ಮಾರಿಷಸ್ ಪ್ರವಾಸದಲ್ಲಿ ಜೈಶಂಕರ್ Dr S Jaishankar called on Prime Minister of Mauritius
ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಮಾರಿಷಸ್ ಪ್ರವಾಸದಲ್ಲಿದ್ದು, ಇಂದು ಪೋರ್ಟ್ ಲೂಯಿಸ್ನಲ್ಲಿ, ಮಾರಿಷಸ್ ಪ್ರಧಾನಿ ಪ್ರವಿಂದ್ ಜುಗ್ನಾಥ್ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಬಳಿಕ ಸಚಿವ ಜೈಶಂಕರ್, ಪ್ರಗತಿ ಮತ್ತು ಸಮೃದ್ಧಿ ಕ್ಷೇತ್ರಗಳಲ್ಲಿ ಮಾರಿಷಸ್ಗೆ ಭಾರತದ ನಿರಂತರ ಬೆಂಬಲ ಸೂಚಿಸುವುದಾಗಿ ಹೇಳಿದರು.
ಅಭಿವೃದ್ಧಿ ಸಹಭಾಗಿತ್ವ, ರಕ್ಷಣಾ ಮತ್ತು ಕಡಲ ನಿಗಮ, ಆರ್ಥಿಕ ಮತ್ತು ವ್ಯಾಪಾರ ಸಂಬಂಧಗಳು ಹಾಗೂ ಜನರಿಂದ ಜನರ ನಡುವಿನ ಸಂಬಂಧಗಳು ಸೇರಿದಂತೆ ಹಲವು ವಿಷಯಗಳ ಕುರಿತು ಈ ಸಂದರ್ಭದಲ್ಲಿ ಚರ್ಚಿಸಲಾಗಿದೆ. ಪ್ರಗತಿ ಮತ್ತು ಸಮೃದ್ಧಿಯ ಅನ್ವೇಷಣೆಯಲ್ಲಿ ಮಾರಿಷಸ್ಗೆ ಭಾರತದ ಸ್ಥಿರ ಮತ್ತು ನಿರಂತರ ಬೆಂಬಲ ಸೂಚಿಸಲಿದೆ ಎಂದರು.
ಇದೇ ವೇಳೆ, ಶಿಕ್ಷಣ, ಸಂಸ್ಕೃತಿ, ವಲಸೆ ದಾಖಲೆಗಳ ಡಿಜಿಟಲೀಕರಣ, ಬಾಹ್ಯಾಕಾಶ ಸೇರಿದಂತೆ ವಿವಿಧ ಒಪ್ಪಂದಗಳಿಗೆ ಉಭಯ ನಾಯಕರು ಸಹಿ ಹಾಕಿದರು.
External Affairs Minister S Jaishankar on July 16 arrived in Port Louis for a two-day visit for “productive engagements” with the leadership of Mauritius to take forward the special bilateral ties.
Discussion about this post