ಕಾನೂನಿನ ಬಿಸಿ ಇಲ್ಲದ ಪುಂಡು ಪೋಕರಿಗಳು ಬೀದಿಗಳಲ್ಲಿ ಹುಡುಗಿಯನ್ನು ಚುಡಾಯಿಸುತ್ತಾರೆ ಅಂದ್ರೆ ಇದು ಕಾನೂನು ಸುವ್ಯವಸ್ಥೆ ಸಮಸ್ಯೆ ಎನ್ನುವುದರಲ್ಲಿ ಎರಡು ಮಾತಿಲ್ಲ
ಶಿವಮೊಗ್ಗ : ಹುಡುಗಿಯರನ್ನು ಚುಡಾಯಿಸಬೇಡಿ ಎಂದು ಹೇಳಿದ ಯುವಕನೊಬ್ಬನ ಮೇಲೆ ಮತ್ತೊಂದು ಗುಂಪಿನ ಯುವಕರು ಹಲ್ಲೆ ಮಾಡಿರುವ ಘಟನೆ ಶಿವಮೊಗ್ಗದ ( shivamogga ) ಬಾಲರಾಜ್ ಅರಸು ರಸ್ತೆಯಲ್ಲಿ ನಡೆದಿದೆ.
ಮಥುರಾ ಪ್ಯಾರಡೈಸ್ ಹೋಟೆಲ್ ಬಳಿ ನಿಂತಿದ್ದ ಹುಡುಗಿಯೊಬ್ಬಳನ್ನು ಯುವಕರ ಗುಂಪೊಂದು ಚುಡಾಯಿಸುತ್ತಿತ್ತಂತೆ. ಈ ವೇಳೆ ಅಲ್ಲೇ ಇದ್ದ ಹರ್ಷ, ಆ ಹುಡುಗರನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಆ ಹುಡುಗರ ಗ್ಯಾಂಗ್ ಹರ್ಷನ ಮೇಲೆ ಹಲ್ಲೆ ನಡೆಸಿದೆ ಅನ್ನಲಾಗಿದೆ. ಇದಾದ ಬಳಿಕ ತಾವು ತಂದಿದ್ದ ಬೈಕ್ ಗಳನ್ನು ಬಿಟ್ಟ ಗ್ಯಾಂಗ್ ಆಟೋದಲ್ಲಿ ಪರಾರಿಯಾಗಿದೆ.
ಇದನ್ನೂ ಓದಿ : Bigg Boss kannada : Drone Prathap ಬಿಗ್ ಬಾಸ್ ಮನೆಗೆ : ಮಹಾಮನೆಯಲ್ಲಿ ಇನ್ನೇನು ಕಾದಿದೆಯೋ
ಹಲ್ಲೆಗೊಳಗಾದ ಹರ್ಷನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿದ್ದು ಮಾಹಿತಿ ಕಲೆ ಹಾಕಿದ್ದಾರೆ. ಹಲ್ಲೆ ಮಾಡುವ ವೇಳೆ 8 ಮಂದಿ ಇದ್ದರು ಎಂದು ಗೊತ್ತಾಗಿದೆ.
ಹರ್ಷ ಹಿಂದೂ ಜಾಗರಣ ವೇದಿಕೆ ಸದಸ್ಯವಾಗಿದ್ದು, ಅನ್ಯ ಕೋಮಿನ ಯುವಕರು ಹಲ್ಲೆ ಮಾಡಿದ್ದಾರೆ ಎಂದು ಕೆಲ ಮಾಧ್ಯಮಗಳು ವರದಿ ನೋಡಿದೆ. ಈ ಬಗ್ಗೆ ಪೊಲೀಸರ ಕಡೆಯಿಂದ ಅಧಿಕೃತ ಹೇಳಿಕೆ ಇನ್ನೂ ಹೊರ ಬಂದಿಲ್ಲ.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಕೊರೋನಾ ಪಾಸಿಟಿವ್ : ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು, ಸಿಎಂ ಬೊಮ್ಮಾಯಿವರಿಗೆ ಢವ ಢವ
ಭಾನುವಾರ ಮಾಜಿ ಪ್ರಧಾನಿ ದೇವೇಗೌಡ ಹಾಗೂ ದ್ರೌಪದಿ ಮುರ್ಮು ಭೇಟಿ ಸಂದರ್ಭದಲ್ಲಿ ಕುಮಾರಸ್ವಾಮಿಯವರು ಉಪಸ್ಥಿತರಿದ್ದರು. ಹೀಗಾಗಿ ಇದೀಗ ಕೇಂದ್ರ ಸಚಿವರು ಸೇರಿದಂತೆ ಅನೇಕರು ಕೊರೋನಾ ಪರೀಕ್ಷೆಗೆ ಒಳಗಾಗಬೇಕಾಗಿದೆ.
ಬೆಂಗಳೂರು : ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಈ ಬಗ್ಗೆ ಅವರೇ ಟ್ವೀಟ್ ಮಾಡಿದ್ದು, ಸಣ್ಣ ಪ್ರಮಾಣದ ಜ್ವರ ಮತ್ತು ಮೈಕೆ ನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಕೊರೋನಾ ಪರೀಕ್ಷೆ ಮಾಡಿಸಿಕೊಂಡಿದ್ದು, ಫಲಿತಾಂಶ ಪಾಸಿಟಿವ್. ಕೊರೋನಾ ಲಕ್ಷಣಗಳು ಇರುವ ಕಾರಣ ಹೋಮ್ ಐಸೋಲೇಷನ್ ಗೆ ವೈದ್ಯರು ಸೂಚಿಸಿದ್ದಾರೆ. ಹೀಗಾಗಿ ಮನೆಯಲ್ಲೇ ನಾನು ಚಿಕಿತ್ಸೆ ಪಡೆಯುತ್ತಿದ್ದೇನೆ.
ಡಾಕ್ಟರ್ ಸೂಚನೆಯಂತೆ 10 ದಿನಗಳ ಕಾಲ ನಾನು ಮನೆಯಲ್ಲೇ ಇದ್ದು ಚಿಕಿತ್ಸೆ ಪಡೆಯಲಿದ್ದು, ದಯಮಾಡಿ ನನ್ನ ಭೇಟಿಗೆ ಯಾರು ಬರಬಾರದೆಂದು ವಿನಂತಿಸಿದ್ದಾರೆ. ಜೊತೆಗೆ 3-4 ದಿನಗಳಿಂದ ನನ್ನ ಪ್ರಾಥಮಿಕ ಸಂಪರ್ಕಕ್ಕೆ ಬಂದವರೆಲ್ಲಾ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.
ಕುಮಾರಸ್ವಾಮಿಯವರು ಈ ಟ್ವೀಟ್ ಮಾಡಿರುವುದು ಜುಲೈ 11 ರಾತ್ರಿ 9.34ಕ್ಕೆ. ಜುಲೈ 10 ರಂದು ಭಾನುವಾರ ರಾಷ್ಟ್ರಪತಿ ಚುನಾವಣೆಗೆ ಎನ್.ಡಿ.ಎ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ದ್ರೌಪದಿ ಮುರ್ಮು ಅವರು ದೇವೇಗೌಡರ ಭೇಟಿಗೆ ಬಂದ ಸಂದರ್ಭದಲ್ಲಿ ಕುಮಾರಸ್ವಾಮಿಯವರು ಉಪಸ್ಥಿತರಿದ್ದರು. ಕುಮಾರಸ್ವಾಮಿಯವರು ಮಾತ್ರ ಮಾಸ್ಕ್ ಹಾಕಿಕೊಂಡಿದ್ದರು.
ಕುಮಾರಸ್ವಾಮಿಯವರಿಗೆ ಕೊರೋನಾ ಪಾಸಿಟಿವ್ ಬಂದಿರುವ ಕಾರಣ ದ್ರೌಪದಿ ಮುರ್ಮು, ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಿಟಿ ರವಿ, ಮಾಜಿ ಪ್ರಧಾನಿ ದೇವೇಗೌಡರು, ಹೆಚ್.ಡಿ. ರೇವಣ್ಣ ಹೀಗೆ ಸಾಲು ಸಾಲು ವಿಐಪಿಗಳು ಕೊರೋನಾ ಪರೀಕ್ಷೆಗೆ ಒಳಪಡಬೇಕಾಗಿದೆ.
ಈ ಹಿಂದೆಯಾಗಿದ್ರೆ ಇದೊಂದು ದೊಡ್ಡ ಸುದ್ದಿ. ಆದರೆ ನಾಲ್ಕನೇ ಅಲೆಯ ಹೊಸ್ತಿಲಲ್ಲಿ, ಇದೇನು ದೊಡ್ಡ ವಿಷಯವಲ್ಲ ಬಿಡಿ
Discussion about this post