Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
Home ಕ್ರೈಮ್

ಬರ್ತ್ ಡೇ ದಿನದಂದು ಬಾಡಿಗೆದಾರಳಿಗೆ ಒಳ ಉಡುಪು ಗಿಫ್ಟ್ : ಮನೆ ಮಾಲೀಕನ ವಿರುದ್ಧ FIR

Radhakrishna Anegundi by Radhakrishna Anegundi
January 18, 2022
in ಕ್ರೈಮ್
Share on FacebookShare on TwitterWhatsAppTelegram

ಬೆಂಗಳೂರು : ತನ್ನ ಬರ್ತ್ ಡೇ ದಿನದಂದು ಮನೆ ಮಾಲೀಕನ ಒಳಉಡುಪು ಗಿಫ್ಟ್ ಕೊಟ್ಟಿದ್ದಾನೆ ಎಂದು ಆರೋಪಿಸಿ ಬಾಡಿಗೆದಾರ ಮಹಿಳೆಯೊಬ್ಬರು ಪೊಲೀಸ್ ಮನೆ ಮೆಟ್ಟಿಲು ಹತ್ತಿದ್ದಾರೆ.

Follow us on:

ಅಂದ ಹಾಗೇ ಈ ಘಟನೆ ನಡೆದಿರುವುದು ಹನುಮಂತರನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ. ಶ್ರೀನಗರ ಸಮೀಪದ ಕಲ್ಲಪ್ಪ ಬ್ವಾಕ್ ನಲ್ಲಿ ವಾಸಿಸುತ್ತಿರುವ ಮಹಿಳೆಯೊಬ್ಬರು ಮನೆ ಮಾಲೀಕನ ವಿರುದ್ಧ ಈ ಸಂಬಂಧ ದೂರು ದಾಖಲಿಸಿದ್ದಾರೆ. ಸೂಕ್ಷ್ಮ ಪ್ರಕರಣವಾಗಿರುವ ಹಿನ್ನಲೆಯಲ್ಲಿ FIR  ದಾಖಲಿಸಿರುವ ಪೊಲೀಸರು, ವಿಚಾರಣೆ ಬರುವಂತೆ ಮನೆ ಮಾಲೀಕರಿಗೆ ನೋಟೀಸ್ ಜಾರಿ ಮಾಡಿದ್ದಾರೆ.

ಇನ್ನು ಮಹಿಳೆ ಕೊಟ್ಟಿರುವ ದೂರಿನಲ್ಲಿ,  ನನ್ನ birthday ದಿನ ಮನೆ owner ಒಳ ಉಡುಪುಗಳನ್ನು ಉಡುಗೊರೆಯಾಗಿ ಕೊಟ್ಟಿದ್ದಾನೆ. ಮಾತ್ರವಲ್ಲದೆ ಈ ಉಡುಪುಗಳನ್ನು ಧರಿಸಿ ಮನೆಯಿಂದ ಹೊರ ಬರುವಂತೆ ಒತ್ತಾಯಿಸುತ್ತಿದ್ದ. ಮೊಬೈಲ್ ಗೆ ಕರೆ ಮಾಡಿ ಕೆಟ್ಟದಾಗಿ ಮಾತನಾಡುತ್ತಾನೆ. ಇವಕ್ಕೆ ನಾನು ಆಕ್ಷೇಪ ವ್ಯಕ್ತಪಡಿಸಿದ ಕಾರಣದಿಂದ ಮನೆ ಖಾಲಿ ಮಾಡುವಂತೆ ಟಾರ್ಚರ್ ಕೊಡುತ್ತಿದ್ದಾನೆ ಎಂದು ಆರೋಪಿಸಿದ್ದಾರೆ.

ಅಂದ ಹಾಗೇ ಮಹಿಳೆ ಈ ಮನೆಯಲ್ಲಿ 12 ವರ್ಷಗಳಿಂದ ಬಾಡಿಗೆಗಿದ್ದಾರಂತೆ. ಬಾಡಿಗೆ ವಿಚಾರವಾಗಿ ಇಬ್ಬರ ನಡುವೆ ಮನಸ್ತಾಪವಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಇನ್ನುಳಿದಂತೆ ದೂರಿನ ಇತರ ಅಂಶಗಳ ಕುರಿತಂತೆ ಪೊಲೀಸರ ತನಿಖೆ ಮುಂದುವರಿದಿದೆ.

