ನವದೆಹಲಿ : ಅನೈತಿಕ ಸಂಬಂಧದ ವಿಚಾರದಲ್ಲಿ ಇತ್ತೀಚೆಗೆ ಅಪರಾಧ ಪ್ರಕರಣಗಳು ಏರಲಾರಂಭಿಸಿದೆ. ಮದುವೆಯಾದ ಬಳಿಕ ಮಕ್ಕಳೊಂದಿಗೆ ಸಂಸಾರ ನಡೆಸುವುದನ್ನು ಬಿಟ್ಟು ಪಕ್ಕದ ಮನೆಯವರೊಂದಿಗೆ ಸರಸಕ್ಕೆ ಹೋಗಿ ಎಡವಟ್ಟುಗಳಾಗುತ್ತಿದೆ.
ಹೀಗೆ ತನ್ನ ಅನೈತಿಕ ಸಂಬಂಧ ವಿಚಾರ ಪತ್ನಿಗೆ ಗೊತ್ತಾದ ಕರ್ಮಕ್ಕೆ ವ್ಯಕ್ತಿಯೊಬ್ಬ ಗಂಟಲು ಕೊಯ್ದುಕೊಂಡ ಘಟನೆ ಗಾಜಿಯಾಬಾದ್ನ ನಂದಗ್ರಾಮ್ ನಡೆದಿದೆ. ಇಲ್ಲಿನ 30 ವರ್ಷದ ಓಂಪ್ರಕಾಶ್ ಎಂಬಾತ ಮೂರು ದಿನಗಳಿಂದ ಮನೆಗೆ ಬಂದಿರಲಿಲ್ಲ. ಈತ ನೆರೆ ಮನೆಯ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿರುವುದು ಓಂಪ್ರಕಾಶ್ ಪತ್ನಿಗೆ ಗೊತ್ತಿತ್ತು.
ಹೀಗಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ ಆಕೆ ಗಂಡನನ್ನು ಹುಡುಕಿಕೊಡಿ ಎಂದು ಮನವಿ ಮಾಡಿದ್ದಳು. ಅದರಂತೆ ನಾಪತ್ತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಓಂಪ್ರಕಾಶ್ ಪತ್ತೆ ಹಚ್ಚಿ ಕರೆ ತಂದಿದ್ದಾರೆ. ಈ ವೇಳೆ ನಾನು ನನ್ನ ಹೆಂಡತಿಯೊಂದಿಗೆ ಇರಲಾರೆ ಎಂದು ಹೇಳುತ್ತಾ, ಬ್ಲೇಡ್ ನಿಂದ ಗಂಟಲನ್ನು ಸೀಳಿಕೊಂಡಿದ್ದಾನೆ.
ಸಂಸಾರ ಸರಿ ಮಾಡೋಣ ಎಂದು ಹೊರಟ ಪೊಲೀಸರಿಗೆ ಈ ಬೆಳವಣಿಗೆ ಆತಂಕ ತಂದಿದೆ. ಹೀಗಾಗಿ ಪೊಲೀಸರು ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
Discussion about this post