ಪಬ್ಲಿಕ್ ಟಿವಿ ( public tv ) ಮತ್ತು ಸುವರ್ಣ ವಾಹಿನಿ ( suvarna news ) ನಡುವಿನ TRP ಸಮರದಲ್ಲಿ ರಂಗನಾಥ್ ಮಾಲೀಕತ್ವದ ಪಬ್ಲಿಕ್ ವಾಹಿನಿ ಜಯ ಸಾಧಿಸಿದೆ
ಯಾವುದೇ ಉಪಗ್ರಹ ಆಧಾರಿತ ವಾಹಿನಿಗಳು ಉಸಿರಾಡಬೇಕಾದರೆ TRP ಅನ್ನುವುದು ಬಲು ಮುಖ್ಯ. ಜಾಹೀರಾತುಗಳು ಹರಿದು ಬರುವುದೇ ಈ TRP ಮಾನದಂಡದ ಜನಪ್ರಿಯತೆಯ ಮೂಲಕ. ಕಳೆದ ಹಲವು ವಾರಗಳ ಕಾಲ ನಿಂತು ಹೋಗಿದ್ದ ಈ TRP ಕೊಡುವ ಕ್ರಮ ಇದೀಗ ಮತ್ತೆ ಪ್ರಾರಂಭವಾಗಿದೆ. ಹೀಗಾಗಿ TRP ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಏರಲು ಎಲ್ಲಾ ವಾಹಿನಿಗಲು ಇನ್ನಿಲ್ಲದ ಸರ್ಕಸ್ ನಡೆಸುತ್ತವೆ.
ಇದೀಗ ಕರ್ನಾಟಕದ 27ನೇ ವಾರದ ಬಾರ್ಕ್ ರೇಟಿಂಗ್ ಬಿಡುಗಡೆಯಾಗಿದ್ದು, ಕರ್ನಾಟಕದ ಸುದ್ದಿ ವಾಹಿನಿಗಳು ನಿರೀಕ್ಷೆಯಂತೆ ಸ್ಥಾನ ಹಂಚಿಕೊಂಡಿದೆ. Telivision rating point ಪಟ್ಟಿಯಲ್ಲಿ ಎಂದಿನಂತೆ ಟಿವಿ9 ಮೊದಲ ಸ್ಥಾನದಲ್ಲಿದ್ದು ಅದನ್ನು ಸೋಲಿಸಲು ಸಾಧ್ಯವೇ ಇಲ್ಲ ಅನ್ನುವಂತಾಗಿದೆ.
ಇದನ್ನು ಓದಿ : Mangalore Rain : ಮನೆ ಮೇಲೆ ಉರುಳಿ ಬಿದ್ದ ಮರ : ಅದೃಷ್ಟವಶಾತ್ ಪ್ರಾಣ ಉಳಿಸಿಕೊಂಡ ಮೂವರು
ಇನ್ನು ಹೇಗಾದರೂ ಸರಿ ಸುವರ್ಣ ಸುದ್ದಿವಾಹಿನಿಯನ್ನು ಪಕ್ಕಕ್ಕೆ ಸರಿಸಿ ಎರಡನೇ ಸ್ಥಾನಕ್ಕೆ ಏರಬೇಕು ಅನ್ನುವ ಪಬ್ಲಿಕ್ ಟಿವಿಯ ಕನಸು ಮತ್ತೆ ಈ ವಾರ ನನಸಾಗಿದೆ. ಕಳೆದ ವಾರದಂತೆ ಈ ವಾರವೂ ಪಬ್ಲಿಕ್ ಟಿವಿಯ TRP ಎರಡನೇ ಸ್ಥಾನದಲ್ಲಿದೆ.