ವಿಕೇಂಡ್ ಕರ್ಫ್ಯೂ ತೆರವಿನ ಬಗ್ಗೆ ಚಿಂತನೆ :  ಶುಕ್ರವಾರದ ಸಭೆಯಲ್ಲಿ ಮಹತ್ವ ತೀರ್ಮಾನ ಸಾಧ್ಯತೆ

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಸೋಂಕಿನ ಮೂರನೇ ಅಲೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದರೆ ಕೆಲವೊಂದು ಕ್ರಮಗಳು ಹಾಸ್ಯಾಸ್ಪದವಾಗಿದೆ. ವಾರದ 5 ದಿನ ರಾಜ್ಯ ಎಲ್ಲಾ ವ್ಯವಹಾರಗಳಿಗೆ ಮುಕ್ತವಾಗಿದ್ದು, ಶನಿವಾರ ಮತ್ತು ಭಾನುವಾರ ಕರ್ಫ್ಯೂ ಹಾಕಲಾಗಿದೆ. ಹಾಗಾದ್ರೆ ಶನಿವಾರ ಮತ್ತು ಭಾನುವಾರ ಮಾತ್ರ ಕೊರೋನಾ ವೈರಸ್ ಜಾಗೃತವಾಗಿರುತ್ತದೆಯೇ ಅನ್ನುವ ಪ್ರಶ್ನೆಗೆ ಉತ್ತರವಿಲ್ಲ. ಬೆಂಗಳೂರಿನಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ ಸರ್ಕಾರ ಉಳಿದ ಜಿಲ್ಲೆಗಳಲ್ಲಿ ಸೋಂಕಿನ ಪ್ರಮಾಣ ಏರುತ್ತಿದ್ದರೂ ಶಾಲೆಗಳನ್ನು ಬಂದ್ ಮಾಡದಿರುವುದು ಅನುಮಾನಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲದೆ ರಾಜ್ಯದಲ್ಲಿ ಕೊರೋನಾ ತಜ್ಞರು, ಕೊರೋನಾ ನಿಯಂತ್ರಣ ಸಲಹಾ ಸಮಿತಿಯನ್ನೇ ಅನುಮಾನದಿಂದ ನೋಡುವಂತಾಗಿದೆ.

ಈ ನಡುವೆ ರಾಜ್ಯದಲ್ಲಿ ಹೇರಲಾಗಿರುವ ವಿಕೇಂಡ್ ಕರ್ಫ್ಯೂ ಮತ್ತು ನೈಟ್ ಕರ್ಫ್ಯೂ ಬಗ್ಗೆ ಸರ್ಕಾರದ ಸಚಿವರೇ ಅಪಸ್ವರ ಎತ್ತಿದ್ದಾರೆ. ಬಿಜೆಪಿ ಸಂಸದರು ಕೂಡಾ ರಾಜ್ಯ ಸರ್ಕಾರದ ನಡೆಯನ್ನು ಟೀಕಿಸಿದ್ದಾರೆ. ಯಾವಾಗ ಹೊಟೇಲ್ ಮಾಲೀಕರು, ಜನ ಸಾಮಾನ್ಯರು ವಿಕೇಂಡ್ ಕರ್ಫ್ಯೂ ಬಗ್ಗೆ ತಗಾದೆ ತೆಗೆದರೋ ಆಗ ಕಿವುಡಾಗಿದ್ದ ಸರ್ಕಾರ, ಬಿಜೆಪಿ ನಾಯಕರು ವಿಕೇಂಡ್ ಮತ್ತು ನೈಟ್ ಕರ್ಫ್ಯೂ ಬಗ್ಗೆ ಕ್ಯಾತೆ ತೆಗೆಯುತ್ತಿದ್ದಂತೆ ಸರ್ಕಾರ ಎಚ್ಚೆತ್ತುಕೊಂಡಿದೆ.

ಈ ಹಿನ್ನಲೆಯಲ್ಲಿ ಇದೇ ತಿಂಗಳ 21 ರಂದು ಸಿಎಂ ನೇತೃತ್ವದಲ್ಲಿ ನಡೆಯಲಿರುವ ಇನ್ನತ ಮಟ್ಟದ ಸಭೆಯಲ್ಲಿ ವಾರಾಂತ್ಯದ ಕರ್ಫ್ಯೂ ತೆರವಿನ ಬಗ್ಗೆ ಚರ್ಚೆ ನಡೆಯಲಿದೆ. ಕರ್ಫ್ಯೂ ಕೈ ಬಿಡುವುದೋ ಮುಂದುವರಿಸುವುದೋ ಅನ್ನುವ ಬಗ್ಗೆ ಅಂದೇ ನಿರ್ಧಾರ ಹೊರ ಬೀಳಲಿದೆ.

