ಮಂಗಳೂರು : ಕಳೆದ ಕೆಲವು ದಿನಗಳಿಂದ ಸೋನು ಶ್ರೀನಿವಾಸಗೌಡ ಅನ್ನುವ ಹೆಸರು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಅಲ್ಲಿರುವ ವಿಚಾರಗಳು ಅಸಲಿಯೋ ನಕಲಿಯೋ ಅನ್ನುವುದು ಪೊಲೀಸ್ ತನಿಖೆಯಾಗದ ಹೊರತು ಗೊತ್ತಾಗಲು ಸಾಧ್ಯವಿಲ್ಲ.
ಈ ನಡುವೆ ಸೋನು ಶ್ರೀನಿವಾಸಗೌಡ ಅನ್ನುವ ಮಹಿಳೆಯ ವಿರುದ್ಧ ಮಂಗಳೂರಿನ ಯುವಕನೊಬ್ಬ ಸೈಬರ್ ಕ್ರೈ ಠಾಣೆಯಲ್ಲಿ ದೂರು ನೀಡಿದ್ದು, ಹಣ ಡಬಲ್ ಮಾಡಿಕೊಡುವುದಾಗಿ ಭರವಸೆ ಕೊಟ್ಟು ನನಗೆ ಮೋಸವಾಗಿದೆ ಎಂದು ಯುವಕ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದಾನೆ.
ಈ ಸೋನು ಶ್ರೀನಿವಾಸ ಗೌಡ ಸಾಮಾಜಿಕ ಜಾಲತಾಣಗಳಲ್ಲಿ ಟ್ರೇಡರ್ ಸ್ಟೆಲ್ಲಾ ( trsder_stella ) ಅನ್ನುವ APP ಬಗ್ಗೆ ಪ್ರಮೋಷನ್ ಮಾಡಿದ್ದರು. ಸೋನು ಶ್ರೀನಿವಾಸ ಗೌಡ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಿದ್ಧಿಯಾಗಿದ್ದ ಕಾರಣ, ಹೂಡಿಕೆ ಬಗ್ಗೆ ನಂಬಿಕೆ ಇತ್ತು. ಹೀಗಾಗಿ 10 ಸಾವಿರ ಹಣ ಕಳುಹಿಸಿದ್ದೇನೆ. ಆದರೆ ನನಗೆ ಮೋಸವಾಗಿದೆ ಎಂದು ದೂರಿರುವ ಯುವಕ ಸೋನು ಗೌಡ ಅವರ ವಿಡಿಯೋ ನಂಬಿ ಯಾರೂ ಕೂಡಾ ಮೋಸ ಹೋಗಬೇಡಿ ಅಂದಿದ್ದಾರೆ.
Discussion about this post