ಚೀನಾದಲ್ಲಿರುವ ಇಸ್ಲಾಂ ಧರ್ಮ ದೃಷ್ಟಿಕೋನದಲ್ಲಿ ಚೀನಿಯಾಗಿರಬೇಕು – xi jinping
ಚೀನಾದಲ್ಲಿನ ಇಸ್ಲಾಂ ಧರ್ಮ ಚೀನೀ ದೃಷ್ಟಿಕೋನಕ್ಕೆ ಬದ್ಧವಾಗಿರತಕ್ಕದ್ದು. ಚೀನಾದಲ್ಲಿನ ಎಲ್ಲಾ ಧರ್ಮಗಳು ಕಮ್ಯುನಿಸ್ಟ್ ಪಕ್ಷದ ಸಮಾಜವಾದಿ ಪರಿಕಲ್ಪನೆಗೆ ಹೊಂದಿಕೊಳ್ಳತಕ್ಕದ್ದು ಎಂದು ಚೀನಾ ಅಧ್ಯಕ್ಷ ಷಿ ಜಿನ್ ಪಿಂಗ್ ( xi jinping )ಹೇಳಿದ್ದಾರೆ. ಉಯಿಘರ್ ಅನ್ನುವ ಮುಸ್ಲಿಮರೇ ಹೆಚ್ಚಿರುವ ಷಿಜಿಯಾಂಗ್ ಪ್ರದೇಶಕ್ಕೆ ಭೇಟಿ ಕೊಟ್ಟ ಬಳಿಕ ಮಾತನಾಡಿದ ಅವರು ಚೀನೀ ರಾಷ್ಟ್ರಕ್ಕಾಗಿ ಸಮುದಾಯ ಪ್ರಜ್ಞೆಯನ್ನು ಗಟ್ಟಿಗೊಳಿಸಬೇಕು ಅಂದರು.
ಷಿಜಿಯಾಂಗ್ ಪ್ರದೇಶದಲ್ಲಿ ಉಯಿಘರ್ ಮುಸ್ಲಿಂರ ಪ್ರತಿಭಟನೆಗಳನ್ನು ಹತ್ತಿಕ್ಕಲು ಚೀನಾದ ಪ್ರತಿಭಟನೆಗಳು ಪ್ರಯತ್ನಿಸುತ್ತಿದೆ. ಹೀಗಾಗಿ ಈ ಪ್ರದೇಶಕ್ಕೆ ಚೀನಾ ಅಧ್ಯಕ್ಷರ ಭೇಟಿ ಮಹತ್ವ ಪಡೆದುಕೊಂಡಿದೆ.
ಚೀನಾದಲ್ಲಿರುವ ಇಸ್ಲಾಂ ಧರ್ಮ ಆಡಳಿತದಲ್ಲಿರುವ ಕಮ್ಯೂನಿಸ್ಟ್ ಪಕ್ಷದ ನೀತಿಗಳೊಂದಿಗೆ ನಿಲ್ಲಬೇಕು ಅನ್ನುವುದು ಷಿ ಜಿನ್ ಪಿಂಗ್ ವಾದವಾಗಿದೆ. ಹಲವಾರು ವರ್ಷಗಳಿಂದ ಅವರು ಇದನ್ನೇ ಪ್ರತಿಪಾದಿಸಿಕೊಂಡು ಬಂದಿದ್ದಾರೆ.
ಇದನ್ನೂ ಓದಿ : Mangaluru Couple arrested ganja case : ವಿದ್ಯಾರ್ಥಿಗಳಿಗೆ ಗಾಂಜಾ ಮಾರುತ್ತಿದ್ದ ದಂಪತಿ ಬಂಧನ
ಅಪ್ರಾಪ್ತೆಗೆ ಮೆಸೇಜ್ ಮಾಡಿ ಕಾರಣಕ್ಕೆ ಕೊಲೆಯಾದ 17ರ ಬಾಲಕ
ಮೊಬೈಲ್ ಅನ್ನುವುದು ಇದೀಗ ಹಲವರ ಬದುಕಿಗೆ ಪಾಪಿಯಾಗಿ ಪರಿಣಮಿಸಿದೆ. ಬಳಸಬಾರದ ಕೆಲಸಕ್ಕೆ ಮೊಬೈಲ್ ಬಳಸಿದ್ರೆ ಅದು ಮತ್ಯಾವುದಕ್ಕೋ ಎಡೆ ಮಾಡಿಕೊಡುತ್ತದೆ.
ಬೆಂಗಳೂರು : 9ನೇ ತರಗತಿಯಲ್ಲಿ ಓದುತ್ತಿರುವ ಸಂಬಂಧಿಯಾದ ಬಾಲಕಿಗೆ ಮೆಸೇಜ್ ಮಾಡುತ್ತಿದ್ದ 17ರ ಹರೆಯದ ಬಾಲಕನನ್ನು ಹೊಡೆದು ಕೊಂದ ದಾರುಣ ಘಟನೆ ಬೆಂಗಳೂರಿನ ಹೊಸ ಬೈಯಪ್ಪನಹಳ್ಳಿಯಲ್ಲಿ ನಡೆದಿದೆ. ಮೃತ ಬಾಲಕನನ್ನು ಬನಶಂಕರಿ ನಿವಾಸಿ ಪ್ರಜ್ವಲ್ ( 17 ) ಎಂದು ಗುರುತಿಸಲಾಗಿದೆ. ಹತ್ಯೆ ಸಂಬಂಧ ಬಾಲಕಿಯ ಚಿಕ್ಕಪ್ಪ ನಾಗೇಂದ್ರ ಸೇರಿದಂತೆ ಮೂವರನ್ನು ವಶಕ್ಕೆ ಪಡೆಯಲಾಗಿದೆ.
ದೊಡ್ಡಬಳ್ಳಾಪುರ ತಾಲೂಕಿನ ನಾಗಶೆಟ್ಟಿ ಹಳ್ಳಿ ಗ್ರಾಮದ ಪ್ರಜ್ವಲ್ ಹಲವು ವರ್ಷಗಳಿಂದ ಕುಟುಂಬ ಸದಸ್ಯರೊಂದಿಗೆ ಬನಶಂಕರಿಯಲ್ಲಿ ನೆಲೆಸಿದ್ದ. ಚಿಂದಿ ಆಯುವ ಕೆಲಸ ಮಾಡುತ್ತಿದ್ದ ಈತ ನ್ಯೂ ಬೈಯಪ್ಪನಹಳ್ಳಿಯಲ್ಲಿ ನೆಲೆಸಿರುವ ತನ್ನ ಸಂಬಂಧಿಯೊಬ್ಬರ ಪುತ್ರಿಗೆ ಮೆಸೇಜ್ ಮಾಡುತ್ತಿದ್ದ. ನನಗೆ ಮೆಸೇಜ್ ಮಾಡಬೇಡ ಎಂದು ಹೇಳಿದರೂ ಪ್ರಜ್ವಲ್ ಕೇಳಿರಲಿಲ್ಲ.
ಕೊನೆಗೆ ಈ ವಿಷಯ ತಿಳಿದ ಬಾಲಕಿಯ ಚಿಕ್ಕಪ್ಪ ನಾಗೇಂದ್ರ ಶುಕ್ರವಾರ ರಾತ್ರಿ ಮಾತುಕತೆ ಸಲುವಾಗಿ ಪ್ರಜ್ವಲ್ ನನ್ನು ಕರೆಸಿಕೊಂಡಿದ್ದಾರೆ. ಈ ವೇಳೆ ತಮ್ಮ ಮಗಳ ತಂಟೆಗೆ ಬಾರದಂತೆ ಎಚ್ಚರಿಕೆ ಕೊಟ್ಟಿದ್ದಾರೆ. ಈ ವೇಳೆ ಪ್ರಜ್ವಲ್ ಕೂಡಾ ತಿರುಗಿ ಮಾತನಾಡಿದ್ದಾನೆ ಅನ್ನಲಾಗಿದೆ. ಈ ಕಾರಣದಿಂದ ಇಬ್ಬರ ನಡುವೆ ಹೊಡೆದಾಟವಾಗಿದೆ. ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ.
ಒಂದು ಹಂತದಲ್ಲಿ ಆರೋಪಿಗಳು ದೊಣ್ಣೆಯಿಂದ ಪ್ರಜ್ವಲ್ ಗೆ ಹೊಡೆದಿದ್ದಾರೆ. ತಲೆಗೆ ಪೆಟ್ಟು ಬಿದ್ದ ಕಾರಣ ಪ್ರಜ್ವಲ್ ಗಂಭೀರವಾಗಿ ಗಾಯಗೊಂಡಿದ್ದಾನೆ. ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿದ್ದಾನೆ.
Discussion about this post