ಒಂದು ವೇಳೆ ಕಾಂಗ್ರೆಸ್ ಸಚಿವರೇನಾದ್ರೂ ಹೀಗೆ ಮಾಡಿರುತ್ತಿದ್ರೆ ಬಿಜೆಪಿ (Umesh katti) ಆಕಾಶ ಮತ್ತು ಭೂಮಿಯನ್ನು ಒಂದು ಮಾಡಿರುತ್ತಿತ್ತು
ಮೈಸೂರು : ಶೂ ಧರಿಸಿಕೊಂಡು ಗಜಪಡೆಗೆ ಪೂಜೆ ಸಲ್ಲಿಸುವ ಮೂಲಕ ಅರಣ್ಯ ಸಚಿವ ಉಮೇಶ್ ಕತ್ತಿ (Umesh katti) ಆಸ್ತಿಕ ಭಾವನೆಗಳಿಗೆ ಧಕ್ಕೆ ತಂದಿರುವ ಘಟನೆ ಹುಣಸೂರಿನ ವೀರನಹೊಸಹಳ್ಳಿಯಲ್ಲಿ ನಡೆದಿದೆ.
ವಿಶ್ವವಿಖ್ಯಾತ ನಾಡಹಬ್ಬ ದಸರಾಗೆ ನಡೆಯುತ್ತಿರುವ ಭರ್ಜರಿಯ ಸಿದ್ದತೆ ಭಾಗವಾಗಿ ಇಂದು ಗಜಪಡೆಗಳಿಗೆ ಪೂಜೆ ನೆರವೇರಿಸಲಾಯ್ತು. ಹುಣಸೂರಿನ ವೀರನಹೊಸಹಳ್ಳಿಯಲ್ಲಿ ಗಜಪಡೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ .ಸೋಮೇಶೇಖರ್ ಮತ್ತು ಅರಣ್ಯ ಸಚಿವ ಉಮೇಶ್ ಕತ್ತಿ ಪೂಜೆ ಸಲ್ಲಿಸಿದರು.
ಈ ವೇಳೆ ಉಮೇಶ್ ಕತ್ತಿ ಶೂ ಧರಿಸಿಕೊಂಡು ಪೂಜೆ ಮಾಡಿರುವುದು ಟೀಕೆಗೆ ಕಾರಣವಾಗಿದೆ. ಪ್ರತ್ಯೇಕ ರಾಜ್ಯ ಹೇಳಿಕೆ ಮೂಲಕ ಸದಾ ವಿವಾದ ಸೃಷ್ಟಿಸುತ್ತಿದ್ದ ಕತ್ತಿ, ಇದೀಗ ಪೂಜೆಯ ವೇಳೆ ಶೂ ಧರಿಸಿ ಸುದ್ದಿಯಾಗಿದ್ದಾರೆ.
ಪೂಜೆಯ ಬಳಿಕ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆ ಮೈಸೂರಿಗೆ ಪಯಣ ಬೆಳೆಸಿದೆ.
ಇದನ್ನು ಓದಿ : Wardrobe malfunction : ವಸ್ತ್ರ ದೋಷದಿಂದ ಗುಪ್ತಾಂಗ ಹೊರ ಬಿದ್ದು ಸೋತ ಅಥ್ಲೀಟ್
ಉಮೇಶ್ ಕತ್ತಿಯ ಜಾಗದಲ್ಲಿ ಕಾಂಗ್ರೆಸ್ ನ ಸಚಿವರೊಬ್ಬರು ಇರುತ್ತಿದ್ರೆ ಬಿಜೆಪಿಯ ಪ್ರತಿಕ್ರಿಯೆ ಹೇಗಿರುತ್ತಿತ್ತು. ಹಿಂದೂ ಭಾವನೆಗಳಿಗೆ ಧಕ್ಕೆ ಎಂದು ಬೀದಿಗಿಳಿಯುತ್ತಿತ್ತು. ಇದೀಗ ತಮ್ಮದೇ ಪಕ್ಷದ ಸಚಿವರೊಬ್ಬರು ಎಡವಟ್ಟು ಮಾಡಿಕೊಂಡ್ರೆ ದಿವ್ಯ ಮೌನ ಆವರಿಸಿದೆ.
ಇದನ್ನು ಓದಿ : Nupur sharma ಬೆಂಬಲಿಸಿದ ಯುವಕನ ಮೇಲೆ ಹಲ್ಲೆ
Discussion about this post