ಜುಲೈ 18 ರಿಂದ ಪ್ರಾರಂಭವಾಗುವ ಮುಂಗಾರು ಅಧಿವೇಶನಕ್ಕೂ ಮುನ್ನವೇ ಪ್ರತಿಪಕ್ಷಗಳ ಬಾಯಿ ಮುಚ್ಚಿಸಲು ಸಿದ್ದತೆಗಳಾಗಿದೆ. ಪಟ್ಟಿ ನೋಡಿದರೆ ಸಂಸತ್ ನಲ್ಲಿ ಮಾತನಾಡುವುದೇ ಕಷ್ಟ. ( unparliamentary words )
ನವದೆಹಲಿ : ಕೋವಿಡ್ ಸ್ಪ್ರೆಡರ್, ( covid spreader ) ಭ್ರಷ್ಟ, (corrupt) ಅಸಮರ್ಥ, ಸರ್ವಾಧಿಕಾರಿ, ಕತ್ತೆ, ನಾಟಕ ( drama ) ಹೀಗಾಗಿ ನೂರಾರು ಪದಗಳನ್ನು ಬಳಸುವಂತಿಲ್ಲ ಅವೆಲ್ಲವೂ ಅಸಂಸದೀಯ ( unparliamentary words ) ಪದಗಳು ಎಂದು ಲೋಕಸಭೆ ಸೆಕ್ರಟೇರಿಯಟ್ ಬಿಡುಗಡೆಗೊಳಿಸಿದ ಪುಸ್ತಕದಲ್ಲಿ ಹೇಳಲಾಗಿದೆ.
ಒಂದು ವೇಳೆ ಈ ಅಸಂಸದೀಯ ಪದಗಳನ್ನು ಬಳಸಿದರೆ ಲೋಕಸಭೆಯ ನಿಯಮ 380ರ ಪ್ರಕಾರ ಸ್ಪೀಕರ್ ಅವರನ್ನು ಕಲಾಪದಿಂದ ಹೊರಗೆ ಹಾಕುತ್ತಾರೆ ಎಂದು ಇದೇ ಪುಸ್ತಕದಲ್ಲಿ ಮಾಹಿತಿ ನೀಡಲಾಗಿದೆ. ಜೊತೆಗೆ ಸ್ಪೀಕರ್ ಅಥವಾ ರಾಜ್ಯಸಭೆಯ ಅಧ್ಯಕ್ಷರು ಅ ಪದಗಳನ್ನು ತೆಗೆದು ಹಾಕುತ್ತಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ : national education policy : ಮೊಟ್ಟೆ ಬೇಡ… ಮಕ್ಕಳಿಗೆ ಶೂ ಬೇಡ : ರಾಷ್ಟ್ರೀಯ ಶಿಕ್ಷಣ ನೀತಿ ಪಠ್ಯಕ್ರಮ ಕರಡಿನಲ್ಲಿ ಸೂಚನೆ
ಇನ್ನು ಈ ಕ್ರಮಕ್ಕೆ ಕಾಂಗ್ರೆಸ್ ಮತ್ತು ಟಿಎಂಸಿ ತೀವ್ರ ವಿರೋಧ ವ್ಯಕ್ತಪಡಿಸಿದೆ. ತೃಣಮೂಲ ಕಾಂಗ್ರೆಸ್ ಸಂಸದೆ ಮೆಹುವಾ ಮೊಯಿತ್ರಾ ಒಂದು ಹೆಜ್ಜೆ ಮುಂದೆ ಹೋಗಿ ನಾವು ಈ ಪದಗಳನ್ನು ಬಳಸುತ್ತೇವೆ, ಅಮಾನತು ಮಾಡಿ ಅಂದಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು ಬಿಜೆಪಿ ಭಾರತವನ್ನು ಹೇಗೆ ನಾಶ ಮಾಡುತ್ತದೆ ಅನ್ನುವುದು ಇದರಿಂದ ಗೊತ್ತಾಗುತ್ತದೆ. ಪ್ರತಿಪಕ್ಷಗಳು ಬಳಸುತ್ತಿದ್ದ ಶಬ್ಧವನ್ನೇ ಹೆಕ್ಕಿ ನಿಷೇಧಿಸಲಾಗಿದೆ, ಇದು ನಾಚಿಕೆಗೇಡು ಅಂದಿದ್ದಾರೆ.
