ನನ್ನ ಪತ್ನಿಯೇ ನನಗೆ ಎಚ್ಚರಿಕೆ ಕೊಟ್ಟಿದ್ಲು… ನಾನೇ ಕೇರ್ ಮಾಡಲಿಲ್ಲ… ಆ ಮೇಲೆ ಅರ್ಥವಾಯ್ತು ( Darshan NikitaThukral)
ನಾನು ಮತ್ತೆ ದರ್ಶನ್ ಒಂದಾಗುವುದರ ಬಗ್ಗೆ ದರ್ಶನ್ ಅವರೇ ಯೋಚಿಸಬೇಕು, ನಾನು ಬಗ್ಗೆ ಯೋಚಿಸುವುದಿಲ್ಲ. ಅವರ ಸಿನಿಮಾ ಸೂಪರ್ ಹಿಟ್ ಆಗ್ಲಿ ಎಂದಷ್ಟೇ ನಾನು ಹಾರೈಸ ಬಲ್ಲೆ ಎಂದು ನಿರ್ದೇಶಕ ಓಂ ಪ್ರಕಾಶ್ ರಾವ್ ಹೇಳಿದ್ದಾರೆ.
ಸಿನಿ ಪತ್ರಕರ್ತ ಬಿ ಗಣಪತಿಯವರಿಗೆ ಕೊಟ್ಟಿರುವ ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ಅವರು ಅನೇಕ ಸ್ಫೋಟಕ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. ಅದರಲ್ಲೂ ನಟ ದರ್ಶನ್ ಕುರಿತಂತೆ ಯಾರಿಗೂ ಗೊತ್ತಿಲ್ಲದ ವಿಚಾರಗಳನ್ನು ಹೇಳಿರುವ ಓಂಪ್ರಕಾಶ್, ದರ್ಶನ್ ನಡೆ ನುಡಿಯನ್ನು ವಿವರಿಸಿದ್ದಾರೆ.
ಇದನ್ನು ಓದಿ : Umesh katti : ಶೂ ಧರಿಸಿ ಗಜಪಡೆಗೆ ಪೂಜೆ ಸಲ್ಲಿಸಿದ ಉಮೇಶ್ ಕತ್ತಿ
ಕನ್ನಡದ ನಿರ್ದೇಶಕರನ್ನು ಗೌರವಿಸುವ ಏಕೈಕ ನಟ ಅಂದ್ರೆ ಅದು ದರ್ಶನ್ ಮಾತ್ರ. ಕೆಲಸದಲ್ಲಿ ಮಗುವಿನಂತಹ ಸ್ವಭಾವ ಅವರದ್ದು. ಕೆಲಸಕ್ಕೆ ಹೇಗೆ ಬೇಕಾದರೂ ಅವರನ್ನು ಬಳಸಿಕೊಳ್ಳಬಹುದು. ಆದರೆ ಇತ್ತೀಚೆಗೆ ದರ್ಶನ್ ತಾಕತ್ತನ್ನು ನಿರ್ದೇಶಕರು ಬಳಸಿಕೊಳ್ಳುತ್ತಿಲ್ಲ. ಎರಡು ವಾರ ಸಿನಿಮಾ ಓಡಿದ್ರೆ ಸಾಕು ಅನ್ನುವವರೇ ತುಂಬಿದ್ದಾರೆ. ನೂರು ದಿನಗಳ ಕಾಲ ಓಡುವ ತಾಕತ್ತು ಅವರ ಸಿನಿಮಾಗಳಿಗಿದೆ. ಆದರೆ ಈ ರೀತಿಯಲ್ಲಿ ಸಿನಿಮಾ ನಿರ್ಮಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಕಲಾಸಿಪಾಳ್ಯ, ಅಯ್ಯಾ ಸೇರಿದಂತೆ ತಾವು ಜೊತೆಯಾಗಿ ಮಾಡಿದ 6 ಸಿನಿಮಾಗಳ ಜರ್ನಿಯನ್ನು ನೆನೆದಿರುವ ಓಂಪ್ರಕಾಶ್ ಅವರು ಕಲಾಸಿಪಾಳ್ಯ ಸಿನಿಮಾ ಮಾಡುವಾಗ, ಕಲಾವಿದನೊಬ್ಬ ಮಗನನ್ನು ಗೆಲ್ಲಿಸುವುದಷ್ಟೇ ನನ್ನ ಉದ್ದೇಶವಾಗಿತ್ತು. ತೂಗುದೀಪ ಅವರ ಜೊತೆಗೆ ನಾನು ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದೆ. ಹೀಗಾಗಿ ಕಲಾವಿದನ ಮಗನೊಬ್ಬನಿಗೆ ಸಕ್ಸಸ್ ತಂದುಕೊಡುವುದು ನನ್ನ ಕರ್ತವ್ಯ, ಅದರಂತೆ ಕೆಲಸ ಮಾಡಿದೆ ಅಂದಿದ್ದಾರೆ.
ಇದೇ ಸಂದರ್ಶನದಲ್ಲಿ ದರ್ಶನ್ ಮತ್ತು ಓಂಪ್ರಕಾಶ್ ಸಂಬಂಧ ಹಾಳಾಗಿರುವ ಬಗ್ಗೆ ಮಾತನಾಡಿರುವ ಅವರು ನಾನು ದರ್ಶನ್ ಬೇರೆಯಾಗುವುದಕ್ಕೆ ಕಾರಣ ಆ ಮಹಾತಾಯಿ ಕಾರಣ ಅಂದಿದ್ದಾರೆ. ನಿಖಿತಾ ಅವರೇ ನಮ್ಮ ಸಂಬಂಧ ಹಾಳಾಗಲು ಮೂಲ ಕಾರಣ.
ನನ್ನ ಪತ್ನಿ ಆ ಸಂದರ್ಭದಲ್ಲೇ ನನಗೆ ಎಚ್ಚರಿಕೆ ಕೊಟ್ಟಿದ್ದರು, ಆದರೆ ನಾನು ಕೇಳಲಿಲ್ಲ. ಈಗ ಅವೆಲ್ಲವೂ ಗೊತ್ತಾಗುತ್ತಿದೆ. ಮತ್ತೆ ಒಂದಾಗಲು ಸಾಧ್ಯವಿಲ್ಲವೇ ಅನ್ನುವ ಪ್ರಶ್ನೆಗೆ ಉತ್ತರಿಸಿರುವ ಓಂಪ್ರಕಾಶ್ ಅವರು ಯೋಚಿಸಬೇಕು ಅಂದಿದ್ದಾರೆ.
ಆದರೆ ದರ್ಶನ್ ಮತ್ತು ಓಂಪ್ರಕಾಶ್ ನಡುವೆ ನಿಖಿತಾ ಹುಳಿ ಹಿಂಡಿದ್ದು, ಯಾಕೆ ಮತ್ತು ಹೇಗೆ ಅನ್ನುವುದನ್ನು ಓಂಪ್ರಕಾಶ್ ಬಹಿರಂಗಪಡಿಸಿಲ್ಲ.
Discussion about this post