ಈಗಾಗಲೇ ಕೊರೋನಾ ಮೂರನೇ ಅಲೆಯನ್ನು ಎದುರಿಸಿರುವ ರಾಜ್ಯಗಳಲ್ಲಿ, ಕೊರೋನಾ ಮೂರನೇ ಅಲೆ ಹರಡಿದಷ್ಟೇ ವೇಗದಲ್ಲಿ ತಗ್ಗಲಾರಂಭಿಸಿದೆ. ಹೀಗಾಗಿ ರಾಜ್ಯದಲ್ಲೂ ಕೊರೋನಾ ಸೋಂಕಿನ ಮೂರನೇ ಅಲೆ ಫೆಬ್ರವರಿ 1 ರಿಂದ ಕ್ಷೀಣಿಸೋ ಸಾಧ್ಯತೆಗಳಿದೆ. ಹೀಗಾಗಿ  ನಿರ್ಬಂಧ ಸಡಿಲಿಸಿ, ಹೊಸ ನಿರ್ಬಂಧಗಳನ್ನು ಹೇರದಿರಲು ಸರ್ಕಾರ ನಿರ್ಧರಿಸುವ ಸಾಧ್ಯತೆಗಳಿದೆ.

Tags: CrimeMAIN
Share6TweetSendShare

Discussion about this post

Related News

30 ಕೋಟಿ ದರೋಡೆ ಮಾಡಿದ ಖಾಕಿ ಗ್ಯಾಂಗ್…!

30 ಕೋಟಿ ದರೋಡೆ ಮಾಡಿದ ಖಾಕಿ ಗ್ಯಾಂಗ್…!

ಸ್ಟೇಷನ್ ನಲ್ಲಿ ಕೂಡಿ ಹಾಕಿ ಅಮಾಯಕರಿಗೆ ಹಲ್ಲೆ : ಬಜಪೆ ಸರ್ಕಲ್ ಇನ್ಸ್ ಪೆಕ್ಟರ್ ಸೇರಿ ಮೂವರು ಅಮಾನತು

ಸ್ಟೇಷನ್ ನಲ್ಲಿ ಕೂಡಿ ಹಾಕಿ ಅಮಾಯಕರಿಗೆ ಹಲ್ಲೆ : ಬಜಪೆ ಸರ್ಕಲ್ ಇನ್ಸ್ ಪೆಕ್ಟರ್ ಸೇರಿ ಮೂವರು ಅಮಾನತು

ಮೊಬೈಲ್ ನಲ್ಲಿ ಮಾತನಾಡುತ್ತಾಳೆಂದು ಪತ್ನಿಯ ಹತ್ಯೆ ಮಾಡಿದ ಪಾಪಿ ಪತಿ

ಡೇಟಿಂಗ್ APP ತಂದ ಆಪತ್ತು ನರ್ಸ್ ಮೇಲೆ ಗ್ಯಾಂಗ್ ರೇಪ್ : ರಾಷ್ಟ್ರಮಟ್ಟದ ಈಜುಪಟುಗಳು ಆರೆಸ್ಟ್

ಕೋಣನಕುಂಟೆ ಪೊಲೀಸರ ಕಾರ್ಯಾಚರಣೆ : ವೇಶ್ಯಾವಾಟಿಕೆ ನಡೆಸುತ್ತಿದ್ದ ನಫೀಸಾ ಆರೆಸ್ಟ್

ಅಪ್ಪ, ಅಮ್ಮನಿಗೆ ಒಳ್ಳೆಯ ಮಗಳಾಗಲಿಲ್ಲ : ಡಿಬಾರ್ ಮಾಡಿದ್ದಕ್ಕೆ 5ನೇ ಮಹಡಿಯಿಂದ ಹಾರಿ ಬಿ. ಕಾಂ ವಿದ್ಯಾರ್ಥಿನಿ ಆತ್ಮಹತ್ಯೆ

