ನೆಟ್ಟಾರು (praveen nettar) ಹತ್ಯೆಯ ತನಿಖೆಯಲ್ಲಿ ಮಹತ್ವದ ಪ್ರಗತಿ ಸಾಧಿಸಲಾಗಿದೆ. ಹತ್ಯೆಕೋರರು ಸ್ಥಳೀಯರೇ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ
ಶಿವಮೊಗ್ಗ : ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು (praveen nettar) ) ಹತ್ಯೆಯ ತನಿಖೆಯಲ್ಲಿ ಪ್ರಗತಿಯಾಗಿಲ್ಲ ಅನ್ನುವ ಆಕ್ರೋಶ ವ್ಯಕ್ತವಾಗಿತ್ತು. ಹತ್ಯೆ ನಡೆದು ವಾರ ಕಳೆದರೂ ಪ್ರಮುಖ ಆರೋಪಿಗಳ ಸುಳಿವು ಸಿಕ್ಕಿರಲಿಲ್ಲ. 11ನೇ ದಿನದ ಕಾರ್ಯದ ಮುನ್ನವಾದ್ರೂ ಹತ್ಯೆಗೊಂದು ನ್ಯಾಯ ಸಿಗಲಿ ಅನ್ನುವುದು ಪ್ರವೀಣ್ ಗೆಳೆಯರ ಮಾತಾಗಿತ್ತು.
ಇದೇ ವಿಚಾರದಲ್ಲಿ ಮಾತನಾಡಿದ್ದ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್, ಹತ್ಯೆಕೋರರು ಯಾರು ಅಂತಾ ಗೊತ್ತಾಗಿದೆ. ಕೆಲವೇ ದಿನಗಳಲ್ಲಿ ನೆಟ್ಟಾರು (praveen nettar) ) ಅವರನ್ನು ವಶಕ್ಕೆ ಪಡೆಯುತ್ತೇವೆ ಅಂದಿದ್ದರು.
ಇದನ್ನು ಓದಿ : Amazon pressure cooker : ಕೆಟ್ಟು ಹೋದ ಕುಕ್ಕರ್ ಮಾರಿದ ಅಮೆಜಾನ್ 1 ಲಕ್ಷ ರೂಪಾಯಿ ದಂಡ
ಈ ನಡುವೆ ಶಿವಮೊಗ್ಗದಲ್ಲಿ ಮಾತನಾಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರ, ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯವರೇ ಹತ್ಯೆ ಮಾಡಿದ್ದಾರೆ ಅಂದಿದ್ದಾರೆ. ಈ ಮೂಲಕ ಕೊಲೆಗಾರರು ಕೇರಳದವರು ಅನ್ನುವ ಅನುಮಾನಕ್ಕೆ ತೆರೆ ಎಳೆದಿದ್ದಾರೆ.
ಪ್ರವೀಣ್ ಹಂತಕರು ಸ್ಥಳೀಯರೇ ಆಗಿದ್ದು, ಇವರ ಹಿನ್ನಲೆ ಮತ್ತು ಸಂಘಟನೆ ಬಗ್ಗೆ ತನಿಖೆ ಪ್ರಗತಿಯಲ್ಲಿದೆ. ಕೆಲವೇ ದಿನದಲ್ಲಿ ಆರೋಪಿಗಳನ್ನು ಬಂಧಿಸುವ ವಿಶ್ವಾಸವಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
Discussion about this post