ಮುಂದಿನ ಚುನಾವಣೆಯನ್ನು ಗುರಿಯಾಗಿರಿಸಿಕೊಂಡೇ ಈ ಹುಟ್ಟುಹಬ್ಬವನ್ನು (sr viswanath birthday) ಆಚರಿಸಲಾಗಿದೆ. ಹೀಗಾಗಿ ಬಾಡೂಟ ಜೊತೆಗೆ ಗಿಫ್ಟ್ ಕೊಡಲಾಗಿದೆ
ಬೆಂಗಳೂರು : ಬಿಡಿಎ ಅಧ್ಯಕ್ಷ ಮತ್ತು ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ (sr viswanath birthday) ಅವರ ಹುಟ್ಟು ಹಬ್ಬದ ಸಂಭ್ರಮ ನೋಡಿದರೆ ಮಿನಿ ಸಿದ್ದರಾಮೋತ್ಸವ ನೋಡಿದ ಹಾಗಿತ್ತು. ಹೌದು ಮುಂದಿನ ಎಲೆಕ್ಷನ್ ಅನ್ನು ಗುರಿಯಾಗಿಸಿಕೊಂಡಿರುವ ಎಸ್.ಆರ್. ವಿಶ್ವನಾಥ್ ಈ ಬಾರಿ ಅದ್ದೂರಿ ಹುಟ್ಟು ಹಬ್ಬ ಆಚರಿಸಿದ್ದಾರೆ.
ಮಾಜಿ ಸಿಎಂ ಯಡಿಯೂರಪ್ಪ, ಹಾಲಿ ಸಿಎಂ ಬೊಮ್ಮಾಯಿ ಸೇರಿದಂತೆ ನಾಯಕರ ದಂಡೇ ಶುಭಾಶಯ ಕೋರಲು ಆಗಮಿಸಿತ್ತು ಅಂದ್ರೆ ವಿಶ್ವನಾಥ್ (sr viswanath birthday) ತಾಕತ್ತು ಲೆಕ್ಕ ಹಾಕಬಹುದಾಗಿದೆ. ಅಷ್ಟು ಮಾತ್ರವಲ್ಲದೆ. ಹುಟ್ಟು ಹಬ್ಬದ ಅಂಗವಾಗಿ ಹತ್ತು ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಕೂಡಾ ಹಮ್ಮಿಕೊಳ್ಳಲಾಗಿತ್ತು. ಕ್ಷೇತ್ರದಲ್ಲಿರುವ ಹಿಂದುಳಿದ ಮತ್ತು ಬಡವರಿಗೆ ಸಹಾಯ ಹಸ್ತವನ್ನು ಕೂಡಾ ಚಾಚಲಾಗಿದೆ.
ಇದನ್ನೂ ಓದಿ : biggboss shashi : ಹಸೆಮಣೆ ಏರಲು ಸಜ್ಜಾದ ಬಿಗ್ ಬಾಸ್ ಮನೆಯ ಮಾರ್ಡನ್ ರೈತ ಶಶಿಕುಮಾರ್
ಇನ್ನು ವಿಶ್ವನಾಥ್ (sr viswanath birthday) ಹುಟ್ಟುಹಬ್ಬಕ್ಕೆ ಟನ್ ಗಟ್ಟಲೆ ಮಾಂಸವನ್ನು ತರಲಾಗಿತ್ತು. 3 ಟನ್ ಮಟನ್, 5 ಟನ್ ಚಿಕನ್, 20 ಸಾವಿರ ಮೊಟ್ಟೆ ಬೇಯಿಸಲಾಗಿದ್ದು, 50 ಸಾವಿರ ಜನರಿಗೆ ವೆಜ್ ಮತ್ತು ನಾನ್ ವೆಜ್ ಊಟವನ್ನು ತಯಾರಿಸಲಾಗಿದ್ದು, ಮಧ್ಯಾಹ್ನ ಮತ್ತು ಸಂಜೆ ಎರಡು ಊಟದ ವ್ಯವಸ್ಥೆಯನ್ನು ಮಾಡಲಾಗಿದೆ.
