ಬೆಂಗಳೂರು : ಝೋಮ್ಯಾಟೋ ಡೆಲಿವರಿ ಬಾಯ್ ಕಾಮರಾಜ್ ಹಾಗೂ ಮಾಡೆಲ್ ಹಿತೇಶಾ ಚಂದ್ರಾಣಿ ನಡುವಿನ ಗಲಾಟೆಯ ತನಿಖೆಯನ್ನು ತಾತ್ಕಾಲಿಕವಾಗಿ ಕೈ ಬಿಡಲು ಪೊಲೀಸರು ನಿರ್ಧರಿಸಿದ್ದಾರೆ ಎಂದು TNIE ವರದಿ ಮಾಡಿದೆ.
ಈ ಬಗ್ಗೆ ಮಾಹಿತಿ ನೀಡಿರುವ ತನಿಖಾಧಿಕಾರಿಗಳು, ಇಬ್ಬರ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಬಳಿಕ ತನಿಖೆ ಪ್ರಾರಂಭಿಸಿ ಸಾಕ್ಷಿ ಸಂಗ್ರಹಕ್ಕಾಗಿ ಸಾಕಷ್ಟು ಪ್ರಯತ್ನ ನಡೆಸಲಾಗಿದೆ.
ಇದನ್ನೂ ಓದಿ : ಝೋಮ್ಯಾಟೋ ಡೆಲಿವರಿ ಹುಡುಗನಿಗೆ ಅನ್ಯಾಯವಾಗಿದೆ… ನಾಳೆ ಅವನು ಪಿಎಂ ಆದರೂ ಆಗಬಹುದು…
ಆದರೆ ಸೂಕ್ತ ಸಾಕ್ಷಿಗಳು ಈವರೆಗೂ ಲಭ್ಯವಾಗಿಲ್ಲ. ಜೊತೆಗೆ ಪ್ರಕರಣ ನಡೆದಿದೆ ಎನ್ನಲಾದ ಪ್ರದೇಶದ ಸುತ್ತ ಮುತ್ತ ಸಿಸಿಟಿವಿಗಳು ಕೂಡಾ ಇಲ್ಲ.
ಇದನ್ನೂ ಓದಿ : ಝೋಮ್ಯಾಟೋ ಹುಡುಗನಿಗೆ ಚಪ್ಪಲಿ ಎಸೆದವಳ ವಿರುದ್ಧ ಎಫ್ಐಆರ್….?
ಜೊತೆಗೆ ದೂರುದಾರ ಮಹಿಳೆ ತನ್ನ ಕಮೆಂಟ್ ಗಳನ್ನು ಸಾಮಾಜಿರ ಜಾಲತಾಣಗಳಲ್ಲಿ ಮಾತ್ರ ಹಾಕುತ್ತಿದ್ದಾರೆ. ಠಾಣೆಗೆ ಬಂದು ಯಾವುದೇ ಹೇಳಿಕೆಗಳನ್ನು ನೀಡುತ್ತಿಲ್ಲ.
ಕಾಮರಾಜ್ ಕೊಟ್ಟಿರುವ ದೂರಿನ ಆಧಾರದಲ್ಲಿ ಹಿತೇಶ್ ಚಂದ್ರಾಣಿಯನ್ನು ಪ್ರಶ್ನಿಸಬೇಕಾಗಿದೆ. ಆದರೆ ಅವರು ಠಾಣೆಗೆ ಬಂದಿಲ್ಲ ಅಂದಿದ್ದಾರೆ.
ಇದನ್ನೂ ಓದಿ : ಕನ್ನಡದ ಸೆಲೆಬ್ರೆಟಿಗಳದ್ದು ದಿವ್ಯ ಮೌನ – ಝೋಮ್ಯಾಟೋ ಡೆಲಿವರಿ ಬಾಯ್ ಪರ ನಿಂತ ಬಾಲಿವುಡ್ ಸೆಲೆಬ್ರೆಟಿಗಳು…..
