ಪೊಲೀಸ್ ನೇಮಕಾತಿ ಹಗರಣದಲ್ಲಿ ( PSI Exam Scam Amrut Paul) ಜೈಲು ಸೇರಿರುವ ಎಡಿಜಿಪಿ ಅಮೃತಪಾಲ್ ಅವರಿಗೆ ಇದೀಗ ನಿದ್ದೆ ಬರುತ್ತಿಲ್ಲವಂತೆ. ನಿತ್ಯ ಎಣ್ಣೆ ಹೊಡೆಯುವ ಅಭ್ಯಾಸ ಇಟ್ಟುಕೊಂಡ ಕರ್ಮಕ್ಕೆ ಇದೀಗ ಅವರು ಒದ್ದಾಡುತ್ತಿದ್ದಾರಂತೆ
ಬೆಂಗಳೂರು : ಉಪ್ಪು ತಿಂದವನು ನೀರು ಕುಡಿಯಲೇ ಬೇಕು. ಅದರಂತೆ ಇದೀಗ ಪೊಲೀಸ್ ನೇಮಕಾತಿ ಹಗರಣದಲ್ಲಿ ಎಡಿಜಿಪಿ ಅಮೃತಪಾಲ್ (PSI Exam Scam Amrut Paul) ಜೈಲು ಸೇರಿದ್ದಾರೆ. ಅವರೇನೋ ಜೈಲು ಸೇರಿದ್ರು, ಇದೀಗ ಪೊಲೀಸರಿಗೆ ತಲೆ ನೋವು ಶುರುವಾಗಿದೆ.
ಜೈಲು ಸೇರಿದ ಮೊದಲ ರಾತ್ರಿ ನನಗೆ ಸಿಗರೇಟು ಬೇಕು, ನನಗೆ ಎಣ್ಣೆ ಬೇಕು ಎಂದು ಪಟ್ಟು ಹಿಡಿದಿದ್ದಾರೆ ಎಂದು ನ್ಯೂಸ್ ಚಾನೆಲ್ ವರದಿ ಮಾಡಿದೆ.
ಇದನ್ನೂ ಓದಿ : ಬಾದಾಮಿಯಲ್ಲಿ ಸೋಲುವ ಭೀತಿ ಕೋಲಾರಕ್ಕೆ ಸಿದ್ದರಾಮಯ್ಯ ವಲಸೆ
ಅಮೃತ್ ಪಾಲ್ ಡಿಮ್ಯಾಂಡ್ ಕೇಳಿ ಪೊಲೀಸರೇ ಶಾಕ್ ಆಗಿದ್ದು, ಕಾನೂನು ನಿಯಮ ಎಲ್ಲಾ ಗೊತ್ತಿರುವವರೇ ಹೀಗಾದ್ರೆ ಹೇಗೆ ಎಂದು ತಲೆ ಕೆಡಿಸಿಕೊಂಡಿದ್ದಾರೆ. ಧಮ್ ಬೇಕು.. ವಿಸ್ಕಿ ಬೇಕು ಅಂದ ತಕ್ಷಣ ಕೊಟ್ರೆ ಎಲ್ಲಿ ಕೆಲಸ ಕಳೆದುಕೊಳ್ಳಬೇಕಾಗುತ್ತದೋ ಅನ್ನುವ ಆತಂಕ ಪೊಲೀಸರದ್ದು. ಪೊಲೀಸ್ ಕಸ್ಟಡಿಯಲ್ಲಿ ಅದನ್ನು ಕೊಡಲು ಸಾಧ್ಯವಿಲ್ಲ. ಅವೆಲ್ಲಾ ನಿಯಮಕ್ಕೆ ವಿರುದ್ಧ ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ.
