ಈ ದುರ್ಘಟನೆ ಸ್ಥಳೀಯ ಜನಪ್ರತಿನಿಧಿಯೇ ನೇರ ಕಾರಣ. ಪ್ರತೀ ಗ್ರಾಮಕ್ಕೆ ಸರಿಯಾದ ಕಾಲು ಸಂಕ ಮಾಡಿರುತ್ತಿದ್ರೆ ಹೀಗಾಗುತ್ತಿರಲಿಲ್ಲ (Byndur)
ಉಡುಪಿ : ಶಾಲೆ ಬಿಟ್ಟು ಹಿಂತಿರುಗುತ್ತಿದ್ದ ವೇಳೆ 7 ವರ್ಷದ ಬಾಲಕಿ ಮರದ ಕಾಲು ಸಂಕದಿಂದ ಕಾಲು ಜಾರಿ ಹೊಳೆ ಪಾಲಾದ ದಾರುಣ ಘಟನೆ ಉಡುಪಿ ಜಿಲ್ಲೆಯ ಬೈಂದೂರು (Byndur) ತಾಲೂಕಿನ ಕಾಲ್ತೋಡು ಗ್ರಾಮದ ಬಿಜಮಕ್ಕಿ ಎಂಬಲ್ಲಿ ನಡೆದಿದೆ. ನೀರು ಪಾಲಾದ ಬಾಲಕಿಯನ್ನು ಸನ್ನಿಧಿ (7) ಎಂದು ಗುರುತಿಸಲಾಗಿದೆ.
ಚಪ್ಪರಿಕೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎರಡನೇ ತರಗತಿಯಲ್ಲಿ ಓದುತ್ತಿದ್ದ ಸನ್ನಿಧಿ ಸೋಮವಾರ ಸಂಜೆ ಶಾಲೆ ಬಿಟ್ಟು ಮನೆಗೆ ಬರುತ್ತಿದ್ದ ವೇಳೆ ಮರದ ದಿಮ್ಮಿಯಿಂದ ನಿರ್ಮಿಸಲಾದ ಕಾಲು ಸಂಕ ದಾಟುವಾಗ ಕಾಲು ಜಾರಿ ಹೊಳೆಗೆ ಬಿದ್ದಿದ್ದಾಳೆ.
ಇದೀಗ ನೀರಿನಲ್ಲಿ ಕೊಚ್ಚಿ ಹೋದ ಬಾಲಕಿಗಾಗಿ ಊರವರು ರಕ್ಷಣಾ ತಂಡದೊಂದಿಗೆ ಹುಡುಕಾಟ ನಡೆಸಿದ್ದಾರೆ.
ಇದನ್ನೂ ಓದಿ : Bengaluru news : ಹಸುವಿನ ಕೆಚ್ಚಲು, ಬಾಲ ಕತ್ತರಿಸುತ್ತಿದ್ದ ಪಾಪಿಯ ಬಂಧನ
Discussion about this post