ವಿಟ್ಲ : ರಸ್ತೆ ಬದಿಯಲ್ಲಿ ಸೈಕಲ್ ನಲ್ಲಿ ಹೋಗುತ್ತಿದ್ದ ಬಾಲಕನಿಗೆ ಜೆಸಿಬಿಯೊಂದು ಡಿಕ್ಕಿ ಹೊಡೆದ ಪರಿಣಾಮ ಬಾಲಕ ದಾರುಣವಾಗಿ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದ ಕನ್ಯಾನದಲ್ಲಿ ನಡೆದಿದೆ. ದುರಂತ ಅಂದ್ರೆ ಬಾಲಕ ಜೆಸಿಬಿಯಡಿ ಬಿದ್ದು ಮೃತಪಟ್ಟ ಬಳಿಕ ಜೆಸಿಬಿ ಚಾಲಕ ಬಾಲಕನ ಶವ ಮತ್ತು ಸೈಕಲ್ ಅನ್ನು ರಸ್ತೆ ಬದಿಗೆ ಸರಿಸಿ ತನ್ನ ಕೆಲಸದ ಸೈಟ್ ಸೇರಿಕೊಂಡಿದ್ದಾನೆ.
ವಿಟ್ಲದ ಕಣಿಯೂರು ಎಂಬಲ್ಲಿನ ಉದ್ಯಮಿಯೊಬ್ಬರ ಮನೆಗೆ ಜೆಸಿಬಿ ತರುತ್ತಿದ್ದ ವೇಳ ಈ ದುರ್ಘಟನೆ ಸಂಭವಿಸಿದೆ. ಮೃತ ಬಾಲಕನನ್ನು ಮೊಹಮ್ಮದ್ (13) ಎಂದು ಗುರುತಿಸಲಾಗಿದೆ. ಜೆಸಿಬಿ ಚಾಲಕ ಗದಗ ಮೂಲದ ಸಾದಿಕ್ ಎಂದು ಗೊತ್ತಾಗಿದೆ. ಜೆಸಿಬಿ ಚಾಲಕ ಮದ್ಯದ ನಶೆಯಲ್ಲಿದ್ದ ಎಂದು ಗೊತ್ತಾಗಿದೆ.
ಮೃತ ಬಾಲಕನ ಶವವನ್ನು ಜೆಸಿಬಿ ಕೊಕ್ಕೆಯಿಂದ ಸೈಡಿಗೆ ಸರಿಸಿ, ತನ್ನ ಕೆಲಸದ ಸೈಟಿಗೆ ತೆರಳಿದ್ದಾನೆ. ಅಲ್ಲಿ ಹೋದ ಬಳಿಕ ಮತ್ತೊಬ್ಬ ಚಾಲಕ ಬರುತ್ತಾನೆ ಎಂದು ಪರಾರಿಯಾಗಲು ಯತ್ನಿಸಿದ್ದಾನೆ. ಅಷ್ಟು ಹೊತ್ತಿಗೆ ವಿಷಯ ಗೊತ್ತಾದ ಸ್ಥಳೀಯರು ಜೆಸಿಬಿ ಇದ್ದ ಸ್ಥಳಕ್ಕೆ ದೌಡಾಯಿಸಿ, ಆರೋಪಿ ಚಾಲಕನನ್ನು ಥಳಿಸಿದ್ದಾರೆ. ಬಳಿಕ ವಿಟ್ಲ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಆರೋಪಿ ಹಾಗೂ ಜೆಸಿಬಿಯನ್ನು ವಶಕ್ಕೆ ಪಡೆದಿದ್ದಾರೆ.
Discussion about this post