ಇನ್ನು ಈ ಸುದ್ದಿಯನ್ನು ಓದಿದ ಓದುಗರೊಬ್ಬರು ಹರ್ಷನ ( Harsha murder case ) ಕೊಲೆ ಪ್ರಕರಣ ಆರೋಪಿಗಳಿಗೆ ಜೈಲಿನಲ್ಲಿ ಮೊಬೈಲ್ ಸಿಗುತ್ತದೆ, ಟಿಕ್ ಟಾಕ್ ಮಾಡ್ತಾರೆ. ದೊಡ್ಡ ಹುದ್ದೆಯ ಪೊಲೀಸರಿಗೆ ಎಣ್ಣೆ ಸಿಗಲ್ವ ಎಂದು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ : ಬೋರಿಸ್ ಜಾನ್ಸನ್ ರಾಜೀನಾಮೆ ತೆರವಾದ ಸ್ಥಾನಕ್ಕೆ ಇನ್ಫೋಸಿಸ್ ನಾರಾಯಣ ಮೂರ್ತಿ ಅಳಿಯ
ಈ ನಡುವೆ ನಾನು ನ್ಯಾಯಾಧೀಶರ ಮುಂದೆಯೇ ಹೇಳಿಕೆ ನೀಡಲು ಬಯಸುತ್ತೇನೆ ಎಂದು ಅಮೃತ ಪಾಲ್ ಹೇಳಿದ್ದಾರೆ ಅನ್ನಲಾಗಿದ್ದು, ರಾಜಕಾರಣಿಗಳ ಹೆಸರು ಹೊರ ಬರುವ ಸಾಧ್ಯತೆಗಳಿದೆ ಅನ್ನುವ ಗಾಳಿ ಸುದ್ದಿ ಹರಿದಾಡುತ್ತಿದೆ.
ಊಟದ ಬಾಕ್ಸ್ ಎಂದು ಟಿಫಿನ್ ತೆರೆದ್ರೆ ಸ್ಫೋಟಿಸಿದ್ದು ಬಾಂಬ್ : ಇಬ್ಬರು ಕಾರ್ಮಿಕರ ಸಾವು
ತಿರುವನಂತಪುರ : ಗುಜರಿ ಸಂಗ್ರಹಿಸುವಾಗ ಬಾಂಬ್ ಸ್ಫೋಟಗೊಂಡು ಇಬ್ಬರು ಅಸ್ಸಾಂ ಮೂಲದ ಕಾರ್ಮಿಕರು ಮಡತಪಟ್ಟ ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿದೆ. ಮೃತರನ್ನು ಫಸಲ್ ಹಕ್ ( 50 ) ಮತ್ತು ಅವರ ಪುತ್ರ ಶಾಹೀದುಲ್ (22) ಎಂದು ಗುರುತಿಸಲಾಗಿದೆ. ತಂದೆ ಮಗ ಗುಜರಿ ಸಂಗ್ರಹಿಸುವ ಕೆಲಸ ಮಾಡುತ್ತಿದ್ದರು. ಹಾಗೇ ಗುಜರಿ ಸಂಗ್ರಹಿಸುವಾಗ ಸ್ಟೀಲ್ ಟಿಫನ್ ಬಾಕ್ಸ್ ಸಿಕ್ಕಿದೆ. ಊಟದ ಬಾಕ್ಸ್ ಇರಬಹುದು ಎಂದು ತೆರೆದ್ರೆ ಬಾಂಬ್ ಸ್ಫೋಟಗೊಂಡಿದೆ.
ಈ ವೇಳೆ ಸ್ಥಳದಲ್ಲೇ ಫಸಲ್ ಹಕ್ ಮೃತಪಟ್ರೆ, ಪುತ್ರ ಶಾಹೀದುಲ್ ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ. ಇದೀಗ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಕೇರಳ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ. ಗುರುವಾರ ಸಂಘೆ ದುರ್ಘಟನೆ ಸಂಭವಿಸಿದ ಬೆನ್ನಲ್ಲೇ ಬಾಂಬ್ ನಿಷ್ಕ್ರೀಯ ದಳ, ಶ್ವಾನ ದಳ ಸ್ಥಳಕ್ಕೆ ಆಗಮಿಸಿದ್ದು ಸಜೀವ ಬಾಂಬ್ ಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಅದೃಷ್ಟ ಅನ್ನುವಂತೆ ಯಾವುದೇ ಸಜೀವ ಬಾಂಬ್ ಗಳು ಪತ್ತೆಯಾಗಿಲ್ಲ.
ಇದನ್ನೂ ಓದಿ : ಮೇಕಪ್ ಮಹಿಳೆಯ ಮಹಿಮೆ
Discussion about this post