ಇಡೀ ಕುಟುಂಬದ ಉದ್ಯೋಗ ಕಳ್ಳತನವಾಗಿತ್ತು, ಕದ್ದ ಮಾಲುಗಳನ್ನು ಖರೀದಿಸಲು ಚಿನ್ನದಂಗಡಿ ಮಾಲೀಕರನ್ನೂ ಫಿಕ್ಸ್ ( theft arrest ) ಮಾಡಲಾಗಿತ್ತು
ಬೆಂಗಳೂರು : ಬೀಗ ಹಾಕಿದ ಮನೆಗಳನ್ನು ಗುರುತಿಸಿ ರಾತ್ರಿ ವೇಳೆ ಕಳುವು ಮಾಡುತ್ತಿದ್ದ ಗ್ಯಾಂಗ್ ಅನ್ನು ಪೊಲೀಸರು ಬಂಧಿಸಿದ್ದಾರೆ. ಅಚ್ಚರಿ ಅಂದ್ರೆ ಈ ಗ್ಯಾಂಗ್ ನ ಸದಸ್ಯರು ಒಂದೇ ಕುಟುಂಬದವರು. ( theft arrest ) ಪತಿ ಪತ್ನಿ ಮತ್ತು ಅತ್ತೆಯೇ ಕಳ್ಳತನ ಕೃತ್ಯದಲ್ಲಿ ಪಾಲುದಾರರಾಗಿದ್ದರು.ಕದ್ದ ಚಿನ್ನ ಎಂದು ಗೊತ್ತಿದ್ದರೂ ಖರೀದಿ ಮಾಡುತ್ತಿದ್ದ ಜ್ಯುವೆಲ್ಲರಿ ಮಾಲೀಕರನ್ನೂ ಬಂಧಿಸಿಲಾಗಿದೆ.
ಬಂಧಿತರನ್ನು ಕೆಜಿ ಹಳ್ಳಿಯ ಬಾಗಲೂರು Lay out ನ ಜಾನ್ ಪ್ರವೀಣ್ ಆಲಿಯಾಸ್ ಮೂಗು ಮಚ್ಚೆ (32) ಈತನ ಪತ್ನಿ ಆನಂದಿ (19) ಅತ್ತೆ ಧನಲಕ್ಷ್ಮಿ (36) ಹಾಗೂ ಚಿನ್ನ ಖರೀದಿ ಮಾಡುತ್ತಿದ್ದ ಪಿಳ್ಳಣ್ಣ ಗಾರ್ಡನ್ ಭವರ್ ಲಾಲ್ (48) ಮತ್ತು ಚೇತನ್ ಚೌಧರಿ (29) ಎಂದು ಗುರುತಿಸಲಾಗಿದೆ. ಬಂಧಿತರಿಂದ 17.35 ಲಕ್ಷ ಮೌಲ್ಯದ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ : minor driving fine : ಅಪ್ರಾಪ್ತ ಮಗನಿಗೆ ಬೈಕ್ ಕೊಟ್ಟ ತಾಯಿಗೆ 25,500 ರೂ ದಂಡ ವಿಧಿಸಿದ ಕೋರ್ಟ್
ಬೀಗ ಹಾಕಿದ ಮನೆಗಳನ್ನು ಗುರುತಿಸಿದ ಬಳಿಕ ಪ್ರವೀಣ್ ಮನೆಗೆ ನುಗ್ಗಿ ಚಿನ್ನಾಭರಣ ದೋಚಿಕೊಂಡು ಬರುತ್ತಿದ್ದ ಬಳಿಕ ಆನಂದಿ ಮತ್ತು ಧನಲಕ್ಷ್ಮಿ ಚಿನ್ನಾಭರಣಗಳನ್ನು ಭವರ್ ಲಾಲ್ ಮತ್ತು ಚೇತನ್ ಗೆ ಮಾರಾಟ ಮಾಡುತ್ತಿದ್ದರು.ಅಂಗಡಿಗೆ ಹೋಗಿ ಮಾರಾಟ ಮಾಡಿದರೆ ಸಿಸಿಟಿವಿಯಲ್ಲಿ ಸಾಕ್ಷಿ ಸಿಗುತ್ತದೆ ಅನ್ನುವ ಕಾರಣದಿಂದ ತಾವಿದ್ದ ಜಾಗಕ್ಕೆ ಚಿನ್ನದ ವ್ಯಾಪಾರಿಗಳನ್ನು ಕರೆಸಿ ವ್ಯವಹಾರ ಕುದುರಿಸುತ್ತಿದ್ದರು. ಕಳ್ಳ ಮಾಲು ಖರೀದಿಸಿದ ಕರ್ಮಕ್ಕಾಗಿ ಇದೀಗ ವ್ಯಾಪಾರಿಗಳನ್ನೂ ಪೊಲೀಸರು ಬಂಧಿಸಿದ್ದಾರೆ.
