ಸಲ್ಮಾಭಾನು ಬೀಸಿದ ಸ್ಪೈ ಕ್ಯಾಮಾರ ಜಾಲಕ್ಕೆ ಮತ್ತಷ್ಟು ಮಂದಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.( Mandya honey trap)
ಮಂಡ್ಯ ಬಿಜೆಪಿ ಮುಖಂಡ, ಪ್ರತಿಷ್ಠಿತ ಚಿನ್ನದ ವ್ಯಾಪಾರಿಯೊಬ್ಬರು ಹನಿಟ್ರ್ಯಾಪ್ ಬಲೆಗೆ ಬಿದ್ದ ಸುದ್ದಿ ತಡವಾಗಿ ಬೆಳಕಿಗೆ ಬಂದಿದೆ. 6 ತಿಂಗಳ ಹಿಂದೆ ಈ ಘಟನೆ ನಡೆದಿದ್ದು, ಇತ್ತೀಚೆಗೆ ದೂರು ದಾಖಲಾದ ಹಿನ್ನಲೆಯಲ್ಲಿ ಮಹಿಳೆಯೊಬ್ಬಳನ್ನು ಪೊಲೀಸರು ಬಂಧಿಸಿದ್ದಾರೆ.( Mandya honey trap)
ಕಳೆದ ಫೆಬ್ರವರಿ 26 ರಂದು ಮೈಸೂರಿನಲ್ಲಿ ಈ ಘಟನೆ ನಡೆದಿತ್ತು. ಡ್ರಾಪ್ ನೀಡುವ ನೆಪದಲ್ಲಿ ಚಿನ್ನದ ವ್ಯಾಪಾರಿ ಜಗನ್ನಾಥ್ ಶೆಟ್ಟಿ ಎನ್ನುವವರನ್ನು ಅಪಹರಣ ಮಾಡಿ, ಲಾಡ್ಜ್ಗೆ ಕರೆದುಕೊಂಡು ಹೋಗಿ ಯುವತಿಯನ್ನು ಬಿಟ್ಟು ವಿಡಿಯೋ ಚಿತ್ರೀಕರಣ ಮಾಡಿ 50 ಲಕ್ಷ ರೂಪಾಯಿ ವಸೂಲಿ ಮಾಡಿರುವ ಘಟನೆ ಇದಾಗಿದೆ.
ಇದನ್ನೂ ಓದಿ : Agriculture : ತೋಟಕ್ಕೆ ವಿಷ ಸುರಿಯುತ್ತೀರಾ…ಕ್ಯಾನ್ಸರ್ ನಿಮ್ಮ ಮನೆಯಂಗಳಕ್ಕೆ ತಲುಪಿದೆ ಅಂದುಕೊಳ್ಳಿ
ಮಂಗಳೂರಿಗೆ ತೆರಳಲು ಮಂಡ್ಯದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ವೇಳೆ, ಮೈಸೂರಿಗೆ ಡ್ರಾಪ್ ಕೊಡುವುದಾಗಿ ಕಾರಿನಲ್ಲಿ ನಾಲ್ವರು ಕರೆದೊಯ್ದಿದ್ದರು. ಬಳಿಕ ಮೈಸೂರಿನ ದರ್ಶನ್ ಪ್ಯಾಲೇಸ್ಗೆ ಕರೆದುಕೊಂಡು ಹೋಗಿ ಯುವತಿಯೊಬ್ಬಳನ್ನು ಬಿಟ್ಟು ನಂತರ ಅವರ ಜತೆ ಜೊತೆಗಿನ ವಿಡಿಯೋ ಚಿತ್ರೀಕರಣ ಮಾಡಲಾಗಿತ್ತು.
ಬಳಿಕ ವಿಡಿಯೋ ತೋರಿಸಿ 4 ಕೋಟಿಗೆ ಬೇಡಿಕೆ ಇಡಲಾಗಿತ್ತು. ಕೊನೆಗೆ 50 ಲಕ್ಷ ಕೊಟ್ಟು ಜಗನ್ನಾಥ ಶೆಟ್ಟಿ ಕೈ ತೊಳೆದುಕೊಂಡಿದ್ದರು. ಇದಾದ ಬಳಿಕ ಪುನಃ ಹಣಕ್ಕೆ ಬೇಡಿಕೆ ಇಟ್ಟ ಕಾರಣ ದೂರು ದಾಖಲು ಮಾಡಿದ್ದಾರೆ.

ಆರು ತಿಂಗಳ ಬಳಿಕ ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಗೆ ಜಗನ್ನಾಥ ಶೆಟ್ಟಿ ದೂರು ನೀಡಿದ್ದು ದೂರು ಆಧರಿಸಿ ಸಲ್ಮಾಭಾನು ಎಂಬ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.
ಸಲ್ಮಾಭಾನು ಮತ್ತಷ್ಟು ಪುರುಷರಿಗೆ ಹನಿ ಟ್ರ್ಯಾಪ್ ಮಾಡಿರುವ ಬಗ್ಗೆ ಮಾಹಿತಿಗಳು ಲಭಿಸಿದ್ದು, ಪೊಲೀಸರು ಈ ನಿಟ್ಟಿನಲ್ಲಿ ತನಿಖೆ ಮುಂದುವರಿಸಿದ್ದಾರೆ.
Discussion about this post