ಬೆಂಗಳೂರು : ಡ್ರಗ್ಸ್ ದಂಧೆಯನ್ನು ಸದೆ ಬಡಿಯಲು ಪೊಲೀಸರು ಇನ್ನಿಲ್ಲದಂತೆ ಶ್ರಮಿಸುತ್ತಿದ್ದಾರೆ. ಈ ನಡುವೆ ಪೊಲೀಸರನ್ನೇ ಖೆಡ್ಡಾಗೆ ಬೀಳಿಸುತ್ತಿರುವ ಖದೀಮರು ಡ್ರಗ್ಸ್ ದಂಧೆಗೆ ಹೊಸ ಹೊಸ ದಾರಿಗಳನ್ನು ಹುಡುಕುತ್ತಿದ್ದಾರೆ.
ಈ ನಡುವೆ ಸ್ವಿಗ್ಗಿ ಡೆಲಿವರಿ ಹುಡುಗರ ವೇಷ ಧರಿಸಿ ಗ್ರಾಹಕರ ಮನೆ ಮನೆಗೆ ಡ್ರಗ್ಸ್ ಪೂರೈಸುತ್ತಿದ್ದ 7 ಮಂದಿಯನ್ನು ಮಾದಕ ವಸ್ತು ನಿಗ್ರಹ ದಳದ (NCB ) ಅಧಿಕಾರಿಗಳು ಬಂಧಿಸಿದ್ದಾರೆ. ಆರೋಪಿಗಳಿಂದ 5.20 ರೂಪಾಯಿ ನಗದು ಮತ್ತು 140 ಕೆಜಿ ಹೈಗ್ರೇಡ್ ಗಾಂಜಾ ಮತ್ತು ಎರಡು ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಪೈಕಿ ಕೆಲವರು ಸ್ವಿಗ್ಗಿಯಲ್ಲಿ ಆಹಾರ ಪೂರೈಕೆ ಕೆಲಸ ಮಾಡುತ್ತಿದ್ದರು ಎಂದು ಗೊತ್ತಾಗಿದೆ.
ಕಳೆದ ತಿಂಗಳ 30 ರಂದು 6 ಬಾಕ್ಸ್ ಗಳಲ್ಲಿ ತುಂಬಿದ್ದ ಗಾಂಜಾವನ್ನು ಕೊರಿಯರ್ ಮೂಲಕ ಸಾಗಿಸಲು ಆರೋಪಿಗಳು ತೀರ್ಮಾನಿಸಿದ್ದರು. ಈ ಬಗ್ಗೆ ಮಾಹಿತಿ ಪಡೆದ ಎನ್ ಸಿ ಬಿ ಅಧಿಕಾರಿಗಳು, ದಾಳಿ ನಡೆಸಿ 137 ಕೆಜಿ ಗಾಂದಾ ವಶಪಡಿಸಿಕೊಂಡಿದ್ದಾರೆ. ಸೆರೆ ಸಿಕ್ಕ ಆರೋಪಿಗಳ ವಿಚಾರಣೆ ನಡೆಸಿದಾಗ ಮತ್ತಷ್ಟು ಮಾಹಿತಿಗಳು ಬಯಲಾಗಿದೆ.
ಇನ್ನು ಇದೇ ತಂಡದ ಸದಸ್ಯರು ಶಿವಮೊಗ್ಗದಲ್ಲೂ ಕಾರ್ಯಾಚರಿಸುತ್ತಿದ್ದು ಅವರನ್ನೂ NCB ಅಧಿಕಾರಿಗಳು ಬಂಧಿಸಿದ್ದಾರೆ.
The Bengaluru zonal unit of the Narcotics Control Bureau (NCB) seized 140kg high-grade marijuana being supplied to doorsteps through app-based food delivery personnel. As a follow up action, seven persons, including the kingpin of the gang, were arrested, said NCB.
Discussion about this post