ಮೈಸೂರು : ಪಟಾಕಿ ತರಲೆಂದು ಹೊರಗೆ ಹೋಗಿದ್ದ ಬಾಲಕನನ್ನು ಅಪಹರಿಸಿ ಹತ್ಯೆ ಮಾಡಿದ ಆರೋಪಿಯನ್ನ ಮೈಸೂರು ಪೊಲೀಸರು ಬಂಧಿಸಿದ್ದಾರೆ. ಹುಣಸೂರು ತಾಲೂಕಿನ ಹನಗೋಡಿನಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದೆ.
ಬುಧವಾರ ಪಟಾಕಿ ತರಲೆಂದು ರಾತ್ರಿ 7.30ಕ್ಕೆ ಹೋಗಿದ್ದ ಕಾರ್ತಿಕ್ (10) ನನ್ನು ಜವರಯ್ಯ ಎಂಬಾತ ಅಪಹರಿಸಿದ್ದ. ಇದಾದ ಬಳಿಕ ಕಾರ್ತಿಕ್ ತಂದೆ ಉದ್ಯಮಿ ಮಾಗರಾಜ್ ಅವರಿಗೆ ಕರೆ ಮಾಡಿದ್ದ ಆರೋಪಿ 4 ಲಕ್ಷ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ.
ಈ ಬಗ್ಗೆ ಬಾಲಕನ ಕುಟುಂಬಸ್ಥರು ಕೂಡಲೇ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಪೊಲೀಸರು ರಾತ್ರಿಯಿಂದಲೇ ತನಿಖೆ ಪ್ರಾರಂಭಿಸಿದ್ದರು. ಆದರೆ ಹಣ ಸಿಗದ ಕಾರಣ ಜವರಯ್ಯ ಕಾರ್ತಿಕ್ ನನ್ನ ಕೊಲೆ ಮಾಡಿದ್ದಾನೆ. ನಂತರ ಗ್ರಾಮದ ಕೆರೆ ಸಮೀಪ ಶವ ಬಿಸಾಡಿ ಹೋಗಿದ್ದ.
ಪ್ರಕರಣ ಗಂಭೀರವಾಗಿ ಪರಿಗಣಿಸಿದ ಪೊಲೀಸರು ಮೊಬೈಲ್ ಕರೆ ಆಧರಿಸಿ ಆರೋಪಿಯನ್ನ 24 ಗಂಟೆಯೊಳಗೆ ಬಂಧಿಸಿದ್ದಾರೆ.
Discussion about this post