ಬೆಂಗಳೂರು : ಝೋಮ್ಯಾಟೋ ಡೆಲಿವರಿ ಬಾಯ್ ಮೇಲೆ ನಡೆದ ಹಲ್ಲೆ ಪ್ರಕರಣದಲ್ಲಿ ತಪ್ಪಿತಸ್ಥರು ಯಾರು ಅನ್ನುವುದು ಇನ್ನೂ ನಿಗೂಢ.
ಹಿತೇಶ್ ಚಂದ್ರಾಣಿ ಮತ್ತು ಕಾಮರಾಜ್ ಇಬ್ಬರ ದೂರುಗಳನ್ನು ಸ್ವೀಕರಿಸಿರುವ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ದುರಾದೃಷ್ಟ ಅಂದ್ರೆ ಕಾಮರಾಜ್ ನನ್ನು ಪೊಲೀಸರು ಬಂಧಿಸಿ ಜಾಮೀನು ಮೇಲೆ ಬಿಡುಗಡೆ ಮಾಡಿದ್ದಾರೆ. ಆದರೆ ಹಿತೇಶ್ ಚಂದ್ರಾಣಿ ಇನ್ನೂ ಪೊಲೀಸರ ಕೈಗೆ ಸಿಕ್ಕಿಲ್ಲ.
ಒಂದು ಮುತ್ತು ತಂದ ಅಪಾಯ – ಪರಸ್ತ್ರೀಗೆ ಮುತ್ತಿಕ್ಕಿದ ಪತಿಗೆ ಪಂಚ್ ಕೊಟ್ಟ ಪತ್ನಿ…!
ಈ ನಡುವೆ ಘಟನೆ ಕುರಿತಂತೆ ಪ್ರತಿಕ್ರಿಯಿಸಿರುವ ಬಿಗ್ ಬಾಸ್ 14ರ ಫೈನಲಿಸ್ಟ್ ರಾಖಿ ಸಾವಂತ್, ಡೆಲಿವರಿ ಹುಡುಗನಿಗೆ ಅನ್ಯಾಯವಾಗಿದೆ ಅವನಿಗೆ ನ್ಯಾಯ ಸಿಗಬೇಕು ಅಂದಿದ್ದಾರೆ.

ಆನ್ ಲೈನ್ ಫುಡ್ ಡೆಲಿವರಿ ಹುಡುಗರನ್ನು ಗೌರವದಿಂದ ಕಾಣುವಂತೆ ಮನವಿ ಮಾಡಿರುವ ಅವರು, ನಮ್ಮ ಹಸಿವನ್ನು ತಣಿಸಲು ಅವರು ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಅವರನ್ನು ಗೌರವದಿಂದ ಕಾಣಬೇಕು.
ಇದನ್ನೂ ಓದಿ : ಕೆಮ್ಮು ಜ್ವರ ಎಂದು ವೈದ್ಯರ ಬಳಿಗೆ ಹೋದ ಬಾಲಕನ ಶ್ವಾಸಕೋಶದಲ್ಲಿ ಪಿನ್
ಕೊರೋನಾ ಸಮಯದಲ್ಲಿ ಅವರು ಮಾಡಿದ ಕೆಲಸವನ್ನು ಒಮ್ಮೆ ನೆನಪಿಸಿಕೊಳ್ಳಿ ಅಂದಿರುವ ರಾಖಿ,ಝೋಮ್ಯಾಟೋ ಡೆಲಿವರಿ ಬಾಯ್ ಒಂದು ದಿನ ಪ್ರಧಾನಮಂತ್ರಿ ಆದರೂ ಆಗಬಹುದು, ಯಾರಿಗೆ ಗೊತ್ತು ಹೀಗಾಗಿ Respect each and every person ಅಂದಿದ್ದಾರೆ.

Discussion about this post