ಎರಡು ಗಂಟೆ ಯುವತಿ ಒತ್ತೆಯಾಳು : ಯುವಕನಿಂದ ಹಣ ಚಿನ್ನ ಸುಲಿಗೆ
ಬೆಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಅನ್ನುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಪೊಲೀಸರು ಮಾಡುತ್ತಿರುವ ರೌಡಿ ಪರೇಡ್ ಗಳು ಫಲ ನೀಡುತ್ತಿಲ್ಲ. ಖಾಕಿ ಭಯವಿರುತ್ತಿದ್ರೆ ಪುಂಡರು ಪೋಕರಿಗಳು ಹೆಡೆ ಎತ್ತುತ್ತಿರಲಿಲ್ಲ
ಬೆಂಗಳೂರು : ಪ್ರಿಯಕರನ ಜೊತೆಗೆ ಸುತ್ತಾಡುತ್ತಿದ್ದ ಟೆಕ್ಕಿಯನ್ನು ಬೆದರಿಸಿ ಚಿನ್ನ ಮತ್ತು ಹಣವನ್ನು ಲೂಟಿ ಮಾಡಿದ್ದ ಮೂವರು ದುಷ್ಕರ್ಮಿಗಳನ್ನು ದೇವಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ದೇವನಹಳ್ಳಿ ಅಕ್ಕುಪೇಟೆ ನಿವಾಸಿ ಅನಿಲ್ ಕುಮಾರ್ ಆಲಿಯಾಸ್ ದೇವು, ಸುಬ್ರಮಣಿ ಆಲಿಯಾಸ್ ಸುಟ್ಟ ಮತ್ತು ಪವನ್ ಕುಮಾರ್ ಪೋಲಿ ಎಂದು ಗುರುತಿಸಲಾಗಿದೆ.
ಆಂಧ್ರಪ್ರದೇಶ ಮೂಲದ ಯುವತಿ ಹೊಸಕೋಟೆಯ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದರು. ಈ ಯುವತಿಯೊಂದಿಗೆ ಚಿಕ್ಕಬಳ್ಳಾಪುರ ಮೂಲದ ಕಿರಣ್ ಅನ್ನುವ ಯುವಕನೊಂದಿಗೆ ಮದುವೆ ಕೂಡಾ ನಿಶ್ಚಯವಾಗಿತ್ತು. ಮುಂದಿನ ತಿಂಗಳು ಮದುವೆ ಕೂಡಾ ನಿಗದಿಯಾಗಿದೆ. ಈ ನಡುವೆ ಖಾಸಗಿ ಕಂಪನಿ ಉದ್ಯೋಗಿ ಕಿರಣ್ ಜುಲೈ 8 ರಂದು ತನ್ನ ಭಾವಿ ಪತ್ನಿ ದೇವನಹಳ್ಳಿಯ ಬೈಪಾಸ್ ರಸ್ತೆಯ ಹೋಟೆಲ್ ಒಂದರಲ್ಲಿ ಊಟ ಮುಗಿಸಿ 10,30ರ ಸುಮಾರಿಗೆ ಮರಳುತ್ತಿದ್ದರು.
