ಸುದೀಪ್ ಅವರು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ(pralhad joshi) ಯವರನ್ನು ಭೇಟಿ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ. ಇದು ಸೌಜನ್ಯದ ಭೇಟಿ ಅನ್ನುವುದು ಮಾಧ್ಯಮದ ಹೇಳಿಕೆಗೆ ಮಾತ್ರ ಸೀಮಿತ ( vikranth rona )
ನವದೆಹಲಿ : ವಿಕ್ರಾಂತ್ ರೋಣ ( vikranth rona ) ಬಿಡುಗಡೆಯ ಗಡಿಬಿಡಿಯಲ್ಲಿರುವ ನಟ ಕಿಚ್ಚ ಸುದೀಪ್ ( kiccha sudeep ) ಈಗಾಗಲೇ ಚಿತ್ರದ ಪ್ರಚಾರ ಪ್ರಾರಂಭಿಸಿದ್ದಾರೆ. ಕನ್ನಡದಲ್ಲಿ ಈಗಾಗಲೇ ಒಂದು ಸುತ್ತಿನ ಪ್ರಚಾರ ಮುಗಿಸಿರುವ ಸುದೀಪ್ ದೆಹಲಿಗೆ ಹಾರಿದ್ದಾರೆ. 13 ವರ್ಷಗಳ ಬಳಿಕ ಸುದೀಪ್ ದೆಹಲಿಗೆ ಭೇಟಿ ನೀಡಿದ್ದಾರೆ ಅನ್ನಲಾಗಿದೆ.
ಚಿತ್ರದ ಪ್ರಚಾರದ ಸಲುವಾಗಿ ದೆಹಲಿಗೆ ತೆರಳಿರುವ ಸುದೀಪ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರನ್ನು ಭೇಟಿಯಾಗಿದ್ದಾರೆ. ಈ ಬಗ್ಗೆ ಜೋಶಿಯವರೇ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಹಾಗಾದ್ರೆ ಕೇಂದ್ರ ಸಚಿವರನ್ನು ಸುದೀಪ್ ಭೇಟಿಯಾಗಿದ್ಯಾಕೆ ಅನ್ನುವ ಪ್ರಶ್ನೆ ಮೂಡಿದೆ. ಇದೊಂದು ಸೌಜನ್ಯ ಭೇಟಿ ಅನ್ನುವ ಪ್ರಶ್ನೆಗಳು ಕೇಳಿ ಬಂದಿದೆ. ಆದರೆ ಮಾಹಿತಿಗಳ ಇದು ಸೌಜನ್ಯ ಭೇಟಿ ಮಾತ್ರವಲ್ಲ, ಬೇರೆ ವಿಷಯಗಳ ಬಗ್ಗೆಯೂ ಮಾತುಕತೆ ನಡೆದಿದೆ ಅನ್ನಲಾಗಿದೆ.
ಇದನ್ನೂ ಓದಿ : Devanahalli crime news : ಎರಡು ಗಂಟೆ ಯುವತಿ ಒತ್ತೆಯಾಳು : ಯುವಕನಿಂದ ಹಣ ಚಿನ್ನ ಸುಲಿಗೆ
ಪೊಲೀಸರಿಂದ ವಾಹನಕ್ಕೆ ವಿಮೆ ಸೌಲಭ್ಯ : ಜನ ಮೆಚ್ಚುಗೆ ಪಡೆದ ರಾಯಚೂರು ಪೊಲೀಸರ ಸೌಲಭ್ಯ
ಪ್ರತೀ ವರ್ಷ ವಿಮೆಗ್ಯಾಕೆ ದುಡ್ಡು ಕಟ್ಟಬೇಕು ಅನ್ನುವ ಉಡಾಫೆ ಮಂದಿಯೇ ಹೆಚ್ಚು ನಮ್ಮಲ್ಲಿ. ಅದರಿಂದ ಅನುಕೂಲಗಳ ಬಗ್ಗೆ ದಡ್ಡರಿಗೆ ಅರಿವೆಯೇ ಇರುವುದಿಲ್ಲ
ರಾಯಚೂರು : ಟ್ರಾಫಿಕ್ ಪೊಲೀಸ್ ಅಡ್ಡ ಹಾಕಿದ್ರೆ ಸಾಕು, ಲೈಸೆನ್ಸ್ ಎಲ್ಲಿ, ಆರ್.ಸಿ. ಕೊಡು, ಎಮಿಷನ್ ಮಾಡಿಸಿಲ್ವ, ಇನ್ಸೂರೆನ್ಸ್ ಕಾಪಿ ಎಲ್ಲಿ ಅನ್ನುತ್ತಾರೆ. ಯಾವುದಾದರೊಂದು ದಾಖಲೆ ಇಲ್ಲ ಅಂದ್ರೆ ದಂಡ ಗ್ಯಾರಂಟಿ. ಹಾಗಂತ ಪೊಲೀಸರ ತಪ್ಪೇನಿಲ್ಲ. ವಾಹನ ಓಡಿಸುವ ಸಂದರ್ಭದಲ್ಲಿ ಈ ದಾಖಲೆಗಳನ್ನು ಇಟ್ಟುಕೊಳ್ಳುವುದು ಕಡ್ಡಾಯ. ಅದರಲ್ಲೂ ವಾಹನಕ್ಕೆ ಇನ್ಸೂರೆನ್ಸ್ ಮಾಡಿಸಿಕೊಳ್ಳುವುದು ಕಡ್ಡಾಯ. ಯಾವ ಕ್ಷಣದಲ್ಲಿ ಏನೂ ಬೇಕಾದರೂ ಸಂಭವಿಸಬಹುದು. ಹಾಗಾಗಿ ಇನ್ಸೂರೆನ್ಸ್ ಬೇಕೇ ಬೇಕು.
ಇದನ್ನೂ ಓದಿ : Mangalsutra madras high court : ಮಾಂಗಲ್ಯ ಬಿಚ್ಚಿಡುವುದು ಪತಿಗೆ ನೀಡುವ ಮಾನಸಿಕ ಹಿಂಸೆ : ತಮಿಳುನಾಡು ಹೈಕೋರ್ಟ್
ಹಾಗಂತ ಅದೆಷ್ಟು ಮಂದಿ ಇನ್ಸೂರೆನ್ಸ್ ಮಾಡಿಸಿಕೊಂಡಿದ್ದಾರೆ ಹೇಳಿ. ಕಳೆದ ವರ್ಷ ಇನ್ಸೂರೆನ್ಸ್ ಕಟ್ಟಿದ್ದೇವೆ, ಕೈಯಿಂದ ಕಾಸು ಹೋಯ್ತು ಬಿಟ್ರೆ ಮತ್ತೇನೂ ಆಗಿಲ್ಲ ಅನ್ನುವ ಉಡಾಫೆ ಮಾತು ಆಡುವವರೇ ಹೆಚ್ಚು. ಯಾಕಂದ್ರೆ ಅವರಿಗೆ ಇನ್ಸೂರೆನ್ಸ್ ಬಗ್ಗೆ ಮಾಹಿತಿಯೇ ಇರುವುದಿಲ್ಲ.
ಇಂತಹ ಉಡಾಫೆ ಶೂರರಿಗೆ ಪಾಠ ಕಲಿಸಲು ಮುಂದಾಗಿರುವ ರಾಯಚೂರು ಪೊಲೀಸರು ವಿಶಿಷ್ಟ ಇನ್ಸೂರೆನ್ಸ್ ಡ್ರೈವ್ ಒಂದನ್ನು ಪ್ರಾರಂಭಿಸಿದ್ದಾರೆ. ತಪಾಸಣೆ ಸಲುವಾಗಿ ವಾಹನಗಳನ್ನು ಹಿಡಿದಾಗ ಇನ್ಸೂರೆನ್ಸ್ ಇಲ್ಲ ಅನ್ನುವುದು ಗೊತ್ತಾದ್ರೆ ಸ್ಥಳದಲ್ಲೇ ಇನ್ಸೂರೆನ್ಸ್ ಮಾಡಿಸಲಾಗುತ್ತದೆ. ದಂಡದ ಹಣದಲ್ಲೇ ಇನ್ಸೂರೆನ್ಸ್ ಮೊತ್ತವನ್ನು ಪಾವತಿಸಲಾಗುತ್ತದೆ.
ಹಾಗಂತ ಈ ಡ್ರೈವ್ ವಾರಪೂರ್ತಿ ತಿಂಗಳು ಪೂರ್ತಿ ನಡೆಯೋದಿಲ್ಲ. ಈಗಾಗಲೇ ಒಂದೆರೆಡು ದಿನ ಡ್ರೈವ್ ನಡೆಸಲಾಗಿದ್ದು, ಜನರಲ್ಲಿ ಇನ್ಸೂರೆನ್ಸ್ ಬಗ್ಗೆ ಜಾಗೃತಿ ಮೂಡಿಸಲಾಗಿದೆ. ಸಾವಿರ ದಂಡ ಕಟ್ಟುವ ಬದಲು ಸಾವಿರ ರೂಪಾಯಿಯಲ್ಲೇ ಇನ್ಸೂರೆನ್ಸ್ ಮಾಡಿಸಿ ಎಂದು ಸವಾರರಿಗೆ ಹೇಳಿದ್ದೇವೆ. ಹೀಗಾಗಿ ಇನ್ನು ಮುಂದೆ ಇನ್ಸೂರೆನ್ಸ್ ಇಲ್ಲ ಅಂದ್ರೆ ದಂಡ ಹಾಕುತ್ತೇವೆ ಅಂತಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಹೇಳಿದ್ದಾರೆ.
ಇದನ್ನೂ ಓದಿ : theft arrest : ಕಳ್ಳ ಪತಿ : ಪತ್ನಿ ಅತ್ತೆಯಿಂದ ಮಾಲು ವಿಲೇವಾರಿ : ಕಳ್ಳರ ಕುಟುಂಬ
Discussion about this post