ಈ ಬಗ್ಗೆ ಮತ್ತೊಬ್ಬ ಹಿರಿಯ ಪೊಲೀಸ್ ಅಧಿಕಾರಿ ಕೂಡಾ ಪ್ರತಿಕ್ರಿಯಿಸಿದ್ದು, ಕಾಮರಾಜ್ ವಿರುದ್ಧ ದೂರು ಸಲ್ಲಿಸಿದ್ದ ಹಿತೇಶಾ ಚಂದ್ರಾಣಿ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ನಾವು ಆಕೆಯನ್ನು ಸಂಪರ್ಕಿಸಿದ್ದೇವೆ. ಅವರು ಮಹಾರಾಷ್ಟ್ರದಲ್ಲಿ ಇರುವುದಾಗಿ ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆ, ನಾನು ಬೆಂಗಳೂರು ಬಿಟ್ಟು ಹೋಗಿಲ್ಲ ಅಂದಿದ್ದಾರೆ. ಹೀಗಾಗಿ ತನಿಖೆಯ ಭಾಗವಾಗಿ ಅವರ ಮೊಬೈಲ್ ನೆಟ್ ವರ್ಕ್ ಅನ್ನು ಟ್ರೇಸ್ ಮಾಡಲಾಗುತ್ತಿದೆ.
ಇದನ್ನೂ ಓದಿ : ಚಪ್ಪಲಿ ಎತ್ತಿದ್ಲು…ಅದಕ್ಕೆ ಮೂತಿಗೆ ಹೊಡೆದೆ – ಝೋಮ್ಯಾಟೋ ಗಲಾಟೆಗೆ ಟ್ವೀಸ್ಟ್
ಇದರ ಜೊತೆಗೆ ವೈದ್ಯರ ಸಲಹೆಯನ್ನು ಕೂಡಾ ಪಡೆಯಲು ನಿರ್ಧರಿಸಲಾಗಿದೆ. ಈ ಸಂಬಂಧ ಸೈಂಟ್ ಜಾನ್ ಆಸ್ಪತ್ರೆಯ ವೈದ್ಯರನ್ನು ಸಂಪರ್ಕಿಸಲಾಗಿದೆ.
ಹಿತೇಶ್ ಅವರ ಮೂಗಿನ ಮೇಲೆ ಗಾಯ ಹೇಗೆ ಆಗಿರಬಹುದು ಅನ್ನುವ ಬಗ್ಗೆ ಮಾಹಿತಿಯನ್ನು ಕೇಳಿದ್ದೇವೆ. ಪ್ರಾಥಮಿಕ ಮಾಹಿತಿಗಳ ಪ್ರಕಾರ ಹಲ್ಲೆ ಅಥಾವ ಪಂಚ್ ನಿಂದ ಆಗಿರುವ ಗಾಯವಲ್ಲ ಎಂದು ಗೊತ್ತಾಗಿದೆ. ಆದರೂ ಫೈನಲ್ ವರದಿಗಾಗಿ ನಾವು ಕಾಯುತ್ತಿದ್ದೇವೆ ಅಂದಿದ್ದಾರೆ.
ಇದನ್ನೂ ಓದಿ : Zomato ಹಲ್ಲೆ ಪ್ರಕರಣ : FIR ದಾಖಲಾದ ಬೆನ್ನಲ್ಲೇ ಬೆಂಗಳೂರಿನಿಂದ ಕಾಲ್ಕಿತ್ತ ಹಿತೇಶಾ ಚಂದ್ರಾಣಿ…
ಈ ಹಿಂದೆ ಕಾಮರಾಜ್ ನನ್ನ ಮೂಗಿಗೆ ಪಂಚ್ ಮಾಡಿದ ಎಂದು ಹಿತೇಶ ಆರೋಪಿಸಿದ್ದರು.
ಆದರೆ ಅದನ್ನು ಕಾಮರಾಜ್ ನಿರಾಕರಿಸಿದ್ದು, ಅವರೇ ಅವರ ಉಂಗುರದ ಕಾರಣದಿಂದ ಮಾಡಿಕೊಂಡ ಗಾಯ ಅಂದಿದ್ದರು.
ಇದನ್ನೂ ಓದಿ : ಕಥೆ ಕಟ್ಟಿದ್ಲಾ ಮಾಡೆಲ್…? ಹಿಂದಿಯಲ್ಲಿ ಬೈಯ್ದ್ಲು..ಚಪ್ಪಲಿ ಎಸೆದ್ಲು…ಉಂಗುರ ತಾಗಿ ಆದ ಗಾಯವನ್ನು ನನ್ನ ತಲೆಗೆ ಕಟ್ಟಿದ್ಲು
Discussion about this post