ಚಂದನವನಕ್ಕೆ ಅಪ್ಪಟ ಕನ್ನಡಿತಿಯೊಬ್ಬಳು ನಾಯಕಿಯಾಗಿ ಪ್ರವೇಶಿಸಲು ಸಜ್ಜಾಗಿದ್ದಾರೆ. ಅದು ಬೇರಾರು ಅಲ್ಲ ಕನಸಿನ ರಾಣಿ ಮಾಲಾಶ್ರೀ ಮಗಳು ರಾಧನಾ ರಾಮ್ (Malashree daughter Radhana Ram)
ಬೆಂಗಳೂರು : ಕೋಟಿ ನಿರ್ಮಾಪಕ ಖ್ಯಾತಿಯ ರಾಮು ಕನಸಿನ ರಾಣಿ ಖ್ಯಾತಿ. ಮಾಲಾಶ್ರೀ ದಂಪತಿಯ ಮಗಳು ರಾಧನಾ ರಾಮ್ ( Malashree daughter Radhana Ram) ಇದೀಗ ಚಿತ್ರರಂಗಕ್ಕೆ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಶುಕ್ರವಾರ ಮುಹೂರ್ತ ಕಂಡ ರಾಕ್ಲೈನ್ ವೆಂಕಟೇಶ್ ನಿರ್ಮಾಣದ ಹೊಸ ಚಿತ್ರದ ಮೂಲಕ ರಾಧನಾ ರಾಮ್ ನಾಯಕಿ ಪಟ್ಟ ಅಲಂಕರಿಸಿದ್ದಾರೆ.
ರಾಧನಾ (Malashree daughter Radhana Ram) ಈ ಹಿಂದೆ ಅನನ್ಯ ಅನ್ನುವ ಹೆಸರಿನಿಂದ ಗುರುತಿಸಿಕೊಂಡಿದ್ದರು. ಮಗಳನ್ನು ಚಿತ್ರರಂಗಕ್ಕೆ ಪರಿಚಯಿಸಬೇಕು ಅನ್ನುವ ಕನಸು ರಾಮು ದಂಪತಿಗೆ ಈ ಹಿಂದೆಯೇ ಇತ್ತು. ಆದರೆ ಮಗಳ ಮೇಲೆ ಎಲ್ಲವೂ ನಿರ್ಧಾರ ಅಂದುಕೊಂಡಿದ್ದರು. ಆಕೆಗೆ ಆಸಕ್ತಿ ಇದ್ರೆ ನೋಡೋಣ ಅನ್ನುವುದು ಅವರ ನಿರ್ಧಾರವಾಗಿತ್ತು. ರಾಮು ಕನಸಿನಂತೆ ಮಗಳು ನಟನೆ ಬಗ್ಗೆ ಆಸಕ್ತಿ ತೋರಿದಳು. ಹೀಗಾಗಿ ಫೋಟೋ ಶೂಟ್ ಮಾಡಿಸಿದ ಮಾಲಾಶ್ರೀ ಮುಂಬೈನಲ್ಲಿ ನಟನೆ ಮತ್ತು ಡ್ಯಾನ್ಸ್ ತರಬೇತಿ ಕೊಡಿಸಿದ್ದಾರೆ.

ಇದನ್ನೂ ಓದಿ : Amazon pressure cooker : ಕೆಟ್ಟು ಹೋದ ಕುಕ್ಕರ್ ಮಾರಿದ ಅಮೆಜಾನ್ 1 ಲಕ್ಷ ರೂಪಾಯಿ ದಂಡ
ಇದೇ ವೇಳೆ ದರ್ಶನ್ ನಾಯಕತ್ವದಲ್ಲಿ ರಾಕ್ ಲೈನ್ ವೆಂಕಟೇಶ್ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದರು. ತರುಣ್ ಸುಧೀರ್ ಅವರೇ ಹೆಣೆದ ಕಥೆಗೆ ಅವರೇ ಸ್ಟಾರ್ಟ್ ಕ್ಯಾಮಾರ, ಅಕ್ಷನ್, ರೋಲಿಂಗ್ ಹೇಳಲಿದ್ದಾರೆ. ಹೊಸ ಚಿತ್ರಕ್ಕಾಗಿ ನಾಯಕಿಯ ಹುಡುಕಾಟದಲ್ಲಿದ್ದ ವೇಳೆ ರಾಮು ಮಗಳನ್ನು ಚಿತ್ರರಂಗಕ್ಕೆ ಪರಿಚಯಿಸುವ ಐಡಿಯಾ ಹೊಳೆದಿದೆ. ಹೇಳಿ ಕೇಳಿ ರಾಮು ಇವರೆಲ್ಲರೂ ಗುರುಗಳ ಸ್ಥಾನದಲ್ಲಿದ್ದವರು. ಹೀಗಾಗಿ ದರ್ಶನ್ ಕೂಡಾ ಸೈ ಅಂದರು.
ತಂದೆ ಮಾಡಿದ ಪುಣ್ಯ ಅನ್ನುವಂತೆ ಮಗಳು ರಾಧನಾ ದೊಡ್ಡ ಮಟ್ಟದಲ್ಲಿ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಮಾಲಾಶ್ರೀ ನಿರೀಕ್ಷೆ ಪಟ್ಟದಕ್ಕಿಂತ ನೂರು ಪಟ್ಟು ದೊಡ್ಡದಾಗಿ ಮಗಳು ಚಿತ್ರರಂಗದಲ್ಲಿ ಲಾಂಚ್ ಆಗುತ್ತಿದ್ದಾಳೆ.

ಮಾಲಾಶ್ರೀ ನಂಜುಂಡಿ ಕಲ್ಯಾಣ ಮಾಡಿದಾಗ 15 ವರ್ಷ, ಇದೀಗ ಮಗಳನ್ನು 21ನೇ ವರ್ಷದಲ್ಲಿ ಪರಿಚಯಿಸುತ್ತಿದ್ದಾರೆ.
ಇದೇ ವೇಳೆ ಮಗಳ ಹೆಸರು ಬದಲಾವಣೆ ಕುರಿತಂತೆ ಮಾತನಾಡಿರುವ ಮಾಲಾಶ್ರೀ, ಮಗಳನ್ನು ಚಿತ್ರರಂಗಕ್ಕೆ ಪರಿಚಯಿಸುವಾಗ ಹೆಸರು ಬದಲಾಯಿಸುವ ಐಡಿಯಾ ರಾಮು ಅವರದ್ದು. ಏನಾದರೂ ವಿಶೇಷ ಹೆಸರು ಬೇಕು ಅನ್ನುವುದು ಅವರ ಕನಸಾಗಿತ್ತು. ಅದರಂತೆ ರಾಧನಾ ಹೆಸರಿಡಲಾಗಿದೆ ಅಂದಿದ್ದಾರೆ.
Discussion about this post