ಮಂತ್ರಿ ಗೊತ್ತು, ಅಧಿಕಾರಿ ಗೊತ್ತು ಎಂದು ನಂಬಿಸಿದ್ದ ಈ ಖತರ್ನಾಕ್ ಶಿಕ್ಷಕ Fake recruitment ಮೂಲಕ 63 ಮಂದಿಗೆ ವಂಚಿಸಿದ್ದಾನೆ
ಬೆಂಗಳೂರು : ರಾಜ್ಯ ಪಶುಸಂಗೋಪನೆ ಇಲಾಖೆಯಲ್ಲಿ (Animal Husbandry Department) ನೌಕರಿ (Fake recruitment) ಕೊಡಿಸುವುದಾಗಿ ನಂಬಿಸಿ 63 ಮಂದಿಗೆ ವಂಚಿಸಿ 25 ಲಕ್ಷ ವಸೂಲಿ ಮಾಡಿದ್ದ ಖಾಸಗಿ ಶಾಲೆಯ ಚಾಲಾಕಿ ಶಿಕ್ಷಕನೊಬ್ಬನನ್ನು ಸಂಜಯನಗರ ಪೊಲೀಸರು (Sanjay Nagar police) ಬಂಧಿಸಿದ್ದಾರೆ. ಬಂಧಿತನನ್ನು ಬಾಗಲಕೋಟೆಯ ಜ್ಞಾನದೇವ್ ಜಾಧವ್ (Jnanadev Jadhav) ಎಂದು ಗುರುತಿಸಲಾಗಿದೆ.
ಪಶುಸಂಗೋಪನೆ ಇಲಾಖೆ ಮಂತ್ರಿ ಪ್ರಭು ಚವ್ಹಾಣ್ (Minister Prabhu V. Chavan) ಅವರಿಗೆ ನಾನೇ ಕನ್ನಡ ಶಿಕ್ಷಕ, ನನಗೆ ಅವರು ಸಿಕ್ಕಾಪಟ್ಟೆ ಆಪ್ತರು ಎಂದು ಹೇಳಿ ಉದ್ಯೋಗಕ್ಕಾಗಿ ಹುಡುಕುತ್ತಿದ್ದ ಯುವಕರನ್ನು ಬಲೆಗೆ ಬೀಳಿಸಿಕೊಂಡಿದ್ದ ಜಾಧವ್ ಪಶುಸಂಗೋಪನೆ ಇಲಾಖೆಯಲ್ಲಿ ನೌಕರಿ (Fake recruitment) ಕೊಡಿಸುತ್ತೇನೆ ಎಂದು ನಂಬಿಸಿದ್ದ.
ಇದನ್ನೂ ಓದಿ : Kumaraswamy tears : ಮತ್ತೆ ಕಣ್ಣೀರು ಸುರಿಸಿದ ಕುಮಾರಸ್ವಾಮಿ : ತಂದೆಯ ನೆನೆದು ಭಾವುಕ
ಅಷ್ಟೇ ಅಲ್ಲದೆ ಎಫ್‌ಡಿಎ , ಎಸ್‌ಡಿಎ ಮತ್ತು ಡಿ ದರ್ಜೆ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ ಎಂದು ನಂಬಿಸಿ ಇಲಾಖೆಯೇ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ ಅನ್ನುವಂತೆ ನಕಲಿ ದಾಖಲೆ ಸೃಷ್ಟಿಸಿ ಅರ್ಜಿಗಳನ್ನು ವಿತರಿಸಿದ್ದ. ಅಷ್ಟಕ್ಕಾದ್ರೂ ಈ ಶಿಕ್ಷಕ ತನ್ನ ಕೃತ್ಯ ಮುಗಿಸಿಲ್ಲ, ಅರ್ಜಿ ಸಲ್ಲಿಸಿದ 63 ಮಂದಿಯನ್ನು ಆಯ್ಕೆ ಮಾಡಿ ಸುಮಾರು 25 ಲಕ್ಷ ವಸೂಲಿ ಮಾಡಿ ಪಶುಸಂಗೋಪನೆ ಇಲಾಖೆ ಹಿರಿಯ ಅಧಿಕಾರಿಗಳ ಹೆಸರಿನಲ್ಲಿ ಮೊಹರು ಹಾಗೂ ಸಹಿಯನ್ನು ಸಹ ನಕಲು ಮಾಡಿ ನೇಮಕಾತಿ ಆದೇಶ ಪತ್ರವನ್ನೂ ಕೊಟ್ಟಿದ್ದ.
ಸರ್ಕಾರಿ ನೌಕರಿ ಸಿಕ್ತು ಅಂತಾ ಖುಷಿಯಾಗಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಅಧಿಕಾರಿಗಳನ್ನು ಸಂಪರ್ಕಿಸಿದಾಗ ಶಿಕ್ಷಕನೊಬ್ಬ ಹಳ್ಳಕ್ಕೆ ಬೀಳಿಸಿದ್ದು ಗೊತ್ತಾಗಿದೆ. ಈ ಸಂಬಂಧ ರಾಜ್ಯ ಪಶು ಸಂಗೋಪನೆ ಇಲಾಖೆಯ ಜಂಟಿ ನಿರ್ದೇಶಕ ರಮೇಶ್ ನೀಡಿದ ದೂರಿನ ಆಧಾರದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
Discussion about this post