ಟ್ರೇಲರ್ ಬಿಡುಗಡೆ ಮಾಡಿರುವ ಚಿತ್ರತಂಡ ಶೀಘ್ರದಲ್ಲಿ ತೆರೆಗೆ ಬರುವ ತಯಾರಿಯಲ್ಲಿದೆ ( Dhamaka)
ಪ್ರತಿ ಚಿತ್ರರಸಿಕರು ಸಿನಿಮಾ ನೋಡುವ ಪ್ರಮುಖ ಉದ್ದೇಶ ಮನರಂಜನೆ. ಅದರಲ್ಲಿಯೂ ಹಾಸ್ಯ ಸನ್ನಿವೇಶಗಳಿಗೆ ಮನಸೋಲದವರೇ ಇಲ್ಲ. ಹೀಗಿರುವಾಗ ಒಂದಿಡೀ ಚಿತ್ರವೇ ಕಾಮಿಡಿಮಯವಾಗಿದ್ದರೆ ಅದರತ್ತ ಪ್ರೇಕ್ಷಕರು ಆಕರ್ಷಿತರಾಗದಿರಲು ಸಾಧ್ಯವೇ ಇಲ್ಲ. ಈ ಕಾರಣದಿಂದಲೇ ಅಗಾಧ ನಿರೀಕ್ಷೆ ಮೂಡಿಸಿರುವ ಧಮಾಕ ( Dhamaka)ಸಿನಿಮಾದ ಟ್ರೇಲರ್ ಅನಾವರಣಗೊಂಡಿದೆ.
Read More : Mandya honey trap : ಬಿಜೆಪಿ ಮುಖಂಡನಿಗೆ ಹನಿ ಟ್ರ್ಯಾಪ್ : ಸಲ್ಮಾಭಾನು ಎಂಬಾಕೆಯನ್ನು ಬಂಧಿಸಿದ ಪೊಲೀಸರು
ಈಗಾಗಲೇ ಟೀಸರ್ ಹಾಗೂ ಹಾಡಿನ ಮೂಲಕ ಗಮನಸೆಳೆದಿರುವ ಧಮಾಕ ಟ್ರೇಲರ್ ನೋಡುಗರಿಗೆ ಕಚಗುಳಿ ಇಡ್ತಿದೆ. ಮಧ್ಯಮ ವರ್ಗದ ಕುಟುಂಬದಲ್ಲಿ ನಡೆಯುವ ಕಥೆಯ ಎಳೆಯನ್ನು ಒಳಗೊಂಡ ಟ್ರೇಲರ್ ರಿವೀಲ್ ಆಗಿದ್ದು, ಹಾಸ್ಯನಟ ಚಿಕ್ಕಣ್ಣ ನಿರೂಪಣೆಯಿಂದ ಶುರುವಾಗ ಟ್ರೇಲರ್ ಝಲಕ್ ಭರಪೂರ ನಗುವಿನ ಮ್ಯಾಜಿಕ್ಕನ್ನು ನಿರ್ದೇಶಕ ಲಕ್ಷ್ಮಿ ರಮೇಶ್ ಪ್ರೇಕ್ಷಕರಿಗೆ ಉಣ ಬಡಿಸಿದ್ದಾರೆ.
ಕಾಮಿಡಿ ಕಿಲಾಡಿ ಖ್ಯಾತಿಯ ಶಿವರಾಜ್ ಕೆ ಆರ್ ಪೇಟೆ ನಾಯಕನಾಗಿ ನೋಡುಗರನ್ನು ನಕ್ಕು ನಲಿಸ್ತಾರೆ. ಇವರಿಗೆ ಜೋಡಿಯಾಗಿ ನಯನಾ ಮಿಂಚಿದ್ದಾರೆ. ಮನರಂಜನೆಯೇ ಪ್ರಧಾನವಾಗಿರುವ ಕಥೆ, ಅದಕ್ಕೆ ಪೂರಕವಾದ ಪಾತ್ರಗಳು ಮತ್ತು ಕ್ಷಣ ಕ್ಷಣವೂ ನಗೆಯುಕ್ಕಿಸುವಂತೆ ಪೋಣಿಸಿರುವ ಹಾಸ್ಯ ಸನ್ನಿವೇಶಗಳೊಂದಿಗೆ ಧಮಾಕ ಟ್ರೇಲರ್ ನೋಡುಗರನ್ನು ಆವರಿಸಿಕೊಳ್ಳುತ್ತಿದೆ. ಮೋಹನ್ ಜುನೇಜಾ, ಕೋಟೆ ಪ್ರಭಾಕರ್, ಮಿಮಿಕ್ರಿ ಗೋಪಾಲ್, ಅರುಣಾ ಬಾಲರಾಜ್ ಮುಂತಾದ ಕಲಾಬಳಗ ಚಿತ್ರದಲ್ಲಿದೆ.
ಸಂಪೂರ್ಣ ಹಾಸ್ಯಮಯ ಕಥಾಹಂದರ ಹೊಂದಿರುವ ಧಮಾಕ ಚಿತ್ರವನ್ನು ಎಸ್ ಆರ್ ಮೀಡಿಯಾ ಪ್ರೊಡಕ್ಷನ್ ಬ್ಯಾನರ್ ನಡಿ ಸುನೀಲ್ ಎಸ್ ರಾಜ್ ಮತ್ತು ಅನ್ನಪೂರ್ಣ ಪಾಟೀಲ ನಿರ್ಮಾಣ ಮಾಡಿದ್ದು, ಒಂದಷ್ಟು ನಿರ್ದೇಶಕರ ಗರಡಿಯಲ್ಲಿ ಪಳಗಿರುವ ಲಕ್ಷ್ಮೀ ರಮೇಶ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಹಾಲೇಶ್ ಎಸ್ ಛಾಯಾಗ್ರಹಣ, ವಿಕಾಸ್ ವಸಿಷ್ಠ ಸಂಗೀತ, ರಘು ಆರ್ ಜೆ ನೃತ್ಯ ನಿರ್ದೇಶನ ಮತ್ತು ವಿನಯ್ ಕೂರ್ಗ್ ಸಂಕಲನ ಸಿನಿಮಾಕ್ಕಿದೆ. ಟ್ರೇಲರ್ ಬಿಡುಗಡೆ ಮಾಡಿರುವ ಚಿತ್ರತಂಡ ಶೀಘ್ರದಲ್ಲಿ ತೆರೆಗೆ ಬರುವ ತಯಾರಿಯಲ್ಲಿದೆ.
Discussion about this post