ಮದುವೆ ಮನೆಯಲ್ಲಿ ಕೇವಲ ಆಹಾರದ ವಿಚಾರಕ್ಕೆ ಕಿತ್ತಾಡಿಕೊಳ್ಳುವ ಮಂದಿ ಅದೆಷ್ಟು ಆಯೋಗ್ಯರು ಇರಬೇಕು ( Papad kerala)
ಕೇರಳ : ಎರಡನೇ ಸಲ ಹಪ್ಪಳ ( Papad kerala) ಸಿಕ್ಕಿಲ್ಲ ಎಂದು ವರನ ಕಡೆಯವರು ತೆಗೆದೆ ಕ್ಯಾತೆ ಜಗಳಕ್ಕೆ ತಿರುಗಿ ಕಲ್ಯಾಣ ಮಂಟಪ ಧ್ವಂಸಗೊಂಡ ಘಟನೆ ಕೇರಳದ ಹರಿಪಾದೆಯಲ್ಲಿ ನಡೆದಿದೆ.
ಕೊಚ್ಚಿಯ ಹರಿಪಾದ ಎಂಬಲ್ಲಿ ಅದ್ದೂರಿ ಮದುವೆ ನಿಗದಿಯಾಗಿತ್ತು. ವಿಧಿ ವಿಧಾನ ಮುಕ್ತಾಯದ ಬಳಿಕ ಭೋಜನ ಕೂಟವೂ ಪ್ರಾರಂಭಗೊಂಡಿತ್ತು. ಈ ವೇಳೆ ಊಟಕ್ಕೆ ಕೂತವರಿಗೆ ಹಪ್ಪಳ ಸೇರಿದಂತೆ ವಿವಿಧ ಖಾದ್ಯಗಳನ್ನು ಬಡಿಸಲಾಗಿತ್ತು. ಇದೇ ವೇಳೆ ವರನ ಕಡೆಯವರು ಎರಡನೇ ಹಪ್ಪಳ ಕೇಳಿದ್ದಾರೆ. ಅದು ಒಬ್ಬರು ಇಬ್ಬರು ಕೇಳಿದ್ರೆ ಪರವಾಗಿರಲಿಲ್ಲ, ಬಂದ ಮಂದಿಯೆಲ್ಲಾ ಹಪ್ಪಳ ಕೇಳಿದ್ದಾರೆ.
Read More : Muddahanume gowda : ಇದಪ್ಪ ರಾಜೀನಾಮೆ ಅಂದ್ರೆ : ಗೌರವಯುತವಾಗಿ ಕಾಂಗ್ರೆಸ್ ನಿಂದ ಹೊರ ಬರಲು ನಿರ್ಧರಿಸಿದ ಮುದ್ದಹನುಮೇ ಗೌಡ
ಇದರಿಂದ ಸಹಜವಾಗಿಯೇ ಮದುವೆಯ ಹೊಣೆ ಹೊತ್ತಿದ್ದ ವಧುವಿನ ಕಡೆಯವರು ಬೇಸರಗೊಂಡಿದ್ದಾರೆ. ಬೇರೆ ಅತಿಥಿಗಳಿಗೂ ಹಪ್ಪಳ ಬಡಿಸಬೇಕಾಗಿದೆ. ಹೀಗಾಗಿ ಎಲ್ಲರಿಗೂ ಎರಡೆರಡು ಸಲ ಹಪ್ಪಳ ಬಡಿಸಲು ಸಾಧ್ಯವಿಲ್ಲ ಅಂದಿದ್ದಾರೆ. ಇದರಿಂದ ಪ್ರಾರಂಭವಾದ ಜಗಳ ವರ ಮತ್ತು ವಧುವಿನ ಕಡೆಯವರ ನಡುವೆ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ.
ಕೈಗೆ ಸಿಕ್ಕ ಪಾತ್ರೆಯಲ್ಲಿ ಒಂದು ತುಂಡು ಹಪ್ಪಳಕ್ಕಾಗಿ ಕೇರಳದ ಬಕಾಸುರರು ಹೊಡೆದಾಡಿಕೊಂಡಿದ್ದಾರೆ.
ಹಪ್ಪಳಕ್ಕಾಗಿ ಹೋರಾಟಕ್ಕೆ ಇಳಿದವರು ಕಲ್ಯಾಣ ಮಂಟಪದ ಟೇಬಲ್ಸ್ ಮತ್ತು ಕುರ್ಚಿಗಳಿಗೆ ಹಾನಿ ಮಾಡಿದ್ದಾರೆ. ಏನಿಲ್ಲ ಅಂದ್ರೂ 1.5 ಲಕ್ಷ ರೂಪಾಯಿ ನಷ್ಟವಾಗಿದೆ. 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಈ ವೇಳೆ ಕಲ್ಯಾಣ ಮಂಟಪದ ಮಾಲೀಕರು ಎರಡು ಗುಂಪಿನ ನಡುವೆ ಮಾತನಾಡಿದ ಸಮಸ್ಯೆಯನ್ನು ಇತ್ಯರ್ಥಪಡಿಸಿದ್ದಾರೆ. ಹಪ್ಪಳಕ್ಕಾಗಿ ಹೀಗೆ ಹೋರಾಡಿದ್ದಾರೆ ಅಂದ್ರೆ ಈ ಮಂದಿ ಅದೆಷ್ಟು ಬರಗೆಟ್ಟಿರಬೇಕು.
Discussion about this post