ತನಗಿಂತ 13 ವರ್ಷದ ದೊಡ್ಡವಳೊಂದಿಗೆ living relationship ಪ್ರೀತಿಯಲ್ಲಿ ಬಿದ್ದವನು ಹೆಣವಾಗಿದ್ದಾನೆ
ಲಖನೌ: ಲಿವ್ ಇನ್ ರಿಲೇಶನ್ ಶಿಪ್ ನಲ್ಲಿದ್ದು ಮದುವೆಗೆ ಒಪ್ಪದ ಪ್ರಿಯಕರನ್ನು ಪ್ರೇಯಸಿಯೇ ಹತ್ಯೆ ಮಾಡಿದ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿ ನಡೆದಿದೆ. ಕೊಲೆಯಾದವನ್ನು ಫಿರೋಜ್ ಚ್ವಾನಿ (23 ) ಎಂದು ಗುರುತಿಸಲಾಗಿದೆ. ಕೊಲೆಗಾರ್ತಿ ಪ್ರೀತಿ ಶರ್ಮಾ (36) ಎಂದು ಗೊತ್ತಾಗಿದೆ. ( living relationship)
ವೃತ್ತಿಯಲ್ಲಿ ಕ್ಷೌರಿಕನಾಗಿದ್ದ ಫಿರೋಜ್ ಚ್ವಾನಿ ಮತ್ತು 36 ವರ್ಷದ ಪ್ರೀತಿ ಶರ್ಮಾ ಕಳೆದ 4 ವರ್ಷಗಳಿಂದ ಒಟ್ಟಿಗೆ ( living relationship) ಬಾಳುತ್ತಿದ್ದರು. ಪ್ರೀತಿ ಶರ್ಮಾಗೆ ಈಗಾಗಲೇ ಮದುವೆಯಾಗಿದ್ದು, ಗಂಡನನ್ನು ಬಿಟ್ಟಿದ್ದಳು.
ಇದನ್ನು ಓದಿ : Bigg Boss Kannada Ott : ಆರ್ಯವರ್ಧನ್ ಚಳಿ ಬಿಡಿಸಿದ ಪತ್ರಕರ್ತ ಸೋಮಣ್ಣ ಮಾಚಿಮಡ
ಪ್ರೀತಿ ಮದುವೆ ಆಗುವಂತೆ ಫಿರೋಜ್ ಬೆನ್ನು ಬಿದ್ದಾಗ, ಮದುವೆಯಾಗಲು ಫಿರೋಜ್ ನಿರಾಕರಿಸುತ್ತಿದ್ದ. ನಮ್ಮ ಮದುವೆ ಕೋಮುಗಲಭೆಗೆ ಕಾರಣವಾಗಬಹುದು ಎಂದು ಸಬೂಬು ಕೊಡುತ್ತಿದ್ದ. ಇದೇ ಕಾರಣಕ್ಕಾಗಿ ಇಬ್ಬರ ನಡುವೆ ಪದೇ ಪದೇ ಜಗಳ ನಡೆಯುತ್ತಿತ್ತು.
ಮೊನ್ನೆ ಯಾವಾಗ ಜಗಳ ಜೋರಾಯ್ತೋ ತಾಳ್ಮೆ ಕಳೆದುಕೊಂಡ ಪ್ರೀತಿ, ರೇಜರ್ ತೆಗೆದುಕೊಂಡು ಫಿರೋಜ್ ನ ಕತ್ತು ಸೀಳಿ ಕೊಲೆ ಮಾಡಿದ್ದಾಳೆ. ನಂತರ ಹೆಣವನ್ನು ವಿಲೇವಾರಿ ಮಾಡುವ ನಿಟ್ಟಿನಲ್ಲಿ ದೊಡ್ಡ ಟ್ರಾಲಿ ಬ್ಯಾಗ್ ನಲ್ಲಿ ತುಂಬಿಸಿದ್ದಳು. ಒಂದು ದಿನ ಮನೆಯಲ್ಲೇ ಶವ ಇಟ್ಟಿದ್ದ ಪ್ರೀತಿ ಅದನ್ನು ಎಸೆದು ಬರಲು ತಡ ರಾತ್ರಿ ಹೊರಟಿದ್ದಾಳೆ.
ಯಾವಾಗ ಟ್ರಾಲಿ ಬ್ಯಾಗ್ ಎಳೆದುಕೊಂಡು ಈಕೆ ಬರುವಾಗ ಗಸ್ತು ತಿರುಗುತ್ತಿದ್ದ ಪೊಲೀಸರಿಗೆ ಅನುಮಾನ ಬಂದಿದೆ. ಅನುಮಾನಗೊಂಡು ಆಕೆಯನ್ನು ತಡೆದು ಪ್ರಶ್ನಿಸಿದ್ದಾರೆ. ಸರಿಯಾದ ಉತ್ತರ ಸಿಗಲಿಲ್ಲ, ಅನುಮಾದಿಂದ ಬ್ಯಾಗ್ ಓಪನ್ ಮಾಡಿಸಿದ್ರೆ ಬೆಚ್ಚಿ ಬೀಳುವ ಸರದಿ ಪೊಲೀಸರದ್ದು.
ಬ್ಯಾಗ್ ನಲ್ಲಿ ಮೃತದೇಹವನ್ನು ನೋಡಿದ ಪೊಲೀಸರು ಪ್ರೀತಿಯನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ಸಂದರ್ಭದಲ್ಲಿ ತಾನ್ಯಾಕೆ ಆತನನ್ನು ಕೊಲೆ ಮಾಡಿದೆ ಅನ್ನುವುದನ್ನು ವಿವರಿಸಿದ್ದಾಳೆ.
Discussion about this post