷಗಳ ಕಾಲ ಈತ ಬೈಕ್ ಕದ್ದಿದ್ದಾನೆ.( bike theft in bangalore )
ಲಗ್ಗೆರೆ ಸಮೀಪದ ಶ್ರೀನಿವಾಸ್ ಖಾಸಗಿ ಕಂಪನಿಯೊಂದರಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ.3 ವರ್ಷಗಳ ಹಿಂದೆ ಆಕಸ್ಮಿಕವಾಗಿ ತನ್ನ ಬೈಕ್ ಕೀ ಬಳಸಿ ಬೈಕ್ ಸ್ಟಾರ್ಟ್ ಮಾಡಿದಾಗ ಅದು ಸ್ಟಾರ್ಟ್ ಆಗಿತ್ತು. ಅವತ್ತೇ ಆ ಬೈಕ್ ಎಗರಿಸಿದ್ದ ಶ್ರೀನಿವಾಸ, ಕಳ್ಳತನದ ರುಚಿ ನೋಡಿದ್ದ. ಆ ಬೈಕ್ ಮಾರಿದಾಗ ಒಳ್ಳೆ ದುಡ್ಡು ಬೇರೆ ಸಿಕ್ಕಿತ್ತು. ಹೀಗಾಗಿ ಸೆಕ್ಯೂರಿಟಿ ಗಾರ್ಡ್ ಕೆಲಸದೊಂದಿಗೆ ಕಳ್ಳತನವನ್ನು ಸೈಡ್ ಬ್ಯುಸಿನೆಸ್ ಮಾಡಿಕೊಂಡ.
ಇದನ್ನೂ ಓದಿ : canada boat accident : ಮೂವರು ಕೇರಳಿಗರ ಬಲಿ ಪಡೆದ ಕೆನಡಾ ದೋಣಿ ದುರಂತ
ಇದಾದ ಬಳಿಕ ಹಣದ ಅಗತ್ಯ ಇದ್ದಾಗಲೆಲ್ಲಾ ರಾಜಾಜಿನಗರ ಮೆಟ್ರೋ ನಿಲ್ದಾಣಕ್ಕೆ ಹೋಗೋದು ಬೈಕ್ ಎಗರಿಸುತ್ತಿದ್ದ. ಹಾಗೇ ತಂದ ಬೈಕ್ ಅನ್ನು ಕೋಲಾರ, ಆಂಧ್ರ ಪ್ರದೇಶಕ್ಕೆ ಒಯ್ದು ದಾಖಲೆಗಳನ್ನು ಆಮೇಲೆ ಕೊಡುವುದಾಗಿ ಹೇಳಿ 5 ರಿಂದ 10 ಸಾವಿರ ಪಡೆದು ಬರುತ್ತಿದ್ದ. ಹೀಗೆ ಸಿಕ್ಕ ಹಣದಲ್ಲಿ ಮತ್ತೆ ಮದ್ಯ ಕುಡಿದು ಜೂಜಾಡಿ ಮಜಾ ಉಡಾಯಿಸುತ್ತಿದ್ದ.
ಇತ್ತೀಚೆಗೆ ದೀಪಕ್ ಮಿಶ್ರಾ ಅನ್ನುವವರ ಬೈಕ್ ರಾಜಾಜಿನಗರ ಮೆಟ್ರೋ ನಿಲ್ದಾಣದಿಂದ ಕಳುವಾಗಿತ್ತು. ಈ ಬಗ್ಗೆ ಮಹಾಲಕ್ಷ್ಮಿ ಲೇ ಜೌಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡಾ ದಾಖಲಾಗಿತ್ತು. ಈ ಸಂಬಂಧ ಪೊಲೀಸರು ಸಿಸಿ ಕ್ಯಾಮಾರದ ದೃಶ್ಯಗಳ ಆಧಾರದಲ್ಲಿ ತನಿಖೆ ಕೈಗೆತ್ತಿಕೊಂಡ ವೇಳೆ ಶ್ರೀನಿವಾಸನ ಕೈ ಚಳಕ ಗೊತ್ತಾಗಿದೆ.
ಇದೀಗ ಆರೋಪಿ ಕಡೆಯಿಂದ 11.5 ಲಕ್ಷ ಮೌಲ್ಯದ 25 ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ : KRS Party : ಸಚಿವ ಸೋಮಣ್ಣ ಬೆಂಬಲಿಗರ ಗೂಂಡಾಗಿರಿ : ಕೆ.ಆರ್.ಎಸ್ ಪಕ್ಷದ ಕಾರ್ಯಕರ್ತರ ಮೇಲೆ ಹಲ್ಲೆ
ಸುಶಾಂತ್ ಗೆ ಡ್ರಗ್ಸ್ ನೀಡಿದ್ದು ಗೆಳತಿ ರಿಯಾ : ಪೂಜಾ ಸಾಮಾಗ್ರಿ ಹೆಸರಿನಲ್ಲಿ ಡ್ರಗ್ಸ್ ಖರೀದಿ
ನಿಗೂಢವಾಗಿ ಮೃತಪಟ್ಟ ಬಾಲಿವುಡ್ ನಟ ಸುಶಾಂತ್ ಸಾವಿನ ತನಿಖೆಯ ಆರೋಪ ಪಟ್ಟಿ ಕೋರ್ಟ್ ಗೆ ಸಲ್ಲಿಕೆಯಾಗಿದೆ.
ಮುಂಬೈ : ತಮ್ಮ ನಿವಾಸದಲ್ಲಿ ಎರಡು ವರ್ಷಗಳ ಹಿಂದೆ ನಿಗೂಢವಾಗಿ ಮೃತಪಟ್ಟ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ತನಿಖೆಯ ಜಾರ್ಜ್ ಶೀಟ್ ಅನ್ನು ಮಾದಕ ವಸ್ತು ನಿಯಂತ್ರಣ ದಳ ( narcotics control bureau – ncb) ಬುಧವಾರ ನ್ಯಾಯಾಲಯಕ್ಕೆ ಸಲ್ಲಿಸಿದೆ.
ಅದರಲ್ಲಿ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಿಕ್ಕಾಪಟ್ಟೆ ಮಾದಕ ವ್ಯಸನಿಯಾಗಿದ್ದ. ಗೆಳತಿ ರಿಯಾ ಚಕ್ರವರ್ತಿ ಸೇರಿದಂತೆ 15 ಜನ ಡ್ರಗ್ಸ್ ಖರೀದಿಗೆ ಸಹಾಯ ಮಾಡಿದ್ದರು ಎಂದು ಹೇಳಲಾಗಿದ್ದು, 35 ಜನರ ಹೆಸರನ್ನು ಜಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ : Dolo 650 : ಡೋಲೋ ಕಂಪನಿಯಿಂದ ವೈದ್ಯರಿಗೆ ಸಾವಿರ ಕೋಟಿ ರೂಪಾಯಿ ಗಿಫ್ಟ್
ಇದನ್ನೂ ಓದಿ : vivo oppo : ಕಂಪನಿಯೊಂದೇ… ಬ್ರ್ಯಾಂಡ್ ಹಲವು : ಮೋಸ ನಾಲ್ಕು ಸಾವಿರ ಕೋಟಿ
Discussion about this post