ಧರ್ಮ ಚಾವಡಿ ಪ್ರದೇಶದಲ್ಲಿ ಕೋಟಿಗಟ್ಟಲೆ ಬೆಲೆಯ ಆಸ್ತಿ ಇದೆ, ಮಗಳು ವಿದೇಶದಲ್ಲಿದ್ದಾಳೆ. ಹಾಗಿದ್ದರೂ ಸ್ವಾಮೀಜಿ (talakala swamiji) ಆತ್ಮಹತ್ಯೆ ಮಾಡಿಕೊಂಡಿದ್ಯಾಕೆ
ಮಂಗಳೂರು : ಬಜಪೆ (Bajpe) ಸಮೀಪದ ತಲಕಳದ ಶ್ರೀ ಕೃಷ್ಣ ದೇವಿ ಪ್ರಸಾದ ತೀರ್ಥ ಸ್ವಾಮೀಜಿ ( Talakala Sri Krishna Deviprasad teertha Swamiji ) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶುಕ್ರವಾರ ಈ ವಿಷಯ ಬೆಳಕಿಗೆ ಬಂದಿದೆ. ಫ್ಯಾನ್ ನಲ್ಲಿ ಶ್ರೀಗಳ (Talakala swamiji) ಶವ ನೇತಾಡುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಈ ಸಂಬಂಧ ಸ್ವಾಮೀಜಿಯವರ (Talakala swamiji) ಪೂರ್ವಾಶ್ರಮದ ಪತ್ನಿ ಬಜಪೆ ಪೊಲೀಸ್ ಠಾಣೆಗೆ ( Bajpe police ) ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ. ಈಗಾಗಲೇ ತಲಕಳ ಶ್ರೀಗಳ ಶವವನ್ನು ಪೋಸ್ಟ್ ಮಾರ್ಟಂಗಾಗಿ ಕಳುಹಿಸಲಾಗಿತ್ತು. ವೈದ್ಯರ ವರದಿ ನಂತರ ಸಾವಿನ ಕಾರಣ ತಿಳಿದು ಬರಲಿದೆ.
ಇದನ್ನೂ ಓದಿ : Robert Vadra : ಸಕ್ರಿಯ ರಾಜಕಾರಣ ಪ್ರವೇಶದ ಸುಳಿವು ಕೊಟ್ಟ ಸೋನಿಯಾ ಗಾಂಧಿ ಅಳಿಯ
ಪೂರ್ವಾಶ್ರಮದಲ್ಲಿ ದೇವಿಪ್ರಸಾದ್ ಶೆಟ್ಟಿ ಹೆಸರಿನಿಂದ ಗುರುತಿಸಲ್ಪಟ್ಟಿದ್ದ ಇವರು ಮುಂಬೈನಲ್ಲಿ ಹೊಟೇಲ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು.ಬಳಿಕ ಸಂಸಾರದಲ್ಲಿ ವಿರಸನಾಗಿ ಸನ್ಯಾಸ ಸ್ವೀಕರಿಸಿದ್ದರು. ನಂತರ ಧರ್ಮಚಾವಡಿ ಹೆಸರಿನಲ್ಲಿ ಶಿವ ದೇವಾಲಯವನ್ನು ನಿರ್ಮಿಸಿದ್ದರು. ಇದೇ ದೇವಾಲಯದಲ್ಲಿ ಅನೇಕ ದೇವರ ಗುಡಿಗಳನ್ನೂ ಕೂಡಾ ನಿರ್ಮಿಸಲಾಗಿತ್ತು ( Talakala vishwanatha temple bajpe ) ಜೊತೆಗೆ ಇವರಿಗೆ ಸಾಕಷ್ಟು ಭಕ್ತರು ಕೂಡಾ ಇದ್ದರು. ಕಷ್ಟ ಎಂದು ಬಂದವರಿಗೆ ಭವಿಷ್ಯವನ್ನು ಹೇಳುತ್ತಿದ್ದರು.
ಇದನ್ನೂ ಓದಿ : Karnataka BJP : ಬಿಜೆಪಿ ರಾಜ್ಯ ಉಸ್ತುವಾರಿ ಸ್ಥಾನಕ್ಕೆ ಅಮಿತ್ ಶಾ ಆಪ್ತನ ಎಂಟ್ರಿ
ಕೆಲವೊಂದು ಮಂದಿಗೆ ಇವರು ಹೇಳಿದ ಮಾತು ಸತ್ಯವಾದ ಕಾರಣ ಒಂದಿಷ್ಟು ಪ್ರಚಾರದಲ್ಲೂ ಇದ್ದರು. ಪತ್ನಿ ಹಾಗೂ ಅವರ ತಾಯಿ ಧರ್ಮ ಚಾವಡಿ ಅಣತಿ ದೂರದಲ್ಲಿರುವ ಪೂರ್ವಾಶ್ರಮದ ಮನೆಯಲ್ಲಿ ವಾಸವಿದ್ದರು. ಮಗಳು ವಿದೇಶದಲ್ಲಿದ್ದಾರೆ. ಧರ್ಮ ಚಾವಡಿ ಪ್ರದೇಶದಲ್ಲಿ ಕೋಟಿಗಟ್ಟಲೆ ಬೆಲೆಯ ಆಸ್ತಿಯೂ ಇದೆ ಎಂದು ಸ್ಥಳೀಯರು ಹೇಳಿದ್ದಾರೆ.
flipkart bounce scooter : ಪ್ಲಿಪ್ ಕಾರ್ಟ್ ನಲ್ಲಿ ಬೌನ್ಸ್ ಇಲೆಕ್ಟ್ರಿಕ್ ಸ್ಕೂಟರ್ : ಕೇವಲ 60 ಸಾವಿರ ರೂಪಾಯಿ
ಕಾಲ ಬದಲಾಗಿದೆ… ಇದೀಗ ಬೈಕ್ ಸ್ಕೂಟರ್ ಕೂಡಾ ಆನ್ ಲೈನ್ ನಲ್ಲೇ ದೊರಕುತ್ತಿದೆ. ಬೌನ್ಸ್ ಕಂಪನಿ ಇದೀಗ ತನ್ನ ಬೈಕ್ ಸೇಲ್ ಮಾಡಲು flipkart ಮೊರೆ ಹೋಗಿದೆ.