ಹಾಗಾದ್ರೆ ಯಾವುದೇ ಅಸಂಸದೀಯ ಪದಗಳು ಎಂದು ನೋಡುವುದಾದರೆ ರಕ್ತಪಾತ, ರಕ್ತಸಿಕ್ತ, ದ್ರೋಹ, ವಂಚನೆ, ಚಮ್ಚಾ, ಚಮ್ಚಾಗಿರಿ, ಚೇಲಾನ್, ಬಾಲಿಶ, ಹೇಡಿ, ಕ್ರಿಮಿನಲ್, ಮೊಸಳೆ ಕಣ್ಣೀರು,ಅವಮಾನ, ಕತ್ತೆ, ನಾಟಕ, ಕಣ್ಣೊರೆಸುವ ತಂತ್ರ, ಗೂಂಡಾಗಿರಿ, ಅಸಮರ್ಥ, ಸುಳ್ಳು, ಗದ್ದಾರ್, ಗಿರ್ಗಿಟ್, ಗಢಿಯಾಲಿ ಅಂಸು, ಅಪಮಾನ್, ಅಸತ್ಯ, ಅಹಂಕಾರ, ಕಾಲಾ ದಿನ್, ಕಾಲಾ ಬಜಾರ್, ದಂಗ, ದಲಾಲ್, ದಾದಾಗಿರಿ, ಬೆಚಾರ, ಬಾಯ್ಕಟ್, ಲಾಲಿಪಪ್, ಸಂವೇದನಾ ಹೀನ್, ಸರ್ವಾದಧಿಕಾರಿ, ಶಕುನಿ, ತಾನಾಶಾಹಿ, ಜೈಚಂದ್, ವಿನಾಶ್ ಪುರುಷ್, ಖೂನ್ ಸೇ ಖೇತಿ ಹೀಗೆ ಸಾವಿರಾರು ಪದಗಳನ್ನು ಹೇಳಲಾಗಿದೆ.
ಕೆಲವೊಂದು ಪದಗಳು ಈ ಕೆಳಗಿನಂತಿದೆ
‘jumlajeevi’, ‘baal buddhi’, ‘Covid spreader’, ‘Snoopgate’, ‘ashamed’, ‘abused, ‘betrayed’, ‘corrupt’, ‘drama’, ‘hypocrisy’, ‘incompetent’, ‘Shakuni’, ‘dictatorial’, ‘taanashah’, ‘taanashahi’, ‘Jaichand’, ‘vinash purush’, ‘Khalistani’ and ‘khoon se kheti’, ‘dohra charitra’, ‘nikamma’, ‘nautanki’, ‘dhindora peetna’, ‘behri sarkar’
‘bloodshed’, ‘bloody’, ‘betrayed’, ‘ashamed’, ‘abused’, ‘cheated, ‘chamcha’, ‘chamchagiri’, ‘chelas’, ‘childishness’, ‘corrupt’, ‘coward’, ‘criminal’, ‘crocodile tears’.
‘disgrace’, ‘donkey’, ‘drama’, ‘eyewash’, ‘fudge’, ‘hooliganism’, ‘hypocrisy’, ‘incompetent’, ‘mislead’, ‘lie’, ‘untrue’
‘anarchist’, ‘gaddar’, ‘girgit’, ‘goons’, ‘ghadiyali ansu’, ‘apmaan’, ‘asatya’, ‘ahankaar’, ‘corrupt’, ‘kala din’, ‘kala bazaari’, ‘khareed farokht’.