ಹಾಗಾದ್ರೆ ಹೇಗಿದೆ ಈ ವಾರದ ನ್ಯೂಸ್ ಚಾನೆಲ್ ಗಳ ಟಿ.ಆರ್.ಪಿ
1.ಟಿವಿ9 ಕನ್ನಡ -84.17
2. ಪಬ್ಲಿಕ್ ಟಿವಿ-43.83
3. ಏಷಿಯನ್ ನೆಟ್ ಸುವರ್ಣ ನ್ಯೂಸ್- 37.17
4. ನ್ಯೂಸ್ 18 ಕನ್ನಡ- 26.61
5. ನ್ಯೂಸ್ ಫಸ್ಟ್-22.31
6. ದಿಗ್ವಿಜಯ 24×7 ನ್ಯೂಸ್- 15.45
7.ಪವರ್ ಟಿವಿ- 11.85
8.ಟಿವಿ 5 ಕನ್ನಡ- 2.95
9.ರಾಜ್ ನ್ಯೂಸ್ ಕನ್ನಡ- 2.33
10.ಕಸ್ತೂರಿ ನ್ಯೂಸ್- 2.16
ಸರ್ಕಾರಿ ಕಚೇರಿಗಳಲ್ಲಿ ಖಾಸಗಿ ವ್ಯಕ್ತಿಗಳು ವಿಡಿಯೋ ಮಾಡುವಂತಿಲ್ಲ : ರಾಜ್ಯ ಸರ್ಕಾರ ಆದೇಶ
ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ, ಜನರ ಹಿತಾಸಕ್ತಿಯನ್ನು ಕಡೆಗಣಿಸಿದಂತಿದೆ. ಇನ್ನು ಮುಂದೆ ಸರ್ಕಾರಿ ಅಧಿಕಾರಿಗಳ ಲಂಚಾವತರ ಬಯಲಿಗೆಳೆಯಲೂ ಸಾಧ್ಯವಿಲ್ಲ
ಬೆಂಗಳೂರು : ತಂತ್ರಜ್ಞಾನ ಸಾಕಷ್ಟು ಮುಂದುವರಿದಿದೆ. ಆದರೆ ರಾಜ್ಯ ಸರ್ಕಾರ ತಂತ್ರಜ್ಞಾನದ ಸದುಪಯೋಗಪಡಿಸಿಕೊಳ್ಳುವ ಲಕ್ಷಣ ಗೋಚರಿಸುತ್ತಿಲ್ಲ.ಸರ್ಕಾರಿ ಕಚೇರಿಗಳಲ್ಲಿ ಇನ್ನು ಮುಂದೆ ಸಾರ್ವಜನಿಕರು ವಿಡಿಯೋ ಮಾಡುವಂತಿಲ್ಲ ಅನ್ನುವ ಮೂಲಕ ಜನ ಸಾಮಾನ್ಯರಿಗೆ ಏಟು ಕೊಟ್ಟಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಸಾರ್ವಜನಿಕ ಸ್ಥಳದಲ್ಲೂ ಸರ್ಕಾರಿ ಅಧಿಕಾರಿಗಳು ಇರುವಾಗ ವಿಡಿಯೋ ಮಾಡುವಂತಿಲ್ಲ ಅನ್ನುವ ಆದೇಶ ಬಂದರೂ ಅಚ್ಚರಿ ಇಲ್ಲ. ಈ ಆದೇಶದಿಂದ ಇನ್ನು ಮುಂದೆ ಸರ್ಕಾರಿ ಅಧಿಕಾರಿಗಳು ಜನ ಸಾಮಾನ್ಯರಿಗೆ ಬಾಯಿಗೆ ಬಂದಂತೆ ಬೈಯ್ದರೂ ಸಾಕ್ಷಿ ಇರೋದಿಲ್ಲ.
ಈ ಆದೇಶಕ್ಕೆ ಪ್ರಮುಖ ಕಾರಣ ರವಿಕೃಷ್ಣಾ ರೆಡ್ಡಿ ನೇತೃತ್ವದ ಕೆ.ಆರ್.ಎಸ್ ಪಕ್ಷದ ಹೋರಾಟ ಅನ್ನಲಾಗಿದೆ. ಸರ್ಕಾರಿ ಕಚೇರಿಗಳ ಅವ್ಯವಸ್ಥೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿರುವುದೇ ಇದೀಗ ರಾಜ್ಯ ಸರ್ಕಾರ ಕೆಂಗಣ್ಣಿಗೆ ಗುರಿಯಾಗಿದ್ದು, ಈ ಆದೇಶ ಹೊರ ಬಿದ್ದಿದೆ.
ಆದೇಶದ ಪ್ರಕಾರ ಜಿಲ್ಲೆ, ತಾಲೂಕು ಮತ್ತು ರಾಜ್ಯ ಮಟ್ಟದಲ್ಲಿ ಸರ್ಕಾರದ ವಿವಿಧ ಇಲಾಖೆಗಳ ಕಚೇರಿಗಳು ಕಾರ್ಯನಿರ್ವಹಿಸುತ್ತಿದ್ದು, ಸರ್ಕಾರಿ ಕಚೇರಿಗಳಿಗೆ ಸಾರ್ವಜನಿಕರು ಅವರ ಕೆಲಸ ಕಾರ್ಯಗಳ ನಿಮಿತ್ತ ಆಗಮಿಸುವುದು ಸರ್ವೆ ಸಾಮಾನ್ಯವಾಗಿದ್ದು, ಕೆಲವು ಖಾಸಗಿ ವ್ಯಕ್ತಿಗಳು ಸರ್ಕಾರಿ ಕಚೇರಿಗಳಿಗೆ ಕಚೇರಿ ವೇಳೆಯಲ್ಲಿ ಬಂದು ಕಚೇರಿಯ ಫೋಟೋ/ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಹಾಗೂ ಇಂತಹ ಫೋಟೋ/ವಿಡಿಯೋಗಳನ್ನು ದುರ್ಬಳಕೆ ಮಾಡಿಕೊಳ್ಳುವ ಮೂಲಕ ಇಲಾಖೆ, ಸರ್ಕಾರದ ಘನತೆಗೆ ಕುಂದುಂಟಾಗಿತ್ತಿರುವುದು ಹಾಗೂ ಅದರಲ್ಲೂ ವಿಶೇಷವಾಗಿ ಮಹಿಳಾ ನೌಕರರಿಗೆ ಸಮಸ್ಯೆ ಉಂಟಾಗುತ್ತಿರುವುದರಿಂದ ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳ ಕಚೇರಿ ವೇಳೆಯಲ್ಲಿ ಖಾಸಗಿ ವ್ಯಕ್ತಿಗಳು ಫೋಟೋ/ವಿಡಿಯೋ ಮಾಡದಂತೆ ರಾಜ್ಯ ನೌಕರರ ಸಂಘದ ರಾಜ್ಯಾಧ್ಯಕ್ಷರ ಮನವಿ ಮಾಡಿದ್ದಾರೆ.
ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳ ಕಚೇರಿ ವೇಳೆಯಲ್ಲಿ ಅನುಮತಿಯಿಲ್ಲದೆ ಸಾರ್ವಜನಿಕರು ಅನಧಿಕೃತವಾಗಿ ಫೋಟೋ-ವಿಡಿಯೋ ಮಾಡದಂತೆ ಆದೇಶಿಸಿದೆ.
ಈ ಆದೇಶದ ವಿರುದ್ಧ ಜನಸಾಮಾನ್ಯರು ಜಾಗೃತರಾಗಬೇಕಾಗಿದೆ. ತಮ್ಮ ತಮ್ಮ ಕ್ಷೇತ್ರದ ಶಾಸಕರು ಸಿಕ್ರೆ ಇಂತಹುದೊಂದು ಆದೇಶ ಬೇಕಿತ್ತಾ, ಮುಂದೆ ನೀವು ಗೆಲ್ಲಬೇಕಾದ್ರೆ ಈ ಆದೇಶ ಜಾರಿಯಾಗಬಾರದು ಅನ್ನಿ, ಆಗ ಖಂಡಿತಾ ರಾಜ್ಯ ಸರ್ಕಾರ ಈ ಆದೇಶವನ್ನು ಹಿಂಪಡೆಯುತ್ತದೆ.
Discussion about this post