ಬೆಂಗಳೂರು : ಪೆಟ್ರೋಲ್ ದರ ಏರುತ್ತಿರುವ ಹಿನ್ನಲೆಯಲ್ಲಿ ಇಲೆಕ್ಟ್ರಿಕ್ ವಾಹನದತ್ತ ಜನರ ಚಿತ್ತ ಹರಿದಿದೆ. ಸರ್ಕಾರ ಕೂಡಾ ಮಾಲಿನ್ಯ ತಗ್ಗಿಸುವ ನಿಟ್ಟಿನಲ್ಲಿ ಇಲೆಕ್ಟ್ರಿಕ್ ವಾಹನಗಳ ಮಾರಾಟಕ್ಕೆ ಒತ್ತು ನೀಡುತ್ತಿದೆ. ಖರೀದಿಸುವ ಮಂದಿಗೂ ಸಬ್ಸಿಡಿಯ ಆಸೆ ತೋರಿಸಲಾಗುತ್ತಿದೆ. ಹೀಗಾಗಿ ಇದೀಗ ಮಾರುಕಟ್ಟೆಯಲ್ಲಿ ಸಾಕಷ್ಟು ಕಂಪನಿಗಳ ಇಲೆಕ್ಟ್ರಿಕ್ ವಾಹನ ರಸ್ತೆಗಿಳಿದಿದೆ.ಆದರೆ ಮಾರುಕಟ್ಟೆಗೆ ಬಂದ ಇಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಬೆಂಕಿ ಹತ್ತುತ್ತಿರುವ ಪರಿಣಾಮ ಒಂದಿಷ್ಟು ಹಿನ್ನಡೆಯಾಗಿದೆ.
ಈ ನಡುವೆ ಬೆಂಗಳೂರು ಮೂಲದ ಬೌನ್ಸ್ ಕಂಪನಿ ತಯಾರಿಸಿರುವ ಇನ್ಭಿನಿಟಿ ಸ್ಕೂಟರ್ ಮಾರುಕಟ್ಟೆ ಪ್ರವೇಶಿಸಿದ್ದು, ಉಳಿದ ಸ್ಕೂಟರ್ ಗಳಿಗೆ ಹೋಲಿಸಿದರೆ ದರ ಕಡಿಮೆ ಇದೆ. ಇಂದಿನಿಂದ ಈ ಸ್ಕೂಟರ್ ಮಾರಾಟ ಪ್ರಾರಂಭಗೊಂಡಿದ್ದು, ಪ್ಲಿಪ್ ಕಾರ್ಟ್ ನ ಬಿಗ್ ಸೇವಿಂಗ್ ಡೇಸ್ ನಲ್ಲಿ ಈ ಸ್ಕೂಟರ್ ಕೂಡಾ ಲಿಸ್ಟ್ ಆಗಿದೆ.
ಇದನ್ನೂ ಓದಿ : Congress Protest : ಗುಜರಿಯಿಂದ ಕಾರು ತಂದು ಬೆಂಕಿ ಹಚ್ಚಿದ ಕಾಂಗ್ರೆಸ್ ಕಾರ್ಯಕರ್ತರು
ಆರ್ಡರ್ ಮಾಡಿದ 15 ದಿನಗಳಲ್ಲಿ ಸ್ಕೂಟರ್ ಮನೆ ಬಾಗಿಲಿಗೆ ಬರಲಿದೆ. ಪ್ರಸ್ತುತ ಕರ್ನಾಟಕ, ತೆಲಂಗಾಣ, ನವದೆಹಲಿ ಗುಜರಾತ್ ಮತ್ತು ಮಹಾರಾಷ್ಟ್ರಕ್ಕೆ ಮಾತ್ರ ಡೆಲಿವರಿ ನೀಡಲಾಗುತ್ತಿದೆ.
ಒಂದು ಸ್ಕೂಟರ್ ಬೆಲೆ 74,499 ರೂಪಾಯಿಯಾಗಿದ್ದು, ರಸ್ತೆಗೆ ಬರುವಾಗ 80 ಸಾವಿರ ರೂಪಾಯಿಯಾಗುತ್ತದೆ. ಕೆಲ ರಾಜ್ಯಗಳು ಎಲೆಕ್ಟ್ರಿಕ್ ಸ್ಕೂಟರ್ ಗೆ ಸಬ್ಸಿಡಿ ಕೊಟ್ಟಿರುವ ಕಾರಣ, ಕರ್ನಾಟಕದಲ್ಲಿ 60 ಸಾವಿರ ರೂಪಾಯಿ, ರಾಜಸ್ಥಾನ 73 ಸಾವಿರ ರೂಪಾಯಿ, ದೆಹಲಿ 59 ಸಾವಿರ ರೂಪಾಯಿ ಮತ್ತು ಗುಜರಾತ್ ನಲ್ಲಿ 60 ಸಾವಿರ ರೂಪಾಯಿಗೆ ಬೌನ್ಸ್ ಇನ್ಫಿನಿಟಿ ಇ1 ಸ್ಕೂಟರ್ ಲಭ್ಯವಿರುತ್ತದೆ.
Discussion about this post