ಕಲಬುರಗಿ : ಕೆಲ ದಿನಗಳ ಹಿಂದೆ ವಿಜಯನಗರ ಜಿಲ್ಲೆಯಲ್ಲಿ ನಡೆದ ಕಲುಷಿತ ಕುಡಿಯುವ ನೀರಿನ ದುರ್ಘಟನೆ ಮರೆಯುವ ಮುನ್ನವೇ ಕಲಬುರಗಿ ಜಿಲ್ಲೆಯಲ್ಲಿ ಮತ್ತೊಂದು ಕುಡಿಯುವ ನೀರಿನ ದುರ್ಘಟನೆ ನಡೆದಿದೆ.
ಕಲಬುರಗಿಯ ಆಳಂದ ತಾಲೂಕಿನ ಬೋಳನಿ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಕಲುಷಿತ ನೀರು ಸೇವಿಸಿ ಗರ್ಭಿಣಿ ಮೃತಪಟ್ಟಿದ್ದಾರೆ. ಮೃತರನ್ನು ಆರು ತಿಂಗಳ ಗರ್ಭಿಣಿ ಮಲ್ಲಮ್ಮ ಎಂದು ಗುರುತಿಸಲಾಗಿದೆ.
ಇನ್ನು ಕಲುಷಿತ ನೀರು ಕುಡಿದು ಗ್ರಾಮದ 12 ಜನ ಅಸ್ವಸ್ಥರಾಗಿದ್ದ, ಘಟನಾ ಸ್ಥಳಕ್ಕೆ ವೈದ್ಯರ ತಂಡ ಭೇಟಿ ನೀಡಿದೆ. ಪ್ರಾಥಮಿಕ ಮಾಹಿತಿಗಳ ಪ್ರಕಾರ ಕುಡಿಯುವ ನೀಕಿನ ಪೈಪ್ ಗೆ ಮಳೆ ನೀರು ಹಾಗೂ ಚರಂಡಿ ನೀರು ಮಿಶ್ರಣವಾಗಿದ್ದು ದುರ್ಘಟನೆ ಕಾರಣ ಎನ್ನಲಾಗಿದೆ.
ಈ ನಡುವೆ ಗ್ರಾಮದಲ್ಲಿ ಇದೇ ಪೈಪ್ ನ ನೀರು ಸೇವಿಸಿದ ಅನೇಕರ ಆರೋಗ್ಯದಲ್ಲಿ ಏರುಪೇರಾಗಿದ್ದು ಆತಂಕ ಸೃಷ್ಟಿಯಾಗಿದೆ.
Discussion about this post