Child Incident : ಮಕ್ಕಳಿರಲಿ ಮನೆ ತುಂಬಾ ಅನ್ನೋದು ಹಿರಿಯರ ಮಾತು. ಕೆಟ್ಟ ಮಗನಿರುತ್ತಾನೆ ಆದರೆ ಕೆಟ್ಟ ತಾಯಿ ಇರೋದಿಲ್ಲ ಅನ್ನೋದು ಲೋಕದ ಮಾತು.
ಆದರೆ ಕಲಿಯುಗದಲ್ಲಿ ಈ ಮಾತುಗಳಿಗೆಲ್ಲಾ ಬೆಲೆಯೂ ಇಲ್ಲ, ನೆಲೆಯೂ ಇಲ್ಲ. ನಮ್ಮ ಸುತ್ತಮುತ್ತ ನಡೆಯುತ್ತಿರುವ ಅನೇಕ ಘಟನೆಗಳನ್ನು ಗಮನಿಸಿದರೆ ಕಲಿಯುಗ ಅಂತ್ಯವಾಗುತ್ತಿದೆಯೇ ಅನ್ನಿಸುತ್ತಿದೆ.ಯಾಕಂದ್ರೆ ಬರೀ ಅಧರ್ಮದ ಸುದ್ದಿಯೇ ಕೇಳಿ ಬರುತ್ತಿದೆ. Child Incident
ಈ ನಡುವೆ ತಾನೇ ಹೆತ್ತ ಮಗುವನ್ನು ತಾಯಿಯೇ ಕ್ರೂರವಾಗಿ ಕೊಂದ ಘಟನೆ (Child Incident) ಬೆಂಗಳೂರಿನ ಸಂಪಗಿರಾಮನಗರದಲ್ಲಿ ನಡೆದಿದೆ. ಇದೀಗ ಈ ಘಟನೆ ಬಗ್ಗೆ ಮತ್ತಷ್ಟು Updateಗಳು ಸಿಕ್ಕಿದೆ.
ಇದನ್ನೂ ಓದಿ : praveen nettar: ಪ್ರವೀಣ್ ನೆಟ್ಟಾರು ಹತ್ಯೆ ಬಗ್ಗೆ ಮಹತ್ವ ಸುಳಿವು : ಕೊಲೆಗಾರರು ಕೇರಳದವರಲ್ಲ.. ದಕ್ಷಿಣ ಕನ್ನಡದವರು
ಮಗುವನ್ನು ಕೊಂದ ಸುಷ್ಮಾ SR ನಗರದ ಕಿರಣ್ ಅವರನ್ನು 12 ವರ್ಷಗಳ ಹಿಂದೆ ಮದುವೆಯಾಗಿದ್ದಳು. ಮದುವೆಯಾದ ಬಳಿಕ ಇವರಿಬ್ಬರೂ ಲಂಡನ್ ನಲ್ಲಿ ನೆಲೆಸಿದ್ದರು.ಹಲವು ವರ್ಷಗಳ ಕಾಲ ಇವರಿಗೆ ಸಂತಾನವಾಗಿರಲಿಲ್ಲ. ಹಾಗೇ ಬೆಂಗಳೂರಿಗೆ ಮರಳಿ ಅವರಿಗೆ 4 ವರ್ಷಗಳ ಹಿಂದೆ ಸಂತಾನ ಭಾಗ್ಯವಾಗಿತ್ತು.
ಆದರೆ ಮಗುವಿಗೆ ಎರಡು ವರ್ಷವಾಗುತ್ತಿದ್ದಂತೆ ಮಗು ಬುದ್ದಿಮಾಂದ್ಯ ಅನ್ನುವುದು ಗೊತ್ತಾಗಿದೆ.ಹೀಗಾಗಿ ಸುಷ್ಮಾ ಖಿನ್ನತೆಗೆ ಒಳಗಾಗಿದ್ದಳಂತೆ. 24 ಗಂಟೆಯೂ ಮಗುವಿನ ಮೇಲೆ ನಿಗಾ ಬೇರೆ ವಹಿಸಬೇಕಾಗಿತ್ತು. ಇದೇ ಕಾರಣಕ್ಕಾಗಿ ಕೆಲ ತಿಂಗಳ ಹಿಂದೆ ಮಗುವನ್ನು ರೈಲ್ವೆ ನಿಲ್ದಾಣದಲ್ಲಿ ಬಿಟ್ಟು ಬಂದಿದ್ದಳು. ಬಳಿಕ ಕಿರಣ್ ಮಗುವನ್ನು ಕರೆದುಕೊಂಡು ಬಂದಿದ್ದರು.
ಮೊದಲಿಗೆ ಮಹಡಿಯಿಂದ ಬಿದ್ದು ಮಗು ಮೃತಪಟ್ಟಿದೆ ಎಂದೇ ಭಾವಿಸಿದ್ದರು. ಆದರೆ ಸಿಸಿಟಿವಿ ದೃಶ್ಯಗಳನ್ನು ಜಾಲಾಡಿದ ವೇಳೆ ಇದೊಂದು ಕೊಲೆ ಎಂದು ಗೊತ್ತಾಗಿದೆ. ಮಾತ್ರವಲ್ಲದೆ ಮೊದಲಿಗೆ ಪೊಲೀಸರನ್ನೂ ದಾರಿ ತಪ್ಪಿಸಲು ಸುಷ್ಮಾ ಯತ್ನಿಸಿದ್ದಾಳೆ ಆದರೆ ನೌಟಂಕಿ ಆಟ ಪೊಲೀಸರಿಗೆ ಗೊತ್ತಾಗಿದೆ.
ಇದೀಗ ಸುಷ್ಮಾ ವಿರುದ್ಧ ಮರ್ಡರ್ ಕೇಸ್ ದಾಖಲಾಗಿದ್ದು, ಕೊಲೆಗಾರ್ತಿ ಪೊಲೀಸರಿಗೆ ಶರಣಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.
Discussion about this post