ಕೆಲಸವಿಲ್ಲದೆ ಅಲೆಯುತ್ತಿದ್ದ ಪಾಪಿ ವಿಕೃತಿ ಮರೆಯುತ್ತಿದ್ದ ( Bengaluru news)
ಬೆಂಗಳೂರು : ರಸ್ತೆ ಬದಿಯಲ್ಲಿರುತ್ತಿದ್ದ ದನಗಳ ಬಾಲ ಮತ್ತು ಕೆಚ್ಚಲು ಹತ್ತರಿಸಿ ವಿಕೃತಿ ಮೆರೆಯುತ್ತಿದ್ದ ದುಷ್ಕರ್ಮಿಯನ್ನು ಸ್ಥಳೀಯರೇ ಹಿಡಿದು ಗೂಸಾ ಕೊಟ್ಟು ಪೊಲೀಸರಿಗೆ ಒಪ್ಪಿಸಿದ ಘಟನೆ ಚಂದ್ರ ಲೇ ಜೌಟ್ (Bengaluru news) ಪೊಲೀಸ್ ಠಾಣಾ ವ್ಯಾಪ್ತಿಯ ನಾಯಂಡನಹಳ್ಳಿಯಲ್ಲಿ ನಡೆದಿದೆ.
ಬಂಧಿತನನ್ನು ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಗೆಜ್ಜಲಗೆರೆಯ ಮಂಜುನಾಥ್ (34) ಎಂದು ಗುರುತಿಸಲಾಗಿದೆ. ಕೆಲಸವಿಲ್ಲದೆ ಅಲೆಯುತ್ತಿದ್ದ ಈ ಪಾಪಿ ರೈಲು ಹತ್ತಿ ಬೆಂಗಳೂರಿಗೆ ಬರುತ್ತಿದ್ದ. ಹಾಗೇ ಬಂದವನು ನಾಯಂಡಹಳ್ಳಿಯಲ್ಲಿ ಇಳಿದು ಸಂಬಂಧಿಕರ ಮನೆಗೆ ಹೋಗುತ್ತಿದ್ದ. ಹೋಗುವ ವೇಳೆ ರಸ್ತೆ ಬದಿಯಲ್ಲಿ ಹಸು ಕಂಡರೆ ಅದರ ಬಾಲ ಮತ್ತು ಕೆಚ್ಚಲು ಕತ್ತರಿಸಿ ಹಿಂಸೆ ಕೊಟ್ಟು ವಿಕೃತವಾಗಿ ಖುಷಿ ಪಡುತ್ತಿದ್ದ.
ಇದನ್ನೂ ಓದಿ : Darshan NikitaThukral: ದರ್ಶನ್ ಮತ್ತು ನನ್ನ ಸಂಬಂಧ ಹಾಳು ಮಾಡಿದ್ದು ನಿಖಿತಾ : ಓಂಪ್ರಕಾಶ್ ರಾವ್ ಸ್ಫೋಟಕ ಹೇಳಿಕೆ
ಮೇಯಲು ಬಿಟ್ಟ ಹಸುಗಳ ಬಾಲ ಕೆಚ್ಚಲು ಗಾಯಗೊಳ್ಳುತ್ತಿರುವುದರಿಂದ ಹೈನುಗಾರರು ಸಂಕಷ್ಟಕ್ಕೆ ಸಿಲುಕಿದ್ದರು. ಪದೇ ಪದೇ ಘಟನೆ ಮರುಕಳಿಸುತ್ತಿರವುದನ್ನು ಗಮನಿಸಿ ಹೈನುಗಾರರು ರೋಸಿ ಹೋಗಿದ್ದರು. ಹೀಗಾಗಿ ದುಷ್ಕರ್ಮಿಯನ್ನು ಹಿಡಿಯಲೇಬೇಕು ಎಂದು ರಹಸ್ಯ ಕಾರ್ಯಾಚರಣೆಗೆ ಮುಂದಾಗಿದ್ದಾರೆ.
ಇತ್ತೀಚೆಗೆ ಮತ್ತೆ ಮಂಡ್ಯದಿಂದ ಬೆಂಗಳೂರಿಗೆ ಬಂದಿದ್ದ ಮಂಜ, ಹಸುಗಳು ಮೇಯುವ ವೇಳೆ ವಿಕೃತಿ ಮೆರೆಯುತ್ತಿದ್ದ. ಹೀಗಾಗಿ ಈತನ ಕೃತ್ಯವನ್ನು ಮೊಬೈಲ್ ನಲ್ಲಿ ಸೆರೆ ಹಿಡಿದು ನಂತರ ಹಿಡಿದು ಬಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
Discussion about this post