ಬಾಲಿವುಡ್ ನಟಿ ಪ್ರೀತಿ ಝಿಂಟಾ ಅವರ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸಹ ಮಾಲೀಕ ನೆಸ್ ವಾಡಿಯಾಗೆ ಜಪಾನ್ ನಲ್ಲಿ ಎರಡು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
ಕಳೆದ ಮಾರ್ಚ್ ನಲ್ಲಿ ನೆಸ್ ವಾಡಿಯಾ 25 ಗ್ರಾಂ ಗಾಂಜಾ ಹೊಂದಿದ್ದಾಗ ಅವರನ್ನು ಬಂಧಿಸಲಾಗಿತ್ತು. ಜಪಾನಿನ ನ್ಯೂ ಚಿತೊಸೆ ವಿಮಾನ ನಿಲ್ದಾಣದಲ್ಲಿ ಐಲ್ಯಾಂಡ್ ನ ಹೊಕ್ಕಾಯ್ದೊ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದರು.
ಇದು ನನ್ನ ವೈಯಕ್ತಿಕ ಬಳಕೆಗಾಗಿ ತಂದಿದ್ದೇ ಹೊರತು ಮಾರಾಟ ಮಾಡುವ ಉದ್ದೇಶವಿರಲಿಲ್ಲ ಎಂದು ನೆಸ್ ವಾಡಿಯಾ ಹೇಳಿದ್ದರು. ಆದರೆ ಜಪಾನ್ ಮಾದಕ ವಸ್ತುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದರಿಂದ ನೆಸ್ ವಾಡಿಯಾಗೆ ಜೈಲು ಶಿಕ್ಷೆ ವಿಧಿಸಲಾಗಿದೆ.
Discussion about this post