ಮಚ್ಚು ಹಿಡಿದವರಿಗೆ ಕಿತ್ತಾಡಲು ಕಾರಣಗಳೇ ಬೇಕಿಲ್ಲ. ( bengaluru rowdies ) ಅದರಲ್ಲೂ ಖಾಕಿ ಭಯವಿಲ್ಲದೆ ಮರೆಯುತ್ತಿರುವ ರೌಡಿಗಳ ಅಟ್ಟಹಾಸ ಮಿತಿ ಮೀರಿದೆ
ಬೆಂಗಳೂರು : ಬಾರ್ ಒಂದರ ಶೌಚಾಲಯದಲ್ಲಿ ಮೂತ್ರ ಹೊಯ್ಯುವಾಗ ಇಬ್ಬರು ರೌಡಿಗಳ ( bengaluru rowdies ) ನಡುವೆ ಪ್ರಾರಂಭವಾದ ಜಗಳ ಅತಿರೇಕಕ್ಕೆ ಹೋದ ಘಟನೆ ನಗರದ ಉಪ್ಪಾರಪೇಟೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪರಸ್ಪರ ಬಿಯಲ್ ಬಾಟಲಿಯಲ್ಲಿ ಹೊಡೆದಾಡಿಕೊಂಡ ರೌಡಿಗಳನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆರ್ ಆರ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿ ಶೀಟರ್ ( 25 ) ರಾಘವೇಂದ್ರ ತನ್ನ ಸ್ನೇಹಿತರಾದ ಆಕಾಶ್ ಮತ್ತು ನವೀನ್ ಜೊತೆಗೆ ಸೆವೆನ್ ಹಿಲ್ಸ್ ಬಾರ್ ಗೆ ತೆರಳಿದ್ದರು. ಇದೇ ಬಾರ್ ಗೆ ಶ್ರೀರಾಮಪುರ ಠಾಣೆಯ ರೌಡಿ ಶೀಟರ್ ಯಶವಂತ (24) ಕೂಡಾ ಬಂದಿದ್ದ.
ಇದನ್ನೂ ಓದಿ : xi jinping – ಇಸ್ಲಾಂ ಧರ್ಮ ಚೀನಾದಲ್ಲಿ ಚೀನೀ ದೃಷ್ಟಿಕೋನಕ್ಕೆ ಬದ್ಧವಾಗಿರಬೇಕು
ರಾತ್ರಿ12.15ರ ಸುಮಾರಿಗೆ ರಾಘವೇಂದ್ರ ಮೂತ್ರ ವಿಸರ್ಜನೆ ಸಲುವಾಗಿ ಶೌಚಾಲಯಕ್ಕೆ ಹೋಗಿದ್ದಾನೆ. ಅಲ್ಲಿ ಇದ್ದ ಮತ್ತೊಬ್ಬ ರೌಡಿ ಶೀಟರ್ ಯಶವಂತ್, ನನ್ನ ಯಾಕೆ ಗುರಾಯಿಸ್ತೀಯಾ ಎಂದು ಕಿರಿಕ್ ತೆಗೆದಿದ್ದಾನೆ. ಅಷ್ಟಕ್ಕೆ ಶುರುವಾದ ಜಗಳ ಮಾತಿಗೆ ಮಾತು ಬೆಳೆದು ಹೊಡೆದಾಟ ತನಕ ಬಂದಿದೆ. ಈ ವೇಳೆ ಯಶವಂತ್ ಬಿಯರ್ ಬಾಟಲಿಯಿಂದ ರಾಘವೇಂದ್ರನ ತಲೆಗೆ ಹೊಡೆದಿದ್ದಾನೆ. ಈ ವೇಳೆ ಯಶವಂತ್ ಸಹಚರರು ರಾಘವೇಂದ್ರನ ಮೇಲೆ ಹಲ್ಲೆ ಮಾಡಿದ್ದಾರೆ.
ಬಳಿಕ ರಾಘವೇಂದ್ರ ಮತ್ತು ಆತನ ಸಹಚರರು ಯಶವಂತ್ ತಲೆಗೆ ಬಿಯರ್ ಬಾಟಲಿಯಿಂದ ಹೊಡೆದಿದ್ದಾರೆ. ಹೀಗೆ ಎರಡು ಗುಂಪುಗಳ ಕೆಲ ಕಾಲ ಬಾರ್ ನಲ್ಲಿ ಪ್ರದರ್ಶನ ತೋರಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಗಾಯಗೊಂಡ ರೌಡಿಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ 5 ಮಂದಿಯನ್ನು ತಮ್ಮ ವಶಕ್ಕೆ ಪಡೆದಿದ್ದಾರೆ.
ಜನಾಕ್ರೋಶಕ್ಕೆ ನಡುಗಿದ ಸರ್ಕಾರ : ಶೀಘ್ರದಲ್ಲೇ ಹಾಲು ಮೊಸರು ದರ ಇಳಿಕೆ
ಅಕ್ಕಿ ಬೇಳೆ ಕಾಳು ಹಾಲು ಮೊಸರು ಹೀಗೆ ನಿತ್ಯ ಉಪಯೋಗಿಸುವ ವಸ್ತುಗಳ ಮೇಲಿನ GST ಪರಿಣಾಮ ಜನಸಾಮಾನ್ಯನ ಮೇಲಾಗಿದೆ.
ಬೆಂಗಳೂರು : ಆಚ್ಛೇ ದಿನ್ ಬರುತ್ತದೆ ಎಂದು ಕಾದಿದ್ದ ಮಂದಿಗೆ ಆಷಾಢ ತಿಂಗಳಲ್ಲೇ ಸರ್ಕಾರ ಶಾಕ್ ಕೊಟ್ಟಿದೆ. ಸೋಮವಾರದಿಂದ ಮತ್ತೊಂದು ಸುತ್ತಿನ ದುಬಾರಿ ದುನಿಯಾ ಪ್ರಾರಂಭವಾಗಿದ್ದು, ನಿತ್ಯ ಬಳಸುವ ವಸ್ತುಗಳು ತುಟ್ಟಿಯಾಗಿದೆ. ಈಗಾಗಲೇ ಗ್ಯಾಸ್, ಪೆಟ್ರೋಲ್ ದರ ಏರಿಕೆಯಿಂದ ತರ್ಕಾರಿ ಸೇರಿದಂತೆ ಅನೇಕ ನಿತ್ಯ ಬಳಕೆಯ ವಸ್ತುಗಳು ದುಬಾರಿಯಾಗಿದೆ. ಅದಕ್ಕೆ ಇದೀಗ GST ಹೆಸರಿನಲ್ಲಿ ಮತ್ತೊಂದು ದರಾಸುರನ ಸೇರ್ಪಡೆಯಾಗಿದೆ.
ಪ್ಯಾಕ್ ಮಾಡಿದ ವಸ್ತುಗಳಿಂದ ಹಿಡಿದು ಆಸ್ಪತ್ರೆಯ ಬಿಲ್ ತನಕ GST ಹಾಕಲಾಗಿದೆ. ಈ ಕಾರಣದಿಂದ ಅಕ್ಕಿ ಬೇಳೆ ಕಾಳು ಹಾಲು ಮೊಸರಿನ ದರವೂ ಏರಿಕೆಯಾಗಿದೆ. ಅದರಲ್ಲೂ ಅಕ್ಕಿ ಮತ್ತು ಬೇಳೆ ಕಾಳುಗಳನ್ನು ಮದ್ಯಮ ವರ್ಗದ ಮಂದಿ ಖರೀದಿಸಲು ಸಾಧ್ಯವೇ ಇಲ್ಲ. ಹೀಗಾಗಿ ಮೋದಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಒಂದು ಕಡೆ ಲಂಚ ಕೊಟ್ಟರೆ ಕೆಲಸವಾಗೋದಿಲ್ಲ, ಮತ್ತೊಂದು ಕಡೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗಾದ್ರೆ ದುಡಿದ ಹಣದಲ್ಲಿ ಉಳಿತಾಯ ಮಾಡೋದಾದ್ರೂ ಹೇಗೆ ಅನ್ನುವುದು ಜನರ ಪ್ರಶ್ನೆಯಾಗಿತ್ತು.
ಈ ನಡುವೆ ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಪ್ಯಾಕ್ ಮಾಡಿದ ವಸ್ತುಗಳ ದರ ಏರಿಸುವ ಅಗತ್ಯವಿಲ್ಲ. ಇದು ಉತ್ಪಾದಕರ ಮೇಲೆ ಹಾಕುವ GSTಯಾಗಿದೆ. ಇದನ್ನು ಉತ್ಪಾದಕರೇ ಕ್ಲೇಮ್ ಮಾಡಿಕೊಂಡು ವಾಪಾಸ್ ಪಡೆಯಲು ಅವಕಾಶವಿದೆ. ಹಾಗಿರುವಾಗ ಇದನ್ನು ಗ್ರಾಹಕರಿಗೆ ವರ್ಗಾಯಿಸುವುದರಲ್ಲಿ ಅರ್ಥವಿಲ್ಲ. ಈ ಸಂಬಂಧ GST ಕೌನ್ಸಿಲ್ ನಿಂದಲೇ ಆದೇಶವೊಂದನ್ನು ಹೊರಡಿಸುವುದಾಗಿ ಹೇಳಿದ್ದಾರೆ.
ಈ ಮೂಲಕ ಶೀಘ್ರದಲ್ಲೇ ಏರಿದ ಬೆಲೆಗಳು ಇಳಿಯುವಂತಾಗಲು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಮುಖ್ಯಮಂತ್ರಿಗಳು ಆಗಿರುವ ಲೋಪವನ್ನು ಪತ್ತೆ ಹಚ್ಚಿ ಸರಿಪಡಿಸುವುದಾಗಿ ಹೇಳಿದ್ದಾರೆ. ಸಿಟಿ ರವಿ, ಈಶ್ವರಪ್ಪ ಸೇರಿದಂತೆ ಅನೇಕ ಬಿಜೆಪಿ ನಾಯಕರು ದರ ಏರಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಈ ನಡುವೆ ಈ ಹಿಂದೆ ನರೇಂದ್ರ ಮೋದಿಯವರು ಅಕ್ಕಿ ಕಾಳು ಬೇಳೆಗಳ ಮೇಲೆ ತೆರಿಗೆ ಹಾಕುವ ಕಾಂಗ್ರೆಸ್ ಸರ್ಕಾರದ ಕ್ರಮವನ್ನು ಟೀಕಿಸಿ ಮಾಡಿದ ಭಾಷಣ ವೈರಲ್ ಆಗುತ್ತಿದೆ. ಅವತ್ತು ನೀವು ಹೇಳಿದ್ದೇನು ಇವತ್ತು ನೀವು ಮಾಡುತ್ತಿರುವುದೇನು ಎಂದು ಪ್ರಶ್ನಿಸುತ್ತಿದ್ದಾರೆ.
Discussion about this post