ರಾಜಸ್ಥಾನ : ಜೋಧಪುರ ಜಲೋರ್ ಜಿಲ್ಲೆಯಲ್ಲಿ ಪಾಪಿ ತಂದೆಯೊಬ್ಬ ತನ್ನ ಅಪ್ರಾಪ್ತ ಮಗಳ ಮೇಲೆಯೇ ಅತ್ಯಾಚಾರ ನಡೆಸಿದ ಹೀನ ಕೃತ್ಯ ಬೆಳಕಿಗೆ ಬಂದಿದೆ. ಈ ನಡುವೆ ತಂದೆಯ ಪಾಪದ ವಿಷಯ ತಿಳಿದ ಆ ವ್ಯಕ್ತಿಯ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕಳೆದ ಶನಿವಾರ ತಂದೆಯಿಂದ ಆಗುತ್ತಿರುವ ಅನ್ಯಾಯದ ಕುರಿತಂತೆ ಮಗಳು ತನ್ನ ಚಿಕ್ಕಮ್ಮನ ಬಳಿ ಮಾತನಾಡಿದ್ದ ಆಡಿಯೋ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಪೊಲೀಸರು ನೊಂದ ಬಾಲಕಿಯ ಶೋಧ ಕಾರ್ಯಕ್ಕೆ ಮುಂದಾಗಿದ್ದರು. ಅದೃಷ್ಟ ಅನ್ನುವಂತೆ ಪೊಲೀಸರು ಸಂತ್ರಸ್ಥೆಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದರು.
ಈ ನಡುವೆ ಆಡಿಯೋ ಬಾಲಕಿಯ ಸಹೋದರನಿಗೂ ಸಿಕ್ಕಿದೆ. ವಿಷಯ ತಿಳಿಯುತ್ತಿದಂತೆ ಸಹೋದ ನರ್ಮದಾ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿ ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇದೀಗ ಆರೋಪಿ ತಲೆ ಮರೆಸಿಕೊಂಡಿದ್ದು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಈ ಘಟನೆ ಯಾವಾಗ ನಡೆದಿತ್ತು ಅನ್ನುವುದು ಇನ್ನೂ ಗೊತ್ತಾಗಿಲ್ಲ. ಆದರೆ ಪಾಪಿ ತಂದೆ ಮಗಳು ಮಲಗಿದ್ದ ವೇಳೆ ಬಳಸಿಕೊಳ್ಳುತ್ತಿದ್ದ, ಮನೆಯಿಂದ ಒಬ್ಬಳೇ ಹೊರಗೆ ಹೋಗದಂತೆ, ಕುಟುಂಬ ಸದಸ್ಯರೊಂದಿಗೆ ಮಾತನಾಡದಂತೆ ಆದೇಶಿದ್ದ ಅನ್ನುವುದು ಗೊತ್ತಾಗಿದೆ. ಆದರೆ ಈ ವಿಷಯ ಬಾಲಕಿಯ ತಾಯಿಗೆ ಗೊತ್ತಿತ್ತಾ ಅನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.
Discussion about this post