Bengaluru theft : ರಾಜಧಾನಿಯ ಪೊಲೀಸರು ಮೈ ಕೊಡವಿ ನಿಲ್ಲಬೇಕಿದೆ. ಸರ್ಕಾರ ಕೊಟ್ಟಿರುವ ಆಯುಧಗಳು ರುಚಿಯನ್ನು ಕಳ್ಳರು, ದರೋಡೆಕೋರರು ಮರೆತಿದ್ದಾರೆ. ಇಲ್ಲೊಬ್ಬ ಕಳ್ಳ ದೇವರ ಪೂಜಾ ಸಾಮಾಗ್ರಿಯನ್ನೂ ಬಿಟ್ಟಿಲ್ಲ
ಬೆಂಗಳೂರು : ತೊಳೆದು ಮನೆ ಮುಂದೆ ಒಣಗಲು ಇಟ್ಟಿದ್ದ ಹಿತ್ತಾಳೆ ಕುಕ್ಕರ್, ಹಿತ್ತಾಳೆ ಪೂಜಾ ಸಾಮಾಗ್ರಿ, ಬೆಳ್ಳಿಲೋಟವನ್ನು ಕಳ್ಳನೊಬ್ಬ ( Bengaluru theft ) ದೋಚಿದ ಘಟನೆ ಬನಶಂಕರಿಯಲ್ಲಿ ನಡೆದಿದೆ. ಈ ಸಂಬಂಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬನಶಂಕರಿ 3 ನೇ ಹಂತದ ಗುರುರಾಜ ಲೇಜೌಟ್ ನ 9ನೇಮುಖ್ಯ ರಸ್ತೆಯ ಕೃತಿ ಅನ್ನುವವರು ಜೂನ್ 16 ರಂದು ಮನೆಯ ಹಿತ್ತಾಳೆ ಕುಕ್ಕರ್, ಹಿತ್ತಾಳೆ ಪೂಜಾ ಸಾಮಾಗ್ರಿ, ಬೆಳ್ಳಿಲೋಟವನ್ನು ತೊಳೆದು ನೀರು ಆರಲು ಮನೆ ಮುಂದೆ ಬಿಸಿಲಿಗೆ ಇಟ್ಟಿದ್ದರು.
ಇದನ್ನೂ ಓದಿ : ಪೊಲೀಸ್ ಇಲಾಖೆಯಲ್ಲಿ ಇರುವವರೆಲ್ಲಾ ಕೆಟ್ಟವರಲ್ಲ : ಅನಾರೋಗ್ಯ ಪೀಡಿತನೊಬ್ಬನಿಗೆ ಸಹಾಯ ಹಸ್ತ ಚಾಚಿದ ಅನಿತಾ ಲಕ್ಷ್ಮಿ
ಇದಾದ ಬಳಿಕ ಮಗಳಿಗೆ ಲಸಿಕೆ ಹಾಕಿಸುವ ಸಲುವಾಗಿ ಆಸ್ಪತ್ರೆಗೆ ತೆರಳಿದ್ದರು. ಎನ್.ಆರ್. ಕಾಲೋನಿಯ ಆಸ್ಪತ್ರೆಯಿಂದ ಬರುವಷ್ಟರಲ್ಲಿ ಒಣಗಲು ಇಟ್ಟಿದ ಪಾತ್ರೆಗಳು ನಾಪತ್ತೆಯಾಗಿತ್ತು. ಈ ಬಗ್ಗೆ ಅಕ್ಕ ಪಕ್ಕದ ಮನೆಯವರಲ್ಲಿ ವಿಚಾರಿಸಿದ್ರೆ ಯಾವುದೇ ಸುಳಿವು ಸಿಕ್ಕಿಲ್ಲ. ಹೀಗಾಗಿ ಬನಶಂಕರಿ ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಿದ್ದಾರೆ.
ಲಕ್ಷ್ಮಣ ರೇಖೆ ದಾಟಿದ ಸುಪ್ರೀಂಕೋರ್ಟ್ : 115 ಅಧಿಕಾರಿಗಳಿಂದ ಆಕ್ಷೇಪ
ನೂಪುರ್ ಶರ್ಮಾ ವಿಚಾರದಲ್ಲಿ ಸುಪ್ರೀಂಕೋರ್ಟ್ ( supreme court ) ನ್ಯಾಯಾಧೀಶರು ಆಡಿದ ಮಾತು ಆಕ್ಷೇಪಕ್ಕೆ ಕಾರಣವಾಗಿದೆ. ಇದೀಗ ನಿವೃ ನ್ಯಾಯಾಧೀಶರು, ನಿವೃತ ಅಧಿಕಾರಿಗಳೇ ಈ ಬಗ್ಗೆ ದನಿ ಎತ್ತಿದ್ದಾರೆ.
ನವದೆಹಲಿ : ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ( supreme court ) ಆಡಿದ ಮಾತು ಇದೀಗ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಅವರಿಂದಲೇ ದೇಶಕ್ಕೆ ಬೆಂಕಿ ಬಿತ್ತು ಅನ್ನುವ ಸುಪ್ರೀಂಕೋರ್ಟ್ ಹೇಳಿಕೆ ವಿರುದ್ಧ ಇದೀಗ 15 ನಿವೃತ ನ್ಯಾಯಾಧೀಶರು ಸೇರಿ 77 ನಿವೃತ ಐಎಎಸ್ ಅಧಿಕಾರಿಗಳು, 25 ನಿವೃತ ಸೇನಾಧಿಕಾರಿಗಳು ಸುಪ್ರೀಂಕೋರ್ಟ್ ಗೆ ಬಹಿರಂಗ ಪತ್ರ ಬರೆದಿದ್ದಾರೆ.
ನೂಪುರ್ ಶರ್ಮಾ ಅವರು ನೀಡಿದ ಹೇಳಿಕೆಯಿಂದಲೇ ದೇಶದಲ್ಲಿ ಇತ್ತೀಚೆಗೆ ಹಿಂಸಾಚಾರ ನಡೆದಿದೆ. ಇದಕ್ಕೆ ಅವರೇ ಏಕಾಂಗಿ ಹೊಣೆ, ಅವರಿಂದಲೇ ದೇಶಕ್ಕೆ ಬೆಂಕಿ ಬಿತ್ತು ಅನ್ನುವ ಮಾತನ್ನು ನೂಪುರ್ ಶರ್ಮಾ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ವ್ಯಕ್ತಪಡಿಸಿತ್ತು. ದ್ವಿಸದಸ್ಯ ಪೀಠದ ಅಭಿಪ್ರಾಯ ನ್ಯಾಯಾಲಯ ತನ್ನ ಲಕ್ಷ್ಮಣ ರೇಖೆ ಮೀರಿದ ವರ್ತನೆ ಎಂದು ಬಹಿರಂಗ ಪತ್ರ ಬರೆದಿರುವ ಗಣ್ಯರು ಕಿಡಿ ಕಾರಿದ್ದಾರೆ.
ಸುಪ್ರೀಂಕೋರ್ಟ್ ನ ನಡೆ ಕಳವಳಕಾರಿಯಾಗಿದ್ದು, ಸ್ವಾಗತಾರ್ಹವಲ್ಲ ಎಂದು ಪತ್ರದಲ್ಲಿ ಹೇಳಲಾಗಿದ್ದು, ಇಂಥ ಅಭಿಪ್ರಾಯ ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯ ನ್ಯಾಯಾಂಗದ ಮೇಲೆ ಗಾಯದ ಗುರುತು ಮೂಡಿಸುತ್ತದೆ. ದೇಶದ ಭದ್ರತೆ ಮತ್ತು ಪ್ರಜಾಪ್ರಭುತ್ವ ಮಾಲ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಪತ್ರದಲ್ಲಿ ಹೇಳಲಾಗಿದೆ.
ಈ ಪತ್ರಕ್ಕೆ ಬಾಂಬ್ ಹೈಕೋರ್ಟ್ ನಿವೃತ ನ್ಯಾಯಾಧೀಶರಾದ ನ್ಯಾ. ಕ್ಷಿತಿಜ್ ವ್ಯಾಸ್, ಗುಜರಾತ್ ಹೈಕೋರ್ಟ್ ನ ನ್ಯಾ. ಎಸ್.ಎಂ. ಸೋನಿ, ರಾಜಸ್ಥಾನ ಹೈಕೋರ್ಟ್ ನ ನ್ಯಾ. ಎಸ್.ಎನ್. ಧಿಂಗ್ರಾ, ನಿವೃತ ಐಪಿಎಸ್ ಅಧಿಕಾರಿಗಳಾದ ಆರ್.ಎಸ್. ಗೋಪಾಲನ್, ಎಸ್. ಕೃಷ್ಣಕುಮಾರ್, ನಿವೃತ ಡಿಜಿಪಿಗಳಾದ ಎಸ್.ಪಿ. ವೈದ್, ಬಿಎಲ್ ವೋಹ್ರಾ, ನಿವೃತ ಸೇನಾಧಿಕಾರಿಗಳಾದ ಲೆ.ಜ. ವಿ.ಕೆ ಚತುರ್ವೇದಿ, ನಿವೃತ ಏರ್ ಮಾರ್ಷಲ್ ಎಸ್.ಪಿ. ಸಿಂಗ್ ಸೇರಿದಂತೆ ಅನೇಕರು ಸಹಿ ಹಾಕಿದ್ದಾರೆ.
Discussion about this post