ಸಂಜನಾ ಗಲ್ರಾನಿಗೆ ಅಶ್ಲೀಲ ಸಂದೇಶ : ಪ್ರಸಾದ್ ಬಿದ್ದ ಪುತ್ರ ಆಡಂ ಬಿದ್ದಪ್ಪ ಪೊಲೀಸರ ವಶಕ್ಕೆ

ಮಂಗಳೂರಿನಲ್ಲಿ ಹೈಟೆಕ್ ಮಾಂಸದಂಧೆ : 23 ವರ್ಷದ ಯುವತಿ ಸೇರಿ ಮೂವರು ಪಿಂಪ್ ಗಳ ಬಂಧನ

ಅಂಗಡಿಗಳಲ್ಲಿ ಯುಪಿಎಸ್ ಬ್ಯಾಟರಿ ಕದಿಯುತ್ತಿದ್ದ ಗೋರಿಪಾಳ್ಯದ ಖದೀಮರ ಬಂಧನ

ಶೇಂದಿ ಪ್ರಿಯರೇ ಎಚ್ಚರ : ಎಗ್ಗಿಲ್ಲದೆ ಸಾಗಿದೆ CH ಪೌಡರ್ ದಂಧೆ

Latest News

afghanistan-on-taliban-diktat-to-cover-faces-afghan-women-anchors-go-virtual-on-news-channels

ಬುರ್ಖಾ ಧರಿಸಿ ಸುದ್ದಿ ಓದಲಾರಂಭಿಸಿದ ಆಘ್ಘನ್ ನಿರೂಪಕಿಯರು

ಭಾರತಕ್ಕೂ ಕಾಲಿಟ್ಟ ಲಸಿಕೆಗೂ ಬಗ್ಗದ ಒಮಿಕ್ರೋನ್ ಉಪತಳಿ

ಭಾರತಕ್ಕೂ ಕಾಲಿಟ್ಟ ಲಸಿಕೆಗೂ ಬಗ್ಗದ ಒಮಿಕ್ರೋನ್ ಉಪತಳಿ

gaurav-bhatia-bjp-attacks-rahul-gandhi-for-making-statement-on-india-at-cambridge-university

ರಾಹುಲ್ ಗಾಂಧಿ ಹೋಪ್ ಲೆಸ್ ಪಕ್ಷದ ಪಾರ್ಟ್ ಟೈಂ ರಾಜಕಾರಣಿ

bjp-has-spread-kerosene-all-over-the-country-just-one-spark-and-rahul-gandhi-at-london-event-article

ಬ್ರಿಟನ್ ನಲ್ಲಿ ದೇಶದ ಪ್ರಧಾನಿಯನ್ನು ಟೀಕಿಸಿದ ರಾಹುಲ್ ಗಾಂಧಿ

without-prior-permission-videography-and-streaming-in-samvadas-fb-and-youtube-channel-hc-admin-files-complaint

ಹೈಕೋರ್ಟ್ ಆವರಣದಲ್ಲಿ ನಮಾಜ್ ವಿಡಿಯೋ ಚಿತ್ರೀಕರಿಸಿದ ಸಂವಾದ ವಿರುದ್ಧ FIR

belthangady-mla-ed-acb-bjp-worker-controversial-statement-Shekhar Laila

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾಗೆ ಸಂಕಷ್ಟ ತಂದಿಟ್ಟ ಕಾರ್ಯಕರ್ತನ ಹೇಳಿಕೆ

ಅವಮಾನದಿಂದ ತಪ್ಪಿಸಿಕೊಳ್ಳಲು ಕಾರು ಕದ್ದ ಖದೀಮ : ಪೊಲೀಸರ ತನಿಖೆಗೊಂದು ಸೆಲ್ಯೂಟ್

ಅವಮಾನದಿಂದ ತಪ್ಪಿಸಿಕೊಳ್ಳಲು ಕಾರು ಕದ್ದ ಖದೀಮ : ಪೊಲೀಸರ ತನಿಖೆಗೊಂದು ಸೆಲ್ಯೂಟ್

nithya bhavishya

ತಾ.16-05-2022 ರ ಸೋಮವಾರದ ರಾಶಿಭವಿಷ್ಯ.

nithya bhavishya

ತಾ.13-05-2022 ರ ಶುಕ್ರವಾರದ ರಾಶಿ ಭವಿಷ್ಯ

30 ಕೋಟಿ ದರೋಡೆ ಮಾಡಿದ ಖಾಕಿ ಗ್ಯಾಂಗ್…!

30 ಕೋಟಿ ದರೋಡೆ ಮಾಡಿದ ಖಾಕಿ ಗ್ಯಾಂಗ್…!

  • Advertise
  • About

©Copyright Torrent Spree.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

©Copyright Torrent Spree.

  • ↓
  • ಗ್ರೂಪ್
  • ಗ್ರೂಪ್