‘danga’, ‘dalal’, ‘daadagiri’, ‘dohra charitra’, ‘bechara’, ‘bobcut’, ‘lollypop’, ‘vishwasghat’, ‘samvedanheen’, ‘foolish’, ‘pitthu’, ‘behri sarkar’ and ‘sexual harassment’
ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ಸಂಚು : ನಿವೃತ ಪೊಲೀಸ್ ಅಧಿಕಾರಿ ದಂಪತಿ ಬಂಧನ
ಗಂಡ ಹೆಂಡತಿ ಸೇರಿ ಪ್ರಧಾನಿಯ ಹತ್ಯೆಗೆ ಸಂಚು ರೂಪಿಸಿದ್ದರು. 2047ಕ್ಕೆ ಭಾರತದಲ್ಲಿ ಇಸ್ಲಾಮಿಕ್ ಆಳ್ವಿಕೆ ಜಾರಿಗೊಳಿಸೋದು ಇವರ ಗುರಿಯಂತೆ
ಬಿಹಾರ : ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ಸಂಚು ರೂಪಿಸಿದ್ದ ಇಬ್ಬರು ಶಂಕಿತರನ್ನು ಬಿಹಾರ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಜಾರ್ಖಂಡ್ ನ ನಿವೃತ ಪೊಲೀಸ್ ಅಧಿಕಾರಿ ಮೊಹಮ್ಮದ್ ಜಲಾವುದ್ದೀನ್ ಹಾಗೂ ಆತನ ಪತ್ನಿ ಅಥರ್ ಪರ್ವೇಜ್ ಎಂದು ಗುರುತಿಸಲಾಗಿದೆ
ಬಿಹಾರ ಪೊಲೀಸರಿಗೆ ಸಿಕ್ಕ ಖಚಿತ ಮಾಹಿತಿ ಹಿನ್ನಲೆಯಲ್ಲಿ ಜುಲೈ 11 ರಂದು ಈ ಕಾರ್ಯಾಚರಮೆ ನಡೆಸಲಾಗಿತ್ತು ಬಿಹಾರದ ನಯಾ ಟೋಲಾ ಪ್ರದೇಶದಲ್ಲಿ ಈ ದಾಳಿ ನಡೆದಿದ್ದು, ಬಂಧಿತರಿಂದ PFI ಸಂಘಟನೆಯ ಕರ ಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಜುಲೈ 12 ರಂದು ಪ್ರಧಾನಿ ನರೇಂದ್ಕರ ಮೋದಿಯವರ ಪಾಟ್ನಾ ಪ್ರವಾಸ ನಿಗದಿಯಾಗಿತ್ತು. ಈ ವೇಳೆ ಅವರನ್ನು ಮುಗಿಸಲು ಹಂತಕರು ಯೋಜನೆ ರೂಪಿಸಿದ್ದರು. ಈ ಸಲುವಾಗಿ ಜುಲೈ 6 ಮತ್ತು ಜುಲೈ 7 ರಂದು ಸಭೆಗಳನ್ನು ನಡೆಸಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಬಂಧಿತ ದಂಪತಿ ದೇಶ ವಿರೋಧಿ ಕಾರ್ಯಕ್ಕಾಗಿ ಪಾಕ್, ಬಾಂಗ್ಲಾ ಮತ್ತು ಟರ್ಕಿಯಿಂದ ಹಣ ಪಡೆಯುತ್ತಿದ್ದರು. 2047ರ ಹೊತ್ತಿಗೆ ಭಾರತದಲ್ಲಿ ಇಸ್ಲಾಮಿಕ್ ಆಳ್ವಿಕೆ ತರುವುದು ಇವರ ಗುರಿಯಾಗಿತ್ತು ಅನ್ನುವುದು ತನಿಖೆ ವೇಳೆ ಗೊತ್ತಾಗಿದೆ, ಇವರು PFI ಸಂಘಟನೆ ಜೊತೆ ಸಂಪರ್ಕ ಹೊಂದಿದ್ದು, ಈ ಹಿಂದೆ SIMIಯೊಂದಿಗೆ ಗುರುತಿಸಿಕೊಂಡಿದ್ದರು ಅನ್ನಲಾಗಿದೆ. ಇದೇ ಪರ್ವೆಜ್ ಸಹೋದರ 2001-02ರಲ್ಲಿ ಸಿಮಿ ಸಂಘಟನೆ ನಿಷೇಧ ಬಳಿಕ ನಡೆದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಈ ದಂಪತಿ ಕೋಮು ಗಲಭೆಗೆ ಪ್ರಚೋದನೆ ಹಾಗೂ ಯುವಕರಿಗೆ ಕತ್ತಿ ಚಾಕು ಬಳಕೆಯ ತರಬೇತಿ ನೀಡುತ್ತಿದ್ದರು ಅನ್ನುವ ಆರೋಪವನ್ನೂ ಎದುರಿಸುತ್ತಿದ್ದಾರೆ.
Discussion about this post