ಬೆಂಗಳೂರು : ಕಾರಿನ ಮೇಲೆ ನಾಯಿ ಮೂತ್ರ ಮಾಡಿದ ಕಾರಣಕ್ಕೆ ನಾಯೀ ಮಾಲೀಕನಿಗೆ ಕಲ್ಲೇಟು ಕೊಟ್ಟ ಘಟನೆ ಬೆಂಗಳೂರು ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕಳೆದ ಭಾನುವಾರ HAL ನಿವೃತ ಉದ್ಯೋಗಿ ಗೇರಿ ರೋಜಾರಿಯಾ ರಾತ್ರಿ 11 ಗಂಟೆ ಸುಮಾರಿಗೆ ತಮ್ಮ ನಾಯಿಯನ್ನು ಮನೆಯಿಂದ ಹೊರಗೆ ಬಿಟ್ಟಿದ್ದರು. ಈ ವೇಳೆ ಹೊರಗೆ ಹೋದ ನಾಯಿ ಎದುರು ರಸ್ತೆಯ ಚಾರ್ಲ್ಸ್ ಅನ್ನುವವರು ನಿಲ್ಲಿಸಿದ್ದ ಕಾರಿನ ಮೇಲೆ ಮೂತ್ರ ವಿಸರ್ಜಿಸಿದೆ. ಇದನ್ನು ಗಮನಿಸಿದ ಚಾರ್ಲ್ಸ್, ಗೇರಿ ರೋಜಾರಿಯಾ ಜೊತೆಗೆ ಕ್ಯಾತೆ ತೆಗೆದಿದ್ದಾರೆ.
ಇಬ್ಬರ ನಡುವಿನ ಕಿತ್ತಾಟ ಕ್ಷಣದಿಂದ ಕ್ಷಣಕ್ಕೆ ಜೋರಾಗಿದೆ. ಈ ವೇಳೆ ಎರಡನೇ ಮಹಡಿಯಲ್ಲಿದ್ದ ಚಾರ್ಲ್ಸ್ ಗೇರಿ ರೋಜಾರಿಯೋ ಮೇಲೆ ಕಲ್ಲು ಎಸೆದಿದ್ದಾರೆ. ಇದರಿಂದ ಗಾಯಗೊಂಡ ಗೇರಿ ರೋಜಾರಿಯಾ ಗಾಯಗೊಂಡು ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಮನೆ ಸದಸ್ಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದಾದ ಬಳಿಕ ಬಾಣಸವಾಡಿ ಠಾಣೆಗೆ ಬಂದ ಗೇರಿ ರೋಜಾರಿಯಾ ದೂರು ದಾಖಲಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಾಗಿ ಹುಡುಕಾಟ ಪ್ರಾರಂಭಿಸಿದ್ರೆ ಚಾರ್ಲ್ಸ್ ಪರಾರಿಯಾಗಿದ್ದಾನೆ. ಇದೀಗ ಕಾರು ಮಾಲೀಕ ಚಾರ್ಲ್ಸ್ ಗಾಗಿ ಹುಡುಕಾಟ ನಡೆಸಲಾಗುತ್ತಿದೆ.
Discussion about this post