ಮುಂಬೈಗೆ ಪ್ರಯಾಣಿಸುತ್ತಿದ್ದ ಬಸ್ ನಲ್ಲಿ 30 ಜನ ಪ್ರಯಾಣಿಕರಿದ್ದರು. ಅಪಘಾತದ (national travels bus accident ) ಬೆನ್ನಲ್ಲೇ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಾವೇರಿ : ಬೆಂಗಳೂರಿನಿಂದ ಮುಂಬೈ ಪ್ರಯಾಣಿಸುತ್ತಿದ್ದ ಖಾಸಗಿ ಬಸ್ ಪಲ್ಟಿಯಾಗಿ ( national travels bus accident ) 10 ಮಂದಿ ಗಾಯಗೊಂಡ ಘಟನೆ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರು ಬಳಿ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿದ ಬಸ್ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಮಗುಚಿ ಬಿದ್ದಿದೆ.
ಬೆಂಗಳೂರಿನಿಂದ ಮುಂಬೈಗೆ ತೆರಳುತ್ತಿದ್ದ ನ್ಯಾಷನಲ್ ಟ್ರಾವೆಲ್ಸ್ ಗೆ ಸೇರಿದ ಈ ಬಸ್ ನಲ್ಲಿ 30 ಜನ ಪ್ರಯಾಣಿಕರಿದ್ದರು ಎಂದು ಗೊತ್ತಾಗಿದೆ. ಈ ದುರ್ಘಟನೆಗೆ ಚಾಲಕನ ನಿಯಂತ್ರಣ ತಪ್ಪಿದ್ದೇ ಕಾರಣ ಅನ್ನಲಾಗಿದೆ. ಬಸ್ ಪಲ್ಟಿಯಾಗಿ ರಸ್ತೆ ಪಕ್ಕಕ್ಕೆ ಬಿದ್ದ ಕಾರಣ ಬಸ್ ಗಾಜು ಪುಡಿ ಪುಡಿಯಾಗಿದೆ. ಅದೃಷ್ಟ ಅನ್ನುವಂತೆ 10 ಜನ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದೆ.
ಇದನ್ನೂ ಓದಿ : PSI Exam Scam Amrut Paul : ಹರ್ಷನ ಕೊಲೆ ಆರೋಪಿಗಳಿಗೆ ಮೊಬೈಲ್ ಸಿಗುತ್ತದೆ… ಅಮೃತ ಪಾಲ್ ಗೆ ಎಣ್ಣೆ ಸಿಗಲ್ವ….
ಘಟನೆಯ ಬೆನ್ನಲ್ಲೇ ಸ್ಥಳಕ್ಕೆ ಬಂದ ರಕ್ಷಣಾ ತಂಡ ಗಾಯಗೊಂಡವರನ್ನು ಬ್ಯಾಡಗಿ ತಾಲೂಕಿನ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆ ಸಂಬಂಧ ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಧರ್ಮಸ್ಥಳಕ್ಕೆ ಶಾಸನ ಸಭೆ ಹೊಸದಲ್ಲ : ವೀರೇಂದ್ರ ಹೆಗ್ಗಡೆ ತಂದೆ ತಾತ ಕೂಡಾ ಶಾಸಕರಾಗಿದ್ದರು
ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರನ್ನು ( Dharmasthala veerendra hegde ) ರಾಜ್ಯಸಭಾ ಸದಸ್ಯರಾಗಿ ನೇಮಿಸಲಾಗಿದೆ. ಅರ್ಹರೊಬ್ಬರಿಗೆ ಈ ಅವಕಾಶ ಸಿಕ್ಕಿದೆ ಅನ್ನುವುದರಲ್ಲಿ ಅನುಮಾನವಿಲ್ಲ. ಆದರೆ ಈ ಆಯ್ಕೆಯನ್ನು ರಾಜಕೀಯ ಹೊರತುಪಡಿಸಿ ನೋಡುವುದು ಇಂದಿನ ಅಗತ್ಯವಾಗಿದೆ.
ಬೆಂಗಳೂರು : ಧರ್ಮಸ್ಥಳ ಧರ್ಮಾಧಿಕಾರಿ ( Dharmasthala veerendra hegde ) ವೀರೇಂದ್ರ ಹೆಗ್ಗಡೆಯವರು ರಾಜ್ಯಸಭಾ ಸದಸ್ಯರಾಗಿ ನೇಮಕಗೊಂಡಿದ್ದಾರೆ. ಈ ಮೂಲಕ ಶಾಸನ ಸಭೆಗೆ 2ನೇ ಜೈನ ಸಮುದಾಯದ ಪ್ರತಿನಿಧಿ ಪ್ರವೇಶಿಸಿದಂತಾಗಿದೆ.
ಹಾಗೇ ನೋಡಿದರೆ ಶ್ರೀಕ್ಷೇತ್ರದ ಧರ್ಮಸ್ಥಳ ಧರ್ಮಾಧಿಕಾರಿ ಪರಂಪರೆಗೆ ಶಾಸನ ಸಭೆ ಹೊಸದಲ್ಲ. ಡಾ, ವೀರೇಂದ್ರ ಹೆಗ್ಗಡೆಯವರ ತಾತಾ ಮಂಜಯ್ಯ ಹೆಗ್ಗಡೆ 1927 ರಿಂದ 15 ವರ್ಷಗಳ ಕಾಲ ಮದ್ರಾಸ್ ಶಾಸನ ಸಭೆಯ ಸದಸ್ಯರಾಗಿದ್ದರು. ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ತಂದೆ ರತ್ಮವರ್ಮ ಹೆಗ್ಗಡೆ 1957ರಲ್ಲಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಪ್ರಥಮ ಕಾಂಗ್ರೆಸ್ ಶಾಸಕರಾಗಿದ್ದರು.
1967ರಲ್ಲಿ ಕಾಪು ಕ್ಷೇತ್ರದಿಂದ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದರೂ ಅವರು ಗೆದ್ದಿರಲಿಲ್ಲ. ಇದೀಗ ಡಾ. ವೀರೇಂದ್ರ ಹೆಗ್ಗಡೆ ರಾಜ್ಯಸಭೆಗೆ ನೇಮಕಗೊಂಡಿದ್ದಾರೆ.
Discussion about this post