ಅಪ್ರಾಪ್ತ ಮಗನಿಗೆ ಬೈಕ್ ಕೊಟ್ಟ ತಾಯಿಗೆ 25,500 ರೂ ದಂಡ ವಿಧಿಸಿದ ( minor driving fine ) ಕೋರ್ಟ್
ಕಾರವಾರ : ಇಲ್ಲಿನ ಹಿರಿಯ ಸಿವಿಲ್ ನ್ಯಾಯಾಲಯ ಅಪ್ರಾಪ್ತ ಮಗನಿಗೆ ವಾಹನ ಕೊಟ್ಟ ತಾಯಿಗೆ 25,500 ರೂ ದಂಡವನ್ನು ವಿಧಿಸಿದೆ. ಈ ಮೂಲಕ ಏನು ಮಾಡಿದರೂ ನಡೆಯುತ್ತದೆ ಅನ್ನುವ ಪೋಷಕರಿಗೆ ಎಚ್ಚರಿಕೆ ರವಾನಿಸಲಾಗಿದೆ. ( minor driving fine )
ರೇಷ್ಮಾ ಅಲಿ ಶೇಖ್ ಅನ್ನುವವರು ತಮ್ಮ ಅಪ್ರಾಪ್ತ ಮಗನಿಗೆ ನಗರದಲ್ಲಿ ಸ್ಕೂಟಿ ಚಲಾಯಿಸಲು ನೀಡಿದ್ದರು. ಈ ವೇಳೆ ತಡೆದಿದ್ದ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿದ್ದರು. ನಿಯಮಗಳ ಪ್ರಕಾರ ಆಪ್ತಾಪ್ತರಿಗೆ ವಾಹನ ಕೊಟ್ಟರೆ ಪೋಷಕರು ಶಿಕ್ಷೆಗೆ ಒಳಗಾಗಬೇಕಾಗುತ್ತದೆ. ಅದರಂತೆ ಮಗನಿಗೆ ವಾಹನ ಕೊಟ್ಟ ಕರ್ಮಕ್ಕೆ ತಾಯಿ ರೇಷ್ಮಾ ಅಲಿ ಶೇಖ್ 25 ಸಾವಿರ ದಂಡ ಕಟ್ಟಬೇಕಾಗಿದೆ.
ಪತ್ನಿಯ ರುಂಡದೊಂದಿಗೆ ಪೊಲೀಸ್ ಸ್ಟೇಷನ್ ಗೆ ಬಂದ ಗಂಡ
ಪತ್ನಿಯ ಶೀಲದ ಬಗ್ಗೆ ಶಂಕೆ ಹೊಂದಿದ್ದ ಗಂಡ ಕೊನೆಗೆ ಕುತ್ತಿಗೆ ಕಡಿದು ರುಂಡ ಹಿಡಿದು ಸ್ಟೇಸನ್ ಬಂದಿದ್ದಾನೆ ಎಂಥಾ ಕ್ರೂರಿ ಇರಬೇಕು ಗಂಡ
ಒಡಿಶಾ : ಪತ್ನಿಯ ಶೀಲ ಶಂಕಿಸಿದ ಗಂಡನೊಬ್ಬ ಹೆಂಡತಿಯ ತಲೆ ಕಡಿದು ರುಂಡದೊಂದಿಗೆ ಪೊಲೀಸ್ ಠಾಣೆಗೆ ಬಂದ ಘಟನೆ ಒಡಿಶಾದ ಧೆಂಕನಲ್ ಎಂಬಲ್ಲಿ ನಡೆದಿದೆ. ಪತ್ನಿಯ ತಲೆ ಕಡಿದ ಗಂಡ ಪೊಲೀಸ್ ಠಾಣೆಗೆ ಶರಣಾಗುವ ಸಲುವಾಗಿ 12 ಕಿಲೋ ಮೀಟರ್ ನಡೆದುಕೊಂಡು ಬಂದಿದ್ದ.
ಚಂದ್ರಸೇಕರಪುರ್ ಗ್ರಾಮದ ಆರೋಪಿ 55 ವರ್ಷದ ನಕಪೋದಿ ಮಾಜಿ 25 ವರ್ಷಗಳ ಹಿಂದೆ ಸಚಲ ಮಾಜಿ ( 45 ) ಅನ್ನುವವರನ್ನು ವಿವಾಹವಾಗಿದ್ದು, ಇವರಿಗೆ ಇಬ್ಬರು ಗಂಡು ಮಕ್ಕಳಿದ್ದು ಒಬ್ಬನಿಗೆ ಮದುವೆಯೂ ಆಗಿದೆ. ಇತ್ತೀಚಿನ ದಿನಗಳಲ್ಲಿ ನಕಪೋದಿಗೆ ಹೆಂಡತಿಯ ಶೀಲದ ಬಗ್ಗೆ ಶಂಕೆ ಬಂದಿದೆ. ಹೀಗಾಗಿ ಪತ್ನಿಯೊಂದಿಗೆ ನಿತ್ಯ ಜಗಳ ತೆಗೆಯುತ್ತಿದ್ದ. ಹೀಗಾಗಿ ಮನೆ ನಿತ್ಯ ರಣರಂಗವಾಗುತ್ತಿತ್ತು.
ಶುಕ್ರವಾರ ಮುಂಜಾನೆ 3.30 ರಿಂದ 4 ಗಂಟೆ ಸುಮಾರಿಗೆ ಎಚ್ಚರಗೊಂಡಿದ್ದ ನಕಪೋದಿ ಮಾಜಿ ಹರಿತವಾದ ಕತ್ತಿಯಿಂದ ಪತ್ನಿ ಶಿರಚ್ಛೇದನ ಮಾಡಿದ್ದಾನೆ. ಬಳಿಕ ತಲೆಯನ್ನು ಪೊಲೀಸರಿಗೆ ತಲುಪಿಸಲೆಂದು ವಾಕಿಂಗ್ ಪ್ರಾರಂಭಿಸಿದ್ದಾನೆ. ಈ ವೇಳೆ ರಕ್ತಸಿಕ್ತ ರಂಡುದೊಂದಿಗೆ ನಕಪೋದಿ ನಡೆಯುತ್ತಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಜೊತೆಗೆ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ.
Discussion about this post