ವಿಟ್ಲ : ನೆಕ್ಕರೆಕಾಡು ಸಮೀಪದ ಗುಡ್ಡವೊಂದರಲ್ಲಿ ಪತ್ತೆಯಾದ ಮನುಷ್ಯನ ತಲೆ ಬುರುಡೆ, ಎಲುಬು ಹಾಗೂ ಬಟ್ಟೆಯ ಮೂಲವನ್ನು ವಿಟ್ಲ ಪೊಲೀಸರು ಪತ್ತೆ ಹಚ್ಚಿದ್ದಾರೆ (Vitla skeleton)
ನಿನ್ನೆ ಆಗಸ್ಟ್ 8 ರಂದು ಸಾಯಂಕಾಲ ಗುಡ್ಡಕ್ಕೆ ಸೊಪ್ಪು ತರಲೆಂದು ತೆರಳಿದ ಸ್ಥಳೀಯರಿಗೆ ( Vitla skeleton) ತಲೆಬುರುಡೆ, ಎಲುಬು ಹಾಗೂ ಆ ವ್ಯಕ್ತಿ ಧರಿಸಿದ್ದು ಅನ್ನಲಾದ ಬಟ್ಟೆ ಕಾಣಸಿಕ್ಕಿತ್ತು. ಇದರಿಂದ ಆತಂಕಗೊಂಡ ಅವರು ಮನೆಮಂದಿಗೆ ವಿಷಯ ತಿಳಿಸಿದ್ದರು. ಈ ವೇಳೆ ವಿಚಾರ ವೈರಲ್ ಆಗಿದ್ದು ತಲೆಗೊಂದು ಮಾತುಗಳು ಕೇಳಿ ಬಂದಿತ್ತು.
ಬಳಿಕ ಪ್ರಕರಣದ ಕುರಿತಂತೆ ವಿಟ್ಲ ಠಾಣಾ ಪೊಲೀಸರಿಗೆ ವಿಷಯ ತಿಳಿಸಲಾಗಿತ್ತು. ಸ್ಥಳಕ್ಕಾಗಮಿಸಿದ ವಿಟ್ಲ ಠಾಣಾ ಪೊಲೀಸರು ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸಿದ್ದರು.ಮೊದಲಿಗೆ ತಮ್ಮ ಠಾಣಾ ವ್ಯಾಪ್ತಿಯಲ್ಲಿ ನಾಪತ್ತೆಯಾದ ವ್ಯಕ್ತಿಗಳ ವಿವರ ಕೆದಕಿದ್ದಾರೆ.
ಇದನ್ನು ಓದಿ : Belagavi leopard : ಬೆಳಗಾವಿ ಗಾಲ್ಫ್ ಮೈದಾನದಲ್ಲಿ ಚಿರತೆ : 22 ಶಾಲೆಗಳಿಗೆ ರಜೆ
ಇದೀಗ ಮೃತ ವ್ಯಕ್ತಿಯನ್ನು ಉಕ್ಕುಡ ಕಾಂತಡ್ಕ ನಿವಾಸಿ ನಾಗೇಶ್ ಗೌಡ (65 ) ಎಂದು ಗುರುತಿಸಲಾಗಿದೆ. ನಾಗೇಶ್ ಗೌಡ ಅವರು 6 ತಿಂಗಳ ಹಿಂದೆ ನಾಪತ್ತೆಯಾಗಿದ್ದರು. ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇನ್ನು ತಲೆ ಬರುಡೆ ಪತ್ತೆಯಾಗುತ್ತಿದ್ದಂತೆ ನಾಗೇಶ್ ಗೌಡ ಅವರ ಪುತ್ರನನ್ನು ಸ್ಥಳಕ್ಕೆ ಕರೆಸಿ ಪರಿಶೀಲನೆ ನಡೆಸಿದ್ದರು. ಪೊಲೀಸರ ಸ್ಥಳ ಪರಿಶೀಲನೆ ಸಂದರ್ಭದಲ್ಲಿ ನಾಪತ್ತೆಯಾಗುವ ವೇಳೆ ನಾಗೇಶ್ ಅವರು ಧರಿಸಿದ್ದ ಬಟ್ಟೆಯ ಆಧಾರದಲ್ಲಿ ಇದು ತಂದೆಯವರ ತಲೆ ಬರುಡೆ ಎಂದು ಗುರುತಿಸಿದ್ದಾರೆ. ಹಾಗಾದ್ರೆ ನಾಗೇಶ್ ಗೌಡ ಅವರು ಕಾಡಿನ ಹಾದಿಯಲ್ಲಿ ಹೇಗೆ ಮೃತಪಟ್ಟರು ಅನ್ನುವುದು ಪ್ರಶ್ನೆಯಾಗಿದೆ. ಇದೀಗ ಪೊಲೀಸರು ಇದು ನಾಗೇಶ್ ಗೌಡ ಅವರದ್ದೇ ಮೃತ ದೇಹ ಅನ್ನುವುದನ್ನು ವೈಜ್ಞಾನಿಕವಾಗಿ ಸಾಬೀತು ಮಾಡಬೇಕಾಗಿದೆ.
Discussion about this post