ಭ್ರಷ್ಟಾಚಾರದ ವಿರುದ್ಧ ವಿಭಿನ್ನ ರೀತಿಯಲ್ಲಿ ಹೋರಾಟ ನಡೆಸುತ್ತಿರುವ ರವಿಕೃಷ್ಣಾ ರೆಡ್ಡಿ ನೇತೃತ್ವದ ಕೆ.ಆರ್.ಎಸ್ ( KRS Party ) ಪಕ್ಷದ ಕಾರ್ಯಕರ್ತರ ಮೇಲೆ ಸಚಿವ ಸೋಮಣ್ಣ ಬೆಂಬಲಿಗರು ಪೊಲೀಸರ ಮುಂದೆಯೇ ಹಲ್ಲೆ ನಡೆಸಿದ್ದಾರೆ ಅನ್ನುವ ಆರೋಪ ಕೇಳಿ ಬಂದಿದೆ
ಬೆಂಗಳೂರು : ರಾಜಕಾರಣಿಗಳು ತಮ್ಮ ಬೆಂಬಲಿಗರನ್ನು ಹಿಡಿತದಲ್ಲಿ ಇಟ್ಟುಕೊಳ್ಳದಿದ್ದರೆ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗುತ್ತದೆ ಅನ್ನುವುದರಲ್ಲಿ ಅನುಮಾನವಿಲ್ಲ. ಇದಕ್ಕೆ ಇಂದು ಸಾಕ್ಷಿಯಾಗಿದ್ದು ಮಾಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ. ( KRS Party )
ಅನಧಿಕೃತ ಹೋಲ್ಡಿಂಗ್ ವಿರುದ್ದ KRS Party ಯ ಕಾರ್ಯಕರ್ತರು ಇಂದು ಪ್ರತಿಭಟನೆ ನಡೆಸುತ್ತಿದ್ದರು. ಸಚಿವ ಸೋಮಣ್ಣ ಅವರ ಕಟೌಟ್ ಅನ್ನು ತಕ್ಷಣ ತೆಗೆಸಬೇಕು ಮತ್ತು ಅದನ್ನು ಹಾಕಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಅನ್ನುವುದು ಅವರ ಆಗ್ರಹವಾಗಿತ್ತು. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸ್ ಅಧಿಕಾರಿಗಳು ಹಾಗೂ ಪ್ರತಿಭಟನಕಾರರ ನಡುವೆ ಇದೇ ವಿಷಯದಲ್ಲಿ ವಾಗ್ವಾದ ಕೂಡಾ ನಡೆದಿದೆ. ಇಷ್ಟೆಲ್ಲಾ ಬೆಳವಣಿಗೆಗಳು ಸಾಮಾಜಿಕ ಜಾಲತಾಣದಲ್ಲಿ ನೇರ ಪ್ರಸಾರವಾಗುತ್ತಿತ್ತು.
ಇದನ್ನು ಓದಿ : Supermoon 2022 : ಸೂಪರ್ ಮೂನ್ ನೋಡಲು ಸಿದ್ದರಾಗಿರಿ : ಮಳೆ ಇಲ್ಲದಿದ್ರೆ ನಿಮ್ಮ ಅದೃಷ್ಟ
ಹೀಗೆಲ್ಲಾ ಬೇಕಾಬಿಟ್ಟಿ ಕಟೌಟ್, ಹೋಲ್ಡಿಂಗ್ ಹಾಕುವುದು ಹೈಕೋರ್ಟ್ ಆದೇಶಕ್ಕೆ ವಿರುದ್ಧವಾಗಿದೆ. ಹೀಗಾಗಿ ತಕ್ಷಣ ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ಬರಬೇಕು, ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಕಾರರು ಆಗ್ರಹಿಸುತ್ತಿದ್ದರು. ಇದೇ ಸಂದರ್ಭದಲ್ಲಿ ಸ್ಥಳಕ್ಕೆ ದೊಡ್ಡ ಸಂಖ್ಯೆಯಲ್ಲಿ ಬಂದ ಸಚಿವ ಸೋಮಣ್ಣ ಬೆಂಬಲಿಗರು KRS Partyಯ ಪ್ರತಿಭಟನಕಾರರ ಮೇಲೆ ಮುಗಿ ಬಿದ್ದಿದ್ದಾರೆ. ಮಾತಿನ ಚಕಮಕಿಯೂ ನಡೆದಿದೆ. ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸುವ ಪ್ರಯತ್ನವನ್ನೂ ನಡೆಸಿದ್ದಾರೆ.
ಆದರೆ ಎಲ್ಲವೂ ಮುಗಿಯಿತು ಅನ್ನುವ ಹೊತ್ತಿಗೆ ಸೋಮಣ್ಣ ಅವರ ಕೆಲ ಬೆಂಬಲಿಗರು ಹಳದಿ ಬಣ್ಣ ಟೀ ಶರ್ಟ್ ಧರಿಸಿದ್ದ ಕೆ ಆರ್ ಎಸ್ ಪಾರ್ಟಿಯ ಸದಸ್ಯರ ಮೇಲೆ ಏಕಾಏಕಿ ಹಲ್ಲೆ ಮಾಡಿದ್ದಾರೆ. ಈ ದೃಶ್ಯಗಳು ಕೂಡಾ ಸಾಮಾಜಿಕ ಜಾಲತಾಣದಲ್ಲಿ ನೇರಪ್ರಸಾರವಾಗಿದೆ.
ಇನ್ನು ಈ ಘಟನೆ ಕುರಿತಂತೆ ಕೆ ಆರ್ ಎಸ್ ಪಕ್ಷದ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದು, ಇದು ಸಚಿವ ,ಸೋಮಣ್ಣ ಬೆಂಬಲಿಗರ ಗೂಂಡಾಗಿರಿ, ಪೊಲೀಸರು ಕೂಡಾ ನಮ್ಮ ಸಹಾಯಕ್ಕೆ ಬರಲಿಲ್ಲ. ಹಾಗಂತ ನಾವು ಅನ್ಯಾಯವನ್ನು ನೋಡಿಕೊಂಡು ಸುಮ್ಮನಿರುವುದಿಲ್ಲ, ಹೋರಾಟ ಮುಂದುವರಿಯುತ್ತದೆ ಅಂದಿದ್ದಾರೆ.
ಹಿಜಬ್ ಕಡ್ಡಾಯಗೊಳಿಸಿರುವುದನ್ನು ವಿರೋಧಿ ಬೀದಿಗಿಳಿದ ಇರಾನ್ ಮಹಿಳೆಯರು
ಇರಾನ್ ನಲ್ಲಿ ಹಿಜಬ್ ಕಡ್ಡಾಯ. ಆದರೆ ಈ ಆದೇಶದ ವಿರುದ್ಧ ಇರಾನ್ ಮಹಿಳೆಯರು ನಿಂತಿದ್ದಾರೆ. ಹಿಜಾಬ್ ಅನ್ನುವುದು ಇರಾನಿ ಸಂಸ್ಕೃತಿಯಲ್ಲ ಅದು ತಾಲಿಬಾನ್ ಸಂಸ್ಕೃತಿ ಅನ್ನುವುದು ಅವರ ವಾದ
ಕರ್ನಾಟಕದಲ್ಲಿ ಹಿಜಬ್ ಬೇಕು ಅನ್ನುವ ಹೋರಾಟ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಸುಪ್ರೀಂಕೋರ್ಟ್ ನಲ್ಲಿ ಇದೇ ಪ್ರಕರಣ ಮುಂದಿನ ವಾರದಿಂದ ವಿಚಾರಣೆಗೆ ಬರಲಿದೆ. ಈ ನಡುವೆ ಇರಾನ್ ನಲ್ಲಿ ಹಿಜಬ್ ವಿರೋಧಿಸಿ ಹೋರಾಟ ತೀವ್ರಗೊಂಡಿದೆ.
ಹಿಜಬ್ ಕಡ್ಡಾಯಗೊಳಿಸಿದ ಸರ್ಕಾರದ ನಿರ್ಧಾರವನ್ನು ಖಂಡಿಸಿ ಇರಾನ್ ಮಹಿಳೆಯರು ಬೀದಿಗಿಳಿದು ಪ್ರತಿಭಟನೆ ಪ್ರಾರಂಭಿಸಿದ್ದಾರೆ. ಟ್ವೀಟರ್ ನಲ್ಲಿ NO2Hijab ಹ್ಯಾಶ್ ಟ್ಯಾಗ್ ಟ್ರೆಂಡ್ ಆಗಿದ್ದು, ಸಂಚಲನ ಮೂಡಿಸಿದೆ.
ಇರಾನ್ ನಲ್ಲಿ ಮೆಟ್ರೋ, ಸರ್ಕಾರಿ ಕಚೇರಿ, ಬ್ಯಾಂಕ್ ಪ್ರವೇಶ ಸೇರಿದಂತೆ ಸಾರ್ವಜನಿಕ ಪ್ರದೇಶಗಳಲ್ಲಿ ಹಿಜಬ್ ಕಡ್ಡಾಯಗೊಳಿಸಲಾಗಿದೆ. ಜೊತೆಗೆ ಸಾರ್ವಜನಿಕ ಪ್ರದೇಶದಲ್ಲಿ ಹಿಜಬ್ ತೆಗೆದು ವಿಡಿಯೋ ಮಾಡಿದರೆ ದೊಡ್ಡ ಶಿಕ್ಷೆಯನ್ನೂ ನೀಡಲಾಗುತ್ತದೆ. ಹೀಗಾಗಿ ಹಿಜಬ್ ಕಡ್ಡಾಯಗೊಳಿಸಿರುವ ನಿಯಮದ ವಿರುದ್ಧ ಹೋರಾಟಗಳು ನಡೆಯುತ್ತಲೇ ಇದೆ.
ಮುಂದುವರಿದ ಭಾಗವಾಗಿ ಜುಲೈ 12 ರಂದು ಬೀದಿಗಿಳಿದ ಪ್ರತಿಭಟನಕಾರರು ಸರ್ಕಾರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ನಮಗೆ ಹಿಜಬ್ ಬೇಡ ಅಂದಿದ್ದಾರೆ.
Discussion about this post