ಬೆಂಗಳೂರು : Zomato ಫುಡ್ ಡೆಲಿವರಿ ಹುಡುಗನ ಮೇಲೆ ಹಲ್ಲೆ ಆರೋಪ ಹೊರಿಸಿ, ಆತ ಜೈಲು ಪಾಲಾಗುವಂತೆ ಮಾಡಿದ್ದ ಮಾಡೆಲ್ ಹಿತೇಶಾ ಚಂದ್ರಾಣಿ ಇದೀಗ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸುವ ಯತ್ನ ಪ್ರಾರಂಭಿಸಿದ್ದಾಳೆ.
ಕಾಮರಾಜು ನನ್ನ ಮೇಲೆ ಹಲ್ಲೆ ಮಾಡಿದ್ದ ಎಂದು ದೂರಿದ್ದ ಹಿತೇಶಾ ಮೇಲೆ ಅನುಕಂಪದ ಅಲೆ ಹರಿದು ಬಂದಿತ್ತು. ಯಾವಾಗ ಜೈಲಿಂದ ಹೊರ ಬಂದ ಕಾಮರಾಜ್, ತನ್ನದೇನು ತಪ್ಪಿಲ್ಲ ಎಂದು ಕಣ್ಣೀರು ಹಾಕಿದ್ದರು.
ಇದಾದ ಬೆನ್ನಲ್ಲೇ ಬಾಲಿವುಡ್ ಸೆಲೆಬ್ರೆಟಿಗಳು ಕಾಮರಾಜ್ ಪರ ಬ್ಯಾಟ್ ಬೀಸಿದ್ದರು.
ಇದನ್ನೂ ಓದಿ : ಝೋಮ್ಯಾಟೋ ಹುಡುಗನಿಗೆ ಚಪ್ಪಲಿ ಎಸೆದವಳ ವಿರುದ್ಧ ಎಫ್ಐಆರ್….?
ಜೊತೆಗೆ ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಕಾಮರಾಜ್ ಗೆ ಸಹಾಯ ಹಸ್ತ ಚಾಚಿದ್ದರು. ಜೊತೆಗೆ ಹಿತೇಶಾ ವಿರುದ್ಧ ಕಾಮರಾಜ್ ದೂರು ದಾಖಲಿಸುವಂತೆ ಮಾಡಿದ್ದರು.
ಕಾಮರಾಜ್ ದೂರಿನ ಹಿನ್ನಲೆಯಲ್ಲಿ ಪೊಲೀಸರು ಎಫ್ಐಆರ್ ದಾಖಲಿಸುತ್ತಿದ್ದಂತೆ, ಹಿತೇಶಾ ಚಂದ್ರಾಣಿ ಬೆಂಗಳೂರು ತೊರೆದಿದ್ದಾಳೆ.

ಎಫ್ಐಆರ್ ಹಿನ್ನಲೆಯಲ್ಲಿ ವಿಚಾರಣೆಗೆ ಬರುವಂತೆ ಪೊಲೀಸರು ಹಿತೇಶಾಳನ್ನು ಸಂಪರ್ಕಿಸಿದ್ರೆ ನಾನು ಬೆಂಗಳೂರಿನಲ್ಲಿ ಇಲ್ಲ, ಮಹಾರಾಷ್ಟ್ರದಲ್ಲಿರುವ ಸಂಬಂಧಿಕರ ಮನೆಗೆ ಬಂದಿರುವುದಾಗಿ ಹೇಳಿದ್ದಾರೆ.
ಹೀಗಾಗಿ ಬೆಂಗಳೂರಿಗೆ ವಾಪಾಸ್ ಆದ ತಕ್ಷಣ ಹೇಳಿಕೆ ನೀಡಲು ಆಗಮಿಸುವಂತೆ ಪೊಲೀಸರು ಸೂಚಿಸಿದ್ದಾರೆ.
ಒಂದು ವೇಳೆ ನೀಡಿದ ಸಮಯದೊಳಗೆ ವಿಚಾರಣೆಗೆ ಹಾಜರಾಗದಿದ್ರೆ ಹಿತೇಶಾಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲು ಪೊಲೀಸರು ನಿರ್ಧರಿಸಿದ್ದಾರೆ.
Discussion about this post