ಕೆನಡಾದ ಕ್ಯಾಲ್ಗರಿಯ ಕ್ಯಾನ್ ಮೋರ್ ನಲ್ಲಿ ಸಂಭವಿಸಿದ ಭೀಕರ ದೋಣಿ ದುರಂತದಲ್ಲಿ ( Ernakulam district )ಎರ್ನಾಕುಲಂ ಜಿಲ್ಲೆಯ ಮೂವರು ಮೃತಪಟ್ಟಿದ್ದಾರೆ. ( canada boat accident )
ಮೃತರನ್ನು ಜಿಯೋ ಪೈಲಿ ( 33) , ಕೆವಿನ್ ವರ್ಗೀಸ್ ( 21 ) ಮತ್ತು ಲಿಯೋ ಮ್ಯಾಥ್ಯೂ ( 41 ) ಎಂದು ಗುರುತಿಸಲಾಗಿದೆ. ಇದೇ ಘಟನೆಯಲ್ಲಿ ತ್ರಿಶೂರ್ ಮೂಲದ ಜಿಜೋ ಜೋಸೆಫ್ ಅನ್ನುವವರನ್ನು ರಕ್ಷಿಸಲಾಗಿದೆ. ಅವರ ಪರಿಸ್ಥಿತಿ ಗಂಬೀರವಾಗಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕ್ಯಾನ್ ಮೋರ್ ಸ್ಟ್ರೇಲೇಕ್ ಜಲಾಶಯಕ್ಕೆ ನಾಲ್ವರು ಮೀನು ಹಿಡಿಯುವುದಕ್ಕೆ ತೆರಳಿದ್ದರು. ಈ ವೇಳೆ ದೋಣಿ ಆಕಸ್ಮಿಕವಾಗಿ ಮಗುಚಿದೆ. ಆಕಸ್ಮಿಕ ಘಟನೆಯಿಂದ ನೀರಿಗೆ ಬಿದ್ದವರಿಗೆ ಈಜಾಡುವುದಕ್ಕೂ ಸಮಯ ಸಿಗಲಿಲ್ಲ. ಅಷ್ಟು ಹೊತ್ತಿಗೆ ನೀರಿನ ಸೆಳೆತಕ್ಕೆ ಸಿಕ್ಕಿ ಹಾಕಿಕೊಂಡಾಗಿತ್ತು.
ಕಂಪನಿಯೊಂದೇ… ಬ್ರ್ಯಾಂಡ್ ಹಲವು : ಮೋಸ ನಾಲ್ಕು ಸಾವಿರ ಕೋಟಿ
ವಿವೋ ಮತ್ತು ಒಪ್ಪೋ ಭಾರತಕ್ಕೆ ಕಾಲಿಟ್ಟ ಸಂದರ್ಭದಲ್ಲೇ ಎಚ್ಚರಿಕೆ ನೀಡಲಾಗಿತ್ತು. ಒಂದಲ್ಲ ಒಂದು ದಿನ ಭಾರತಕ್ಕೆ ಈ ಕಂಪನಿಗಳು ಮೋಸ ಮಾಡಲಿದೆ. ಹೇಳಿ ಕೇಳಿ ಇದು ಚೈನಾ ಕಂಪನಿ ಎಚ್ಚರವಾಗಿರಿ ಎಂದು ತಜ್ಞರು ಎಚ್ಚರಿಕೆ ನೀಡಿದ್ದರು. ಹಾಗೇ ಆಗಿದೆ.
ತೆರಿಗೆ ವಂಚನೆ ಮತ್ತು ಅಕ್ರಮ ಹಣದ ವರ್ಗಾವಣೆ ಆರೋಪದಲ್ಲಿ ಚೀನಾ ಮೂಲದ ವಿವೋ ಕಂಪನಿಯ ಮೇಲೆ ಇಡಿ ದಾಳಿ ನಡೆಸಿತ್ತು. ಸಂಸ್ಥೆಗೆ ಸೇರಿದ 44 ಸ್ಥಳಗಳಲ್ಲಿ ದಾಳಿ ನಡೆದ ಬೆನ್ನಲ್ಲೇ ಅದರ ಇಬ್ಬರು ನಿರ್ದೇಶಕರು ಭಾರತದಿಂದ ಜಾಗ ಖಾಲಿ ಮಾಡಿದ್ದರು. ಇದೀಗ ಚೀನಾದ ಕಂಪನಿಯಾಗಿರುವ ಒಪ್ಪೋ ಇಂಡಿಯಾ ಕೂಡಾ ತೆರಿಗೆ ವಂಚಿಸಿರುವುದು ಬೆಳಕಿಗೆ ಬಂದಿದೆ. ಅದು ಕೂಡಾ ಸಣ್ಣ ಮೊತ್ತವಲ್ಲ ಬರೋಬ್ಬರಿ 4,389 ಕೋಟಿ ರೂಪಾಯಿ
ಈ ಬಗ್ಗೆ ಡಿ.ಆರ್.ಐ ( Directorate of Revenue Intelligence ) ಮಾಹಿತಿಯನ್ನು ಹಂಚಿಕೊಂಡಿದ್ದು, ಮೇ ತಿಂಗಳಲ್ಲಿ ಒಪ್ಪೋ ಸಂಸ್ಥೆಯ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ದೊಡ್ಡ ಮೊತ್ತದ ವಂಚನೆ ಬೆಳಕಿಗೆ ಬಂದಿದೆ ಅಂದಿದೆ. ಒಪ್ಪೋ ಇಂಡಿಯಾ ಹೆಸರಿನಲ್ಲಿ ಕಾರ್ಯಾಚರಿಸುತ್ತಿದ್ದ ಸಂಸ್ಥೆ ಭಾರತದಲ್ಲಿ ತೆರಿಗೆ ತಪ್ಪಿಸುವ ನಿಟ್ಟಿನಲ್ಲಿ 62,476 ಕೋಟಿ ಹಣವನ್ನು ಚೀನಾ ಸೇರಿದಂತೆ ಬ್ರೆ ಬೇರೆ ದೇಶಗಳಿಗೆ ರವಾನಿಸಿದೆ.
ಒಪ್ಪೋ ಇಂಡಿಯಾ ಪರವಾನಿಗೆ ಶುಲ್ಕ, ಅಮದು ವ್ಯವಹಾರದ ಮೌಲ್ಯ ಸರಿಹೊಂದಿಲ್ಲ. ಹೀಗಾಗಿ ಚೀನಾದ ಕಂಪನಿಗಳು ಭಾರತಕ್ಕೆ ದೊಡ್ಡ ಮಟ್ಟದಲ್ಲಿ ಅಕ್ರಮ ಎಸಗಿರುವುದು ಗೊತ್ತಾಗಿದೆ. ಅಂದ ಹಾಗೇ ಒಪ್ಪೋ, ವಿವೋ, ರೀಲ್ ಮೀ ಅನ್ನುವುದು ಒಂದೇ ಕಂಪನಿಯ ಫೋನ್ ಗಳು. ಮಾರುಕಟ್ಟೆಯಲ್ಲಿ ಗ್ರಾಹಕರ ಕಣ್ಣಿಗೆ ಈ ಸ್ಪರ್ಧಿಗಳಂತೆ ಕಾಣಿಸುತ್ತದೆ. ಆದರೆ ಇವೆಲ್ಲವೂ ಚೀನಾದ ಬಿಬಿಕೆ ಎಲೆಕ್ಟ್ರಾನಿಕ್ ಕಂಪನಿಯ ಭಾಗವಾಗಿದೆ.
Discussion about this post