ಊಟದ ಸಲುವಾಗಿಯೇ 15 ಕೌಂಟರ್ ಗಳಲ್ಲಿ ತೆರೆಯಲಾಗಿದ್ದು, ಊಟ ಮಾಡಿ ತೆರಳುವ ಮಂದಿಯ ಕೈಗೆ ವಿಶೇಷ ಉಡುಗೊರೆಯನ್ನು ಕೂಡಾ ವ್ಯವಸ್ಥೆ ಮಾಡಲಾಗಿತ್ತು.
ಇವತ್ತಿನ ಹುಟ್ಟುಹಬ್ಬ ಸಂಭ್ರಮವನ್ನು, ಸೇರಿದ ಜನರನ್ನು ನೋಡಿದರೆ 2023ರಲ್ಲಿ ಕಾಂಗ್ರೆಸ್ ಇಲ್ಲಿ ಅಭ್ಯರ್ಥಿ ನಿಲ್ಲಿಸುವುದೇ ವ್ಯರ್ಥ ಅನ್ನಿಸುತ್ತಿದೆ.
ಇದನ್ನೂ ಓದಿ : Koppal : ಕೊಪ್ಪಳದ ಹಂದಿ ಕಳ್ಳರ ಮೇಲೆ ಬೆಂಗಳೂರು ಪೊಲೀಸರಿಂದ ಫೈರಿಂಗ್
ಸಂಧಾನಕ್ಕೆ ಬಂದ ಚೆಲುವರಾಯಸ್ವಾಮಿಗೆ ಮುಖಭಂಗ
ಜಮೀರ್ ಮತ್ತು ಡಿಕೆ ಶಿವಕುಮಾರ್ ನಡುವಿನ ಕಿತ್ತಾಟ ನಿಲ್ಲುವ ಲಕ್ಷಣವಿಲ್ಲ. ಈ ನಡುವೆ ಇಬ್ಬರ ನಡುವೆ ಸಂಧಾನ ನಡೆಸಲು ಬಂದಿದ್ದ ಚಲುವರಾಯ ಸ್ವಾಮಿಗೆ ನಿರಾಶೆಯಾಗಿದೆ.
ಬೆಂಗಳೂರು : ಕಾಂಗ್ರೆಸ್ ನಲ್ಲಿ ಇದೀಗ ಚುನಾವಣೆ ಗೆಲ್ಲುವ ರಣತಂತ್ರಕ್ಕಿಂತಲೂ, ಸಿಎಂ ಕುರ್ಚಿ ಪಡೆಯುವುದು ಹೇಗೆ ಅನ್ನುವ ರಣತಂತ್ರವೇ ಸದ್ದು ಮಾಡುತ್ತಿದೆ. ಸಿದ್ದರಾಮಯ್ಯ ಮತ್ತು ಡಿಕೆಶಿ ಮಾತ್ರವಲ್ಲದೆ ಇನ್ನೂ ನಾಲ್ಕೈದು ಜನ ಸಿಎಂ ಕುರ್ಚಿಯ ರೇಸ್ ನಲ್ಲಿದ್ದಾರೆ.
ಈ ನಡುವೆ ಡಿಕೆಶಿ ವಿರುದ್ಧ ತೊಡೆತಟ್ಟಿರುವ ಸಿದ್ದರಾಮಯ್ಯ ಶಿಷ್ಯ ಜಮೀರ್ ಆಹಮ್ಮದ್ ತಲೆನೋವಾಗಿ ಪರಿಣಮಿಸಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಕಾಂಗ್ರೆಸ್ ಗೆ ಬಂದ ಜಮೀರ್ 40 ವರ್ಷಗಳ ಕಾಲ ಕಾಂಗ್ರೆಸ್ ನಲ್ಲಿರುವ ಡಿಕೆಶಿಗೆ ಕಾಡುತ್ತಿದ್ದಾರೆ ಅಂದ್ರೆ ಜಮೀರ್ ತಾಕತ್ತು ಊಹಿಸಿ. ಈಗಾಗಲೇ ಕರ್ನಾಟಕದ ಮುಸ್ಲಿಂ ನಾಯಕನಾಗಿ ಹೊರ ಹೊಮ್ಮಿರುವ ಜಮೀರ್ ಕೈ ನಾಯಕರಿಗೆ ಬಿಸಿ ತುಪ್ಪವಾಗಿದ್ದಾರೆ. ಕೆಪಿಸಿಸಿ ಅಧ್ಯಕ್ಷರ ವಿರುದ್ಧವೇ ಜಮೀರ್ ಸಿಡಿದೇಳುತ್ತಿದ್ರೆ ಒಂದು ಶೋಕಾಸ್ ನೊಟೀಸ್ ಕೊಡಲು ಕಾಂಗ್ರೆಸ್ ಭಯಪಡುತ್ತಿದೆ. ಹಾಗಾದ್ರೆ ಜಮೀರ್, ಡಿಕೆಶಿ ವಿರುದ್ಧ ತೊಡೆ ತಟ್ಟಿದ್ಯಾಕೆ, ಅವರಿಗೆ ಪಕ್ಷದಲ್ಲೊಂದು ಹುದ್ದೆ ಸಿಕ್ಕಿಲ್ಲ. ಇದಕ್ಕೆ ಅಡ್ಡಿ ಡಿಕೆಶಿ ಅನ್ನುವುದು ಜಮೀರ್ ಆರೋಪವಂತೆ.
ಇದನ್ನೂ ಓದಿ : TRP ಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿದ ಕುಮಾರಸ್ವಾಮಿ ಒಡೆತನದ ಕಸ್ತೂರಿ ನ್ಯೂಸ್
ಇದೀಗ ಜಮೀರ್ ಮತ್ತು ಡಿಕೆಶಿ ನಡುವೆ ಸಂಧಾನ ನಡೆಸಲು ಮಾಜಿ ಶಾಸಕ ಚಲುವರಾಯ ಸ್ವಾಮಿ ಎಂಟ್ರಿಯಾಗಿದ್ದಾರೆ. ಶುಕ್ರವಾರ ರಾತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿರುವ ಚಲುವರಾಯಸ್ವಾಮಿ ಪಕ್ಷ ಸಂಘಟನೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಆದರೆ ಜಮೀರ್ ವಿಷಯ ಪ್ರಸ್ತಾಪವಾಗುತ್ತಿದ್ದಂತೆ ಅದೊಂದು ವಿಚಾರ ಬಿಟ್ಟು ಬೇರೆ ಯಾವುದಾದರೂ ವಿಷಯವಿದ್ರೆ ಹೇಳಿ ಎಂದು ಡಿಕೆಶಿ ಹೇಳಿದ್ದಾರಂತೆ.
ಇನ್ನು ಈ ಬಗ್ಗೆ ಸ್ಪಷ್ಟನೆ ಕೊಟ್ಟಿರುವ ಡಿಕೆ ಶಿವಕುಮಾರ್, ಚಲುವರಾಯ ಸ್ವಾಮಿ ಬಂದಿದ್ದು ಹೌದು, ಮಾತನಾಡಿದ್ದೂ ಹೌದು, ಪಕ್ಷ ಸಂಘಟನೆ ಕುರಿತಂತೆ ಮಾತನಾಡಿದ್ದಾರೆ. ಉಳಿದಂತೆ ಬೇರೆ ವಿಚಾರಗಳು ಚರ್ಚೆಯಾಗಿಲ್ಲ. ನಾನು ಅದಕ್ಕೆ ಅವಕಾಶವನ್ನೂ ಕೊಡೋದಿಲ್ಲ ಅಂದಿದ್ದಾರೆ.
Discussion about this post