ರಾಜಕೀಯದಲ್ಲಿ ಕಣ್ಣೀರು ಸುದ್ದಿಯಾಗೋದು ಹೊಸದೇನಲ್ಲ. ದಳಪತಿಗಳು (Kumaraswamy tears) ಈ ವಿಷಯದಲ್ಲಿ ಅತೀ ಹೆಚ್ಚು ಟ್ರೋಲ್ ಗೆ ಒಳಗಾಗುತ್ತಿದ್ದಾರೆ
ಬೆಂಗಳೂರು : JDS ಕಚೇರಿಯಲ್ಲಿ ನಡೆದ ಸಭೆಯೊಂದರಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ (Kumaraswamy tears) ಕಣ್ಣೀರು ಹಾಕಿದ ಘಟನೆ ನಡೆದಿದೆ. ಮೊನ್ನೆ ಮೊನ್ನೆ ಸಮಾವೇಶವೊಂದರಲ್ಲಿ ಕುಮಾರಸ್ವಾಮಿ ಹಾಕಿದ ಕಣ್ಣೀರು ಸಿಕ್ಕಾಪಟ್ಟೆ ಸುದ್ದಿಯಾಗಿತ್ತು. ಮಾತ್ರವಲ್ಲದೆ ಇದೇ ವಿಚಾರದಲ್ಲಿ ಬಿಜೆಪಿ (BJP) ಟ್ವೀಟ್ ಕೂಡಾ ಮಾಡಿತ್ತು. ಈ ಬಗ್ಗೆ ಕುಮಾರಸ್ವಾಮಿ ತೀವ್ರ ಆಕ್ರೋಶ ಕೂಡಾ ಹೊರ ಹಾಕಿದ್ದರು.
ಇದನ್ನೂ ಓದಿ : police officers transfer : ಬೆಳ್ಳಾರೆ ಲಾಠಿ ಜಾರ್ಜ್ : ಪೊಲೀಸರ ನೈತಿಕ ಸ್ಥೈರ್ಯ ಕುಗ್ಗಿಸಿದ ರಾಜ್ಯ ಸರ್ಕಾರ
ಈ ನಡುವೆ ಬುಧವಾರ ಪಕ್ಷದ ಕಚೇರಿಯಲ್ಲಿ ನಡೆದ ಸಭೆಯೊಂದರಲ್ಲಿ ಜೆಡಿಎಸ್ ವರಿಷ್ಠ ದೇವೇಗೌಡರನ್ನು (Devegowda ) ನೆನೆದು ಕುಮಾರಸ್ವಾಮಿ (Kumaraswamy tears) ಭಾವೋದ್ವೇಗಕ್ಕೆ ಒಳಗಾಗಿ ಕಣ್ಣೀರು ಹಾಕಿದ ಘಟನೆ ನಡೆದಿದೆ. ತಂದೆಯ ಅನುಪಸ್ಥಿತಿಯನ್ನು ನೆನೆದು ಭಾವುಕರಾದ ಕುಮಾರಸ್ವಾಮಿ ಈ ಸಭೆ ಅವರ ಸಮ್ಮುಖದಲ್ಲಿ ನಡೆಯಬೇಕಿತ್ತು ಎಂದರು.

ನಿತ್ಯ ನನ್ನ ಎಲ್ಲಾ ಕಾರ್ಯಕ್ರಮಗಳನ್ನು ಮುಗಿಸಿ ತಂದೆಯ ಬಳಿಗೆ ಓಡುತ್ತೇನೆ. ಅವರ ಆರೋಗ್ಯ ನನಗೆ ಮುಖ್ಯವಾಗಿದೆ. ನನಗೆ ಪದವಿ ಮುಖ್ಯವಲ್ಲ. ಅಧಿಕಾರಕ್ಕಿಂತ ತಂದೆಯ ಆರೋಗ್ಯ ಮುಖ್ಯ ಎಂದು ಕಣ್ಣೀರಿಟ್ಟರು.
Discussion about this post