ಈ ವೇಳೆ ಮಾರ್ಗ ಮಧ್ಯೆ ಅಡ್ಡಗಟ್ಟಿದ ಆರೋಪಿಗಳು ಕಿರಣ್ ನನ್ನು ಕಬ್ಬಿಣದ ರಾಡ್ ನಿಂದ ಥಳಿಸಿ ಬೆದರಿಸಿ 10 ಗ್ರಾಮ್ ಚಿನ್ನದ ಸರ ಕಸಿದಿದ್ದಾರೆ. ಈ ವೇಳೆ ಹಣವಿಲ್ಲ ಅನ್ನುವುದನ್ನು ಅರಿತ ಆರೋಪಿಗಳು ಎಟಿಎಂನಿಂದ ಡ್ರಾ ಮಾಡಿ ಕೊಡುವಂತೆ ಧಮ್ಕಿ ಹಾಕಿದ್ದಾರೆ.
ಬಳಿಕ ಆರೋಪಿಗಳ ಪೈಕಿ ಸುಬ್ರಮಣಿ ಎಂಬಾತ ತಮ್ಮದೇ ಕಾರಿನಲ್ಲಿ ಕಿರಣ್ ನನ್ನು ಕೂರಿಸಿ ಎಟಿಎಂನಿಂದ 15 ಸಾವಿರ ಡ್ರಾ ಮಾಡಿಸಿದ್ದಾನೆ. ಬಳಿ ಮಾರ್ಗ ಮಧ್ಯೆ ಊಟ ಹಾಗೂ ಮದ್ಯ ಪಾರ್ಸೆಲ್ ಮಾಡಿಸಿಕೊಂಡು ದೇವನಹಳ್ಳಿ ಬೈಪಾಸ್ ಗೆ ಮರಳಿದ್ದಾನೆ.
ಅಷ್ಟು ಹೊತ್ತು ತನಕ ಏನಿಲ್ಲ ಅಂದರೂ ಎರಡು ಗಂಟೆಗಳ ಕಾಲ ಯುವತಿ ದುಷ್ಕರ್ಮಿಗಳ ವಶದಲ್ಲಿ ಇದ್ದಳು. ಮರು ದಿನ ಯುವತಿ ದೇವನಹಳ್ಳಿ ಠಾಣೆಗೆ ಕೃತ್ಯದ ಬಗ್ಗೆ ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ 10 ಗ್ರಾಂ ಚಿನ್ನದ ಸರ, ಕಾರು ಹಾಗೂ ಮಾರಕಾಸ್ತ್ರ ಜಪ್ತಿ ಮಾಡಲಾಗಿದೆ.
ಈ ಘಟನೆಯಲ್ಲಿ ಆರೋಪಿಗಳನ್ನು ಶೀಘ್ರ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆ ಮಟ್ಟಿಗೆ ಪೊಲೀಸರ ಕಾರ್ಯ ಮೆಚ್ಚಬೇಕು. ಆದರೆ ದುಷ್ಕರ್ಮಿಗಳು ಹೀಗೆ ಕೃತ್ಯ ಎಸಗುತ್ತಿದ್ದಾರೆ ಅಂದ್ರೆ ಅವರಿಗೆ ಕಾನೂನು, ಪೊಲೀಸರ ಭಯವಿಲ್ಲ ಎಂದೇ ಅರ್ಥ. ಕಾನೂನು ಸುವ್ಯವಸ್ಥೆ ಕಾಪಾಡಲೆಂದು ಸರ್ಕಾರ ಕೊಟ್ಟಿರುವ ಆಸ್ತ್ರಗಳನ್ನು ಸರಿಯಾಗಿ ಬಳಸಿದರೆ ಕ್ರಿಮಿನಲ್ ಗಳು ತಲೆ ಎತ್ತಲು ಸಾಧ್ಯವೇ…
Discussion about this post