ಕಟ್ಟು ನಿಟ್ಟಿನ ಖಾಕಿ ಇಲಾಖೆ ಇತ್ತೀಚಿನ ದಿನಗಳಲ್ಲಿ ಹೆಸರು ಕೆಡಿಸಿಕೊಂಡಿದೆ. ಒಂದೆಡೆ ಕೋರ್ಟ್ ಪೊಲೀಸರಿಗೆ ಛೀಮಾರಿ ಹಾಕುತ್ತಿದೆ. ಮತ್ತೊಂದು ಕಡೆ ಇಲಾಖೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಹೀಗಾಗಿ ನ್ಯಾಯ ಸಿಗುವ ಭರವಸೆಗಳು ಇಲ್ಲದಾಗುತ್ತಿದೆ. ಈ ನಡುವೆ ಆಶಾಕಿರಣವಾಗಿ ಗೋಚರಿಸಿದವರು PSI Anita Lakshmi
ಬೆಂಗಳೂರು : ಪೊಲೀಸ್ ಇಲಾಖೆ ಹಿಂದಿನಂತಿಲ್ಲ. ಜನಸ್ನೇಹಿ ಪೊಲೀಸ್ ಠಾಣೆ ಅನ್ನುವುದು ನ್ಯೂಸ್ ಪೇಪರ್ ಗಳಲ್ಲಿ ಬರೆಯಲು ಮಾತ್ರ ಚೆಂದ. ಆದ್ಯಾವ ಪೊಲೀಸ್ ಠಾಣೆಯಲ್ಲಿ ಸಮಾಜದ ಕಟ್ಟಕಡೆಯ ಮನುಷ್ಯನಿಗೆ ಗೌರವ ಸಿಗುತ್ತದೆ ಹೇಳಿ. ವಿಐಪಿಯೋ, ಖಾದಿಯೋ ಹೋದರೆ ಅವನಿಗೆ ರಾಜಾತಿಥ್ಯ. ಜನ ಸಾಮಾನ್ಯನೊಬ್ಬ ಹೋದ್ರೆ ಕೂರಲು ಚೆಯರ್ ಬಿಡಿ, ಕುಡಿಯಲು ನೀರು ಸಿಗೋದಿಲ್ಲ. ಆದರೆ ಇಂತಹ ಆತಂಕ ಮತ್ತು ಆರೋಪದ ನಡುವೆ ಭರವಸೆ ಅನ್ನುವಂತೆ ಕೆಲ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಆ ಪೈಕಿ ಒಂದು ಹೆಸರು PSI Anita Lakshmi.
ಚಂದ್ರಾಲೇಔಟ್ ಮಹಿಳಾ ಸಬ್ ಇನ್ಸ್‌ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಅನಿತಾಲಕ್ಷ್ಮೀ ಮಂಗಳವಾರ ಜುಲೈ 5ರ ಮಧ್ಯಾಹ್ನ ಗಸ್ತಿನಲ್ಲಿದ್ದರು. ಈ ವೇಳೆ ಚಂದ್ರಾಲೇಔಟ್‍ನ ಗ್ಯಾರೇಜ್ ಬಳಿ 25 ವರ್ಷದ ಯುವಕನೊಬ್ಬ ಫಿಡ್ಸ್ ಬಂದು ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ಈ ವೇಳೆ ಅಲ್ಲೇ ಗಸ್ತಿನಲ್ಲಿದ್ದ ಸಬ್ ಇನ್ಸ್‌ಪೆಕ್ಟರ್ ಅನಿತಾಲಕ್ಷ್ಮೀ ಸ್ಥಳಕ್ಕೆ ತೆರಳಿದ್ದಾರೆ. ಕುಸಿದು ಬಿದ್ದಿದ್ದ ಇಮ್ರಾನ್ ಗೆ ಗ್ಯಾರೇಜ್‍ನಲ್ಲಿ ಇದ್ದ ಕಬ್ಬಿಣವನ್ನು ತಂದು ಸ್ಥಳೀಯರು ಆತನ ಕೈಗಿಟ್ಟಿದ್ದಾರೆ.
ಇದನ್ನೂ ಓದಿ : Guruji Murder Accused Arrest : ಒಂದು ಕಾಲದ ಆಪ್ತನೇ ಯಮಕಿಂಕರನಾದನಲ್ಲ…
ಈ ವೇಳೆ ಯುವಕನ ಸಂಕಷ್ಟಕ್ಕೆ ಸ್ಪಂದಿಸಿದ Anita Lakshmi ತಕ್ಷಣ ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸೂಕ್ತ ಸಮುಯದಲ್ಲಿ ಚಿಕಿತ್ಸೆ ಸಿಕ್ಕ ಕಾರಣ ಇಮ್ರಾನ್ ಚೇತರಿಸಿಕೊಂಡಿದ್ದಾನೆ. ಮಾತ್ರವಲ್ಲದೆ ಸಬ್ ಇನ್ಸ್‌ಪೆಕ್ಟರ್ ಅನಿತಾಲಕ್ಷ್ಮೀ ಅವರೇ ಈತನ ಚಿಕಿತ್ಸಾ ವೆಚ್ಚವನ್ನೂ ಭರಿಸಿದ್ದಾರೆ. ಈ ನಡುವೆ ಈತ ಕುಡಿಯುವ ಅಭ್ಯಾಸ ಇಟ್ಟುಕೊಂಡಿದ್ದಾನೆ ಅನ್ನುವುದನ್ನು ಅರಿತ ಅನಿತಾಲಕ್ಷ್ಮಿ ಕುಡಿಯುವುದನ್ನು ಬಿಡುವಂತೆ ಮನವೊಲಿಸಿದ್ದಾರೆ. ಪೊಲೀಸ್ ಅಧಿಕಾರಿ ಅನ್ನುವುದನ್ನು ಪಕ್ಕಕ್ಕಿಟ್ಟು ಸಹೋದರಿ ಅನ್ನುವಂತೆ ಗದರಿದ್ದಾರೆ ಕೂಡಾ.
ಒಟ್ಟಿನಲ್ಲಿ ಪೊಲೀಸ್ ಇಲಾಖೆಯಲ್ಲೂ ಮಾನವೀಯತೆಯ ಮುಖಗಳು ಇವೆ ಅನ್ನುವುದನ್ನು ಅನಿತಾ ಲಕ್ಷ್ಮಿ ತೋರಿಸಿಕೊಟ್ಟಿದ್ದಾರೆ. ಎಲ್ಲಾದ್ರೂ ಈ ಮೇಡಂ ಸಿಕ್ರೆ ಅವರ ಮಾತೃ ಹೃದಯದ ಈ ಸೇವೆಗೊಂದು ಸೆಲ್ಯೂಟ್ ಹೊಡೆಯುವುದನ್ನು ಮರೆಯಬೇಡಿ. PSI Anita Lakshmi ಕೆಲಸ ಇತರ ಅಧಿಕಾರಿಗಳ ಕಣ್ಣು ತೆರೆಸಲಿ ಅನ್ನುವುದೇ ನಮ್ಮ ಆಶಯ.
ಒಂದು ಕಾಲದ ಆಪ್ತನೇ ಯಮಕಿಂಕರನಾದನಲ್ಲ…
ಹುಬ್ಬಳ್ಳಿ : ಚಂದ್ರಶೇಖರ ಗುರೂಜಿಯನ್ನು ( guruji murder case ) ಕೊಲೆಗೈದ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ( Guruji Murder Accused Arrest).ದುರಂತ ಅಂದ್ರೆ ಈ ಆರೋಪಿಗಳು ಒಂದು ಕಾಲದಲ್ಲಿ ಚಂದ್ರಶೇಖ್ ಗುರೂಜಿ ಆಪ್ತರಾಗಿದ್ದರು. ಅವರದ್ದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಗುರೂಜಿ ಕೊಟ್ಟ ಸಂಬಳದಿಂದ ಜೀವನ ಕಟ್ಟಿಕೊಂಡಿದ್ದರು. ಆದರೆ ಆ ಉಪಕಾರವನ್ನೇ ಮರೆತು ಕೊಲೆ ಮಾಡಿದ್ದಾರೆ ಅಂದ್ರೆ ಕೊಲೆಯ ಹಿಂದೆ ಮಹಾರಹಸ್ಯವೊಂದು ಅಡಗಿರಲೇಬೇಕು.
ಇನ್ನು ಪೊಲೀಸರು ವಶಕ್ಕೆ ಪಡೆದಿರುವ ಮಹಾಂತೇಶ ಶಿರೂರ್ ಚಂದ್ರಶೇಖರ್ ಗುರೂಜಿ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದನಂತೆ. ಗುರೂಜಿಯ ಬಲಗೈಯಂತೆ ಕೆಲಸ ಮಾಡಿಕೊಂಡಿದ್ದ ಅನ್ನಲಾಗಿದೆ. ಚಂದ್ರಶೇಖರ್ ಗುರೂಜಿಯ ( Chandrashekhar Guruji ) ಖಾಸಗಿ ವ್ಯವಹಾರಗಳನ್ನು ಇದೇ ಮಹಾಂತೇಶ್ ನೋಡಿಕೊಳ್ಳುತ್ತಿದ್ದ ಅನ್ನಲಾಗಿದೆ. ಹೀಗಾಗಿ ಗುರೂಜಿಯ ರಹಸ್ಯಗಳು ಇವನಿಗೆ ಗೊತ್ತಿತ್ತು ಅನ್ನಲಾಗಿದೆ.
ಗುರೂಜಿ ಮತ್ತು ಮಹಾಂತೇಶ್ ಅದೆಷ್ಟು ಆತ್ಮೀಯರು ಅಂದ್ರೆ ಮಹಾಂತೇಶ್ ಗೆ ವನಜಾಕ್ಷಿಯನ್ನು ಮದುವೆ ಮಾಡಿಸಿದ್ದೇ ಚಂದ್ರಶೇಖರ್ ಗುರೂಜಿಯಂತೆ. ಇನ್ನು ವನಜಾಕ್ಷಿ ಕೂಡಾ ಸರಳ ವಾಸ್ತು ಸಂಸ್ಥೆಯಲ್ಲೇ ಕೆಲಸ ಮಾಡುತ್ತಿದ್ದರು. ಆದರೆ ಸಾವಿರ ಕೋಟಿಗೂ ಅಧಿಕ ವ್ಯವಹಾರದ ಸರಳ ವಾಸ್ತು ಸಾಮ್ರಾಜ್ಯದ ಒಡೆಯ ಚಂದ್ರಶೇಖರ್ ಗುರೂಜಿ ಜೊತೆಗೆ ಮಹಾಂತೇಶ್ ಸಂಬಂಧ ಯಾಕೆ ಹಾಳಾಯ್ತು ಅನ್ನುವುದು ಈಗಿರುವ ಯಕ್ಷ ಪ್ರಶ್ನೆ.
ಇನ್ನು ಇತ್ತೀಚೆಗೆ ಸರಳ ವಾಸ್ತು ಸಂಸ್ಥೆಯಿಂದ ಒಂದಿಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಲಾಗಿತ್ತು. ಇವರ ಪರವಾಗಿ ಇದೇ ಮಹಾಂತೇಶ್ ಕಾನೂನು ಹೋರಾಟಕ್ಕೆ ಮುಂದಾಗಿದ್ದ ಅನ್ನುವ ಸುದ್ದಿಗಳು ಕೂಡಾ ಬಂದಿದೆ. ಆದರೆ ಇವೆಲ್ಲವೂ ಕೊಲೆಯಾದ ಬೆನ್ನಲ್ಲೇ ಹರಿದಾಡುತ್ತಿರುವ ಸುದ್ದಿ. ಆದರೆ ನಿಜಕ್ಕೂ ಕೊಲೆಗೆ ಕಾರಣವೇನು ಅನ್ನುವುದು ಪೊಲೀಸರ ವಿಚಾರಣೆ ಬಳಿಕವೇ ಗೊತ್ತಾಗಲಿದೆ